Belagavi NewsBelgaum News

*ನಿವೃತ್ತ ಪೊಲೀಸ್ ಅಧಿಕಾರಿಯ ಮನೆಗೆ ಕನ್ನ ಹಾಕಿದ ಖದಿಮರು*

ಪ್ರಗತಿವಾಹಿನಿ ಸುದ್ದಿ: ನಿವೃತ್ತ ಪೊಲೀಸ್ ಅಧಿಕಾರಿಯ ಮನೆಯಲ್ಲೆ ಕಳ್ಳರು ತಮ್ಮ ಕೈಚಳಕ ತೊರಿಸಿರುವ ಘಟನೆ ಬೆಳಗಾವಿಯ ಮಹಾಂತೇಶ ನಗರದಲ್ಲಿ ಭಾನುವಾರ ನಡೆದಿದೆ. 

ನಿವೃತ್ತ ಎ.ಎಸ್.ಐ ಮಹಾದೇವ ಬಸೋದಿ ಎಂಬುವವರು ತಮ್ಮ ಕುಟುಂಬ ಸಮೇತ ಬೇರೆಡೆ ಹೋದಾಗ ಸಮಯ ಸಾಧಿಸಿ ಕಳ್ಳರು ಕೈಚಳಕ ತೋರಿಸಿದ್ದಾರೆ. ಮನೆಯ ಬೀಗ ಮುರಿದು ಮನೆಯಲ್ಲಿದ್ದ 15 ತೊಲೆಯ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.

Related Articles

Back to top button