Latest

ವಿದ್ಯಾರ್ಥಿನಿಗೆ ಪ್ರಪೋಸ್ ಮಾಡಲು ಹೋಗಿ ಬಸ್ಕಿ ಹೊಡೆಯುವ ಶಿಕ್ಷೆ ಅನುಭವಿಸಿದ ಶಿಕ್ಷಕ

ಪ್ರಗತಿವಾಹಿನಿ ಸುದ್ದಿ, ಪಾಟ್ನಾ: ತಾನು ಕಲಿಸುತ್ತಿದ್ದ ವಿದ್ಯಾರ್ಥಿನಿಗೆ ಪ್ರಪೋಸ್ ಮಾಡಲು ಹೋದ ಶಿಕ್ಷಕನೊಬ್ಬ ಗ್ರಾಮಸ್ಥರಿಂದ ಬಸ್ಕಿ ಹೊಡೆಯುವ ಶಿಕ್ಷೆ ಅನುಭವಿಸಿದ್ದಾನೆ.

ಬಿಹಾರ ರಾಜ್ಯದ ಗ್ರಾಮವೊಂದರ ಶಿಕ್ಷಕ ತನ್ನ ವಿದ್ಯಾರ್ಥಿನಿಗೆ ಟ್ಯೂಷನ್ ಕೂಡ ನೀಡುತ್ತಿದ್ದ. ಆದರೆ ಶಿಕ್ಷಕನಿಗೆ ಅದ್ಯಾವ ಪ್ರೀತಿ ವಿದ್ಯಾರ್ಥಿನಿ ಮೇಲೆ ವಕ್ಕರಿಸಿಕೊಂಡಿತೋ ಗೊತ್ತಿಲ್ಲ. ಒಂದೇ ಸಮನೆ ಆಕೆಯ ಬಳಿ ಪ್ರೇಮ ನಿವೇದನೆಗೆ ಇಳಿದ.

ಆದರೆ ಇದಕ್ಕೊಪ್ಪದ ವಿದ್ಯಾರ್ಥಿನಿ ಶಿಕ್ಷಕನ ಪ್ರಪೋಸಲ್ ತಿರಸ್ಕರಿಸಿದಳು. ಇದರಿಂದಾಗಿ ಶಿಕ್ಷಕ ವಿದ್ಯಾರ್ಥಿನಿಗೆ ಕಿರುಕುಳ ನೀಡಲು ಆರಂಭಿಸಿದ.

ಈ ವಿಷಯ ತಿಳಿದ ಗ್ರಾಮಸ್ಥರು ಶಿಕ್ಷಕನಿಗೆ ಸಾರ್ವಜನಿಕವಾಗಿ ಬಸ್ಕಿ ಹೊಡೆಯುವ ಶಿಕ್ಷೆ ನೀಡಿದ್ದಾರೆ.  ಇಷ್ಟಕ್ಕೇ ಬಿಡದೆ ಇದನ್ನು ವಿಡಿಯೊ ಮಾಡಿದ್ದಾರೆ. ಶಿಕ್ಷಕ ಅಳುತ್ತ ಕಿವಿ ಹಿಡಿದುಕೊಂಡು ಬಸ್ಕಿ ಹೊಡೆಯುವ ವಿಡಿಯೊ ಈಗ ವೈರಲ್ ಆಗಿದೆ. 

ಮತ್ತೆ ಎರಡು ದಿನ ಭಾರಿ ಮಳೆ; ಬೆಂಗಳೂರಿನಲ್ಲಿ ಯೆಲ್ಲೋ ಅಲರ್ಟ್ ಘೋಷಣೆ

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button