Film & Entertainment
*ರಾಷ್ಟ್ರಪ್ರಶಸ್ತಿ ವಿಜೇತ ಬಾಲನಟನಿಗೆ ಭೀಕರ ಅಪಘಾತ: ಆಸ್ಪತ್ರೆಗೆ ದಾಖಲು*

ಪ್ರಗತಿವಾಹಿನಿ ಸುದ್ದಿ: ರಾಷ್ಟ್ರಪ್ರಶಸ್ತಿ ವಿಜೇತ ಬಾಲನಟ ಮಾ.ರೋಹಿತ್ ಗೆ ಭೀಕರ ಅಪಘಾತಕ್ಕಿಡಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ.
ಹೊಸಹಳ್ಳಿ ಸಮೀಪದ ಆರಾಧಾನಾ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಮಾ.ರೋಹಿತ್ ಹಾಗೂ ಅವರ ತಾಯಿಯನ್ನು ಕಾಲೇಜು ಮುಖ್ಯಸ್ಥರು ಕಾರಿನಲ್ಲಿ ಕರೆದುಕೊಂದು ಬರುತ್ತಿದ್ದಗ ಕಾರು ಹಾಗೂ ಕೇರಳ ಮೂಲದ ಪ್ರವಾಸಿ ಬಸ್ ನಡುವೆ ಅಪಘಾತವಾಗಿದೆ. ಈ ವೇಳೆ ರೋಹಿತ್ ದವಡೆ ಮುರಿದಿದೆ. ರೋಹಿತ್ ತಾಯಿ ಛಾಯಾಲಕ್ಷ್ಮೀ ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ.
ಅಪಘಾತದಲ್ಲಿ ಕಾಲೇಜು ಉಪನ್ಯಾಸಕ ಕೇಶವ್ ಹಾಗೂ ಶ್ರೀಕಾಂತ್ ಎಂಬುವವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ರೋಹಿತ್ ದವಡೆ ಮುರಿದಿದ್ದು, ಶಸ್ತ್ರಚಿಕಿತ್ಸೆ ಮಾಡಲಾಗಿದೆ. 8 ತಿಂಗಳು ದ್ರವ ಆಹಾರ ಸೇವಿಸುವಂತೆ ವೈದ್ಯರು ಸಲೆಹೆ ನೀಡಿದ್ದಾರೆ. ಅಪಘಾತದ ಬಗ್ಗೆ ರೋಹಿತ್ ಅಜ್ಜಿ ಶಕುಂತಲಾ ಮಾಹಿತಿ ನೀಡಿದ್ದಾರೆ. ರೋಹಿತ್ ನಟ ದರ್ಶನ್ ಅಭಿನಯದ ಕಾಟೇರ ಚಿತ್ರದಲ್ಲಿಯೂ ಬಾಲನಟನಾಗಿ ಅಭಿನಯಿಸಿದ್ದಾರೆ.




