Kannada NewsKarnataka News

*ಗಾಂಜಾ ಮತ್ತಿನಲ್ಲಿ 10ಕ್ಕೂ ಹೆಚ್ಚು ಬೈಕ್ ಗಳಿಗೆ ಗುದ್ದಿದ ಕಾರ್ ಚಾಲಕ*

ಪ್ರಗತಿವಾಹಿನಿ ಸುದ್ದಿ: ಗಾಂಜಾ ಮತ್ತಿನಲ್ಲಿ 10 ಕ್ಕೂ ಹೆಚ್ಚು ಬೈಕ್ ಗಳಿಗೆ ಕಾರ್ ಚಾಲಕ ಗುದ್ದಿರುವ ಘಟನೆ ಕೊಪ್ಪಳ ನಗರದ ಸಿಂಪಿ ಲಿಂಗಣ್ಣ ರಸ್ತೆಯಲ್ಲಿ ನಡೆದಿದೆ. 

ವೇಗವಾಗಿ ಕಾರ್ ಚಲಾಯಿಸಿ ಬಂದ ಕಾರ್ ಚಾಲಕ ಅರ್ಚನಾ ಬಾರ್ ಆ್ಯಂಡ್ ರೆಸ್ಟೋರೆಂಟ್ ಮುಂದೆ  ನಿಲ್ಲಿಸಿದ್ದ ಬೈಕ್ ಗಳಿಗೆ ಗುದ್ದಿದ್ದಾನೆ.‌ ಈ ಘಟನೆಯಲ್ಲಿ 10 ಕ್ಕೂ ಹೆಚ್ಚು ಬೈಕ್ ಗಳಿಗೆ ಹಾನಿಯಾಗಿದೆ‌. ಈ ವೇಳೆ ಕಾರ್ ಮಾಲೀಕನೊಂದಿಗೆ  ಬೈಕ್ ಸವಾರರು ವಾಗ್ವಾದ ಮಾಡಿದ್ದಾರೆ. ಗಾಂಜಾ ಮತ್ತಿನಲ್ಲಿ ಕಾರ್ ಚಲಾಯಿಸಿ ಕಾರ್ ಗೆ ಗುದ್ದಿದ್ದಾನೆ ಎಂದು ವಾಹನ ಸವಾರರು ಆರೋಪಿಸಿದ್ದಾರೆ. 

Home add -Advt

ಕಾರ್ ಚಾಲಕ ವಿಶ್ವಾಸ ಎಂದು ಗುರುತಿಸಲಾಗಿದ್ದು, ಆತನನ್ನು ನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.‌ ಘಟನೆ ಮಾಹಿತಿ ಪಡೆದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಅರಸಿದ್ದಿ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

Related Articles

Back to top button