Kannada NewsKarnataka News

*ಕಣ್ಣಿಗೆ ಖಾರದ ಪುಡಿ ಎರಚಿ 32 ಲಕ್ಷ ದರೋಡೆ ಪ್ರಕರಣ: ಚಾಲಕನ ಕೈವಾಡ ಬಯಲು*

ಪ್ರಗತಿವಾಹಿನಿ ಸುದ್ದಿ: ಕಣ್ಣಿಗೆ ಖಾರದ ಪುಡಿ ಎರಚಿ 32 ಲಕ್ಷ ರೂ. ಹಣವನ್ನು ದರೋಡೆ ಮಾಡಿದ್ದ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ.‌

Home add -Advt

ಇತ್ತೀಚೆಗೆ ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದ ಹೊರವಲಯದಲ್ಲಿ ಕ್ಯಾಂಟರ್‌ ಅಡ್ಡಗಟ್ಟಿ, ಚಾಲಕ ಹಾಗೂ ನಿರ್ವಾಹಕನ ಮೇಲೆ ಹಲ್ಲೆ ನಡೆಸಿ 32ಲಕ್ಷ ದರೋಡೆ ಮಾಡಿದರು. ಈ ಪ್ರಕರಣದಲ್ಲಿ ಕ್ಯಾಂಟರ್‌ ಚಾಲಕನ ಕೈವಾಡವಿರುವುದು ಬೆಳಕಿಗೆ ಬಂದಿದೆ.

ಮೇ 18ರಂದು ಜೇವರ್ಗಿಯ ಹತ್ತಿ ವ್ಯಾಪಾರಿ ಚಂದ್ರಕಾಂತ್ ಕುಂಬಾರ ಎಂಬವರಿಗೆ ಸೇರಿದ ಹತ್ತಿಯನ್ನು ಧಾರವಾಡದಲ್ಲಿ ಮಾರಾಟ ಮಾಡಿ ವಾಪಸ್ ಹಣ ತೆಗೆದುಕೊಂಡು ಹೋಗುತ್ತಿದ್ದ ವೇಳೆ ಈ ದರೋಡೆ ನಡೆದಿತ್ತು. ವಿಚಾರಣೆ ವೇಳೆ ಪ್ರಕರಣಕ್ಕೆ ಟ್ವಿಸ್ಟ್‌ ಸಿಕ್ಕಿದೆ. ಚಾಲಕನೂ ಕೃತ್ಯದಲ್ಲಿ ಭಾಗಿಯಾಗಿದ್ದಾನೆ ಎಂಬುದು ತಿಳಿದುಬಂದಿದೆ. ಕ್ಯಾಂಟರ್‌ ಚಾಲಕನನ್ನು ವಿಚಾರಣೆಗೆ ಒಳಪಡಿಸಿದಾಗ ದರೋಡೆ ಹಿಂದಿನ ಸಂಚು ಬಯಲಾಗಿದೆ.

ಈ ಸಂಬಂಧ ವಿಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿ,‌ ಬಂಧಿತರಿಂದ ಕೃತ್ಯಕ್ಕೆ ಬಳಸಿದ ವಾಹನ, ಬಡಿಗೆ, ರಾಡ್ ಹಾಗೂ 31,04,364 ರೂ. ಹಣವನ್ನು ವಶಕ್ಕೆ ಪಡೆದಿದ್ದಾರೆ.


https://pragativahini.com/cms-video-conversation-with-district-collectors-dc-nitesh-patil-instructs-for-adequate-distribution-of-sowing-seed-manure/

Related Articles

Back to top button