Belagavi NewsBelgaum NewsLatest

*ಮಿರಜ್-ಬೆಳಗಾವಿ ವಿಶೇಷ ರೈಲುಗಳ ವೇಳೆಯಲ್ಲಿ ಬದಲಾವಣೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನೈಋತ್ಯ ರೈಲ್ವೆಯು ರೈಲು ಸಂಖ್ಯೆ 07302 ಮಿರಜ್-ಬೆಳಗಾವಿ ಕಾಯ್ದಿರಿಸದ ವಿಶೇಷ ಮತ್ತು ರೈಲು ಸಂಖ್ಯೆ 07304 ಮಿರಜ್-ಬೆಳಗಾವಿ ಕಾಯ್ದಿರಿಸದ ವಿಶೇಷ ರೈಲುಗಳು ಬೆಳಗಾವಿ ನಿಲ್ದಾಣಕ್ಕೆ ಆಗಮನದ ಸಮಯವನ್ನು 2025ರ ಜೂನ್ 19 ರಿಂದ ಪರಿಷ್ಕರಿಸಿದೆ.

ಅದರಂತೆ, ರೈಲು ಸಂಖ್ಯೆ 07302 ಮಿರಜ್ – ಬೆಳಗಾವಿ ಕಾಯ್ದಿರಿಸದ ವಿಶೇಷ ರೈಲು ಬೆಳಗಾವಿಗೆ ಆಗಮಿಸುವ ಸಮಯವನ್ನು ಈಗಿರುವ 12:50 ಗಂಟೆಗಳಿಂದ 13:00 ಗಂಟೆಗಳಿಗೆ ಪರಿಷ್ಕರಿಸಲಾಗಿದೆ. ಅದೇ ರೀತಿ, ರೈಲು ಸಂಖ್ಯೆ 07304 ಮಿರಜ್ – ಬೆಳಗಾವಿ ಕಾಯ್ದಿರಿಸದ ವಿಶೇಷ ರೈಲಿನ ಆಗಮನದ ಸಮಯವನ್ನು ಬೆಳಗಾವಿ ನಿಲ್ದಾಣದಲ್ಲಿ 20:35 ಗಂಟೆಗಳಿಂದ 21:00 ಗಂಟೆಗಳಿಗೆ ಪರಿಷ್ಕರಿಸಲಾಗಿದೆ.

Home add -Advt

ಈ ಎರಡೂ ರೈಲುಗಳ ಮಿರಜ್ ಮತ್ತು ಸಾಂಬ್ರೇ ನಿಲ್ದಾಣಗಳ ನಡುವಿನ ಸಮಯಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

ಬೆಲ್ಲಂಪಲ್ಲಿಯಲ್ಲಿ ರೈಲುಗಳ ನಿಲುಗಡೆ ರದ್ದು

ಸಿಕಂದರಾಬಾದ್ ವಿಭಾಗದ ಬಲ್ಹರ್ಷಾ-ಕಾಜಿಪೇಟೆ ವಿಭಾಗದಲ್ಲಿ ರೆಚ್ನಿ ರೋಡ್ ಮತ್ತು ಬೆಲ್ಲಂಪಲ್ಲಿ ನಿಲ್ದಾಣಗಳ ನಡುವಿನ ಹೊಸ ಮೂರನೇ ಮಾರ್ಗದ ಕಾರ್ಯಾರಂಭಕ್ಕೆ ಸಂಬಂಧಿಸಿದಂತೆ, ಬೆಲ್ಲಂಪಲ್ಲಿ ಯಾರ್ಡ್‌ನಲ್ಲಿ ಎಂಜಿನಿಯರಿಂಗ್ ಕೆಲಸಗಳ ಕಾರಣದಿಂದಾಗಿ ಎರಡು ರೈಲುಗಳಿಗೆ ಬೆಲ್ಲಂಪಲ್ಲಿಯಲ್ಲಿ ನಿಲುಗಡೆ ರದ್ದುಪಡಿಸುವುದಾಗಿ ದಕ್ಷಿಣ ಮಧ್ಯ ರೈಲ್ವೆಯು ತಿಳಿಸಿದೆ.

ಜೂನ್ 21, 2025 ರಂದು ಹುಬ್ಬಳ್ಳಿಯಿಂದ ಪ್ರಾರಂಭವಾಗುವ ರೈಲು ಸಂಖ್ಯೆ 07323 ಎಸ್‌ಎಸ್‌ಎಸ್ ಹುಬ್ಬಳ್ಳಿ – ಬನಾರಸ್ ವೀಕ್ಲಿ ಎಕ್ಸ್‌ಪ್ರೆಸ್ ವಿಶೇಷ ರೈಲು ಬೆಲ್ಲಂಪಲ್ಲಿಯಲ್ಲಿ ನಿಲ್ಲುವುದಿಲ್ಲ. ಪರ್ಯಾಯವಾಗಿ, ಈ ರೈಲು ಸಿರ್‌ಪುರ್ ಕಾಗಜ್‌ನಗರದಲ್ಲಿ ನಿಲುಗಡೆಯನ್ನು ಒದಗಿಸಲಿದೆ.

ಜೂನ್ 21, 2025 ರಂದು ಮೈಸೂರಿನಿಂದ ಪ್ರಾರಂಭವಾಗುವ ರೈಲು ಸಂಖ್ಯೆ 12975 ಮೈಸೂರು – ಜೈಪುರ ದ್ವಿ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು ಬೆಲ್ಲಂಪಲ್ಲಿಯಲ್ಲಿ ನಿಗದಿತ ನಿಲುಗಡೆಯನ್ನು ಸಹ ಇರುವುದಿಲ್ಲ.

Related Articles

Back to top button