Karnataka News

*ಬೆಳಗಾವಿಯಲ್ಲಿ ಮತ್ತೊಂದು ಘೋರ ಘಟನೆ: ಕುಡುಕ ಮಗನನ್ನೇ ಹತ್ಯೆಗೈದ ತಂದೆ*

ಪ್ರಗತಿವಾಹಿನಿ ಸುದ್ದಿ: ಕುಡಿದು ಬಂದು ಗಲಾಟೆ ಮಾಡುತ್ತಿದ್ದ ಮಗನನ್ನು ತಂದೆ ಹಾಗೂ ಅಣ್ಣ ಸೇರಿ ಹತ್ಯೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಚಿಕ್ಕನಂದಿಹಳ್ಳಿಯಲ್ಲಿ ನಡೆದಿದೆ.

ಮಂಜುನಾಥ್ ಉಳ್ಳಾಗಡ್ಡಿ (25) ಕೊಲೆಯಾಗಿರುವ ಯುವಕ. ತಂದೆ ಹಾಗೂ ಅಣ್ಣನೇ ಮಂಜುನಾಥ್ ನನ್ನು ಕೊಲೆ ಮಾಡಿದ್ದಾರೆ. ಮಾರ್ಚ್ 12ರಂದು ಮಂಜುನಾಥ್ ಮದುವೆ ನಿಗದಿಯಾಗಿತ್ತು. ತಮ್ಮನ ಮದುವೆಗೆಂದು ಸೇನೆಯಲ್ಲಿದ್ದ ಅಣ್ಣ ರಜೆ ಮೇಲೆ ಬಂದಿದ್ದ.

ತಡರಾತ್ರಿ ಕುಡಿದು ಬಂದ ಮಂಜುನಾಥ್ ಕಿರಿಕಿರಿ ಮಾಡುತ್ತಿದ್ದ. ಈ ವೇಳೆ ಗಲಾಟೆಯಾಗಿದ್ದು, ತಂದೆ ಹಾಗೂ ಅಣ್ಣ ನಾಗಪ್ಪ ಹಾಗೂ ಗುರಪ್ಪ ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಿದ್ದಾರೆ.

ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button