
ಪ್ರಗತಿವಾಹಿನಿ ಸುದ್ದಿ: ಗಣೇಶ ಚತುರ್ಥಿಯಂದು ಮಂಗಳಮೂರ್ತಿ ಗಣೇಶನನ್ನು ವಿಶೇಷವಾಗಿ ತಂದು ಪ್ರತಿಷ್ಠಾಪನೆ ಮಾಡಿ, ಪೂಜಿಸಿ, ಆರಾಧಿಸಿ, ಕೊನೆಗೆ ವಿರ್ಸಜನೆ ಮಾಡುತ್ತಾರೆ.
ಗಣಪತಿ ಎಂದರೆ ಗಣಗಳ-ಸಮೂಹಗಳ ಅಧಿಪತಿ; ವಿಶ್ವದ ಎಲ್ಲ ಮಾನವ ಸಮಾಜದ ಒಡೆಯ; ಸರ್ವಗುಣಗಳಧಾರಿ, ಸರ್ವವಿದ್ಯಾ-ಪಾರಂಗತ. ಸುಮುಖನೆಂದರೆ ಸುಂದರವಾದ ಮುಖವನ್ನು ಹೊಂದಿರುವವನು; ಉಮಾಪುತ್ರನೆಂದರೆ ಪಾರ್ವತಿ ಮಗ; ಹರಸುತನೆಂದರೆ ಶಿವನ ಮಗ; ಶೂರ್ಪಕರ್ಣನೆಂದರೆ ದೊಡ್ಡ ಕಿವಿಗಳನ್ನು ಹೊಂದಿರುವವನು; ವಕ್ರತುಂಡನೆಂದರೆ ಬಾಗಿದ ಸೊಂಡಿಲನ್ನು ಹೊಂದಿರುವವನು; ಗುಹಾಗ್ರಜನೆಂದರೆ ಭಾರವಾದ ಧ್ವನಿಯನ್ನು ಹೊಂದಿರುವವನು; ಏಕದಂತನೆಂದರೆ ಒಂದು ದಂತವನ್ನು ಹೊಂದಿರುವವನು; ಹೇರಂಭನೆಂದರೆ ತಾಯಿಯಿಂದ ಪ್ರೀತಿಸಲ್ಪಟ್ಟವನು; ಚತುರ್ಹೋತ್ರನೆಂದರೆ ನಾಲ್ಕು ಕೈಗಳನ್ನು ಹೊಂದಿರುವವನು; ಸರ್ವೇಶ್ವರನೆಂದರೆ ಬ್ರಹ್ಮಾಂಡದ ಅಧಿಪತಿ; ವಿಕಟನೆಂದರೆ ಶಕ್ತಿಶಾಲಿ; ಹೇಮತುಂಡನೆಂದರೆ ಹಿಮಾಲಯದಲ್ಲಿ ಉಳಿದುಕೊಂಡವನು; ವಿನಾಯಕನೆಂದರೆ ಉತ್ತಮವಾಗಿ ಮುನ್ನಡೆಸುವ ಸಾಮಥ್ರ್ಯ ಹೊಂದಿರುವವನು; ಕಪಿಲನೆಂದರೆ ಚಿನ್ನದ ಬಣ್ಣದಲ್ಲಿರುವವನು; ವಟವನೆಂದರೆ ಬಾಲಚಂದ್ರರನ ಚಿಹ್ನೆಯನ್ನು ಹೊಂದಿರುವವನು; ಸುರಾಗ್ರಜನೆಂದರೆ ಸ್ವರ್ಗದ ಅಧಿಪತಿ; ಸಿದ್ಧಿವಿನಾಯಕನೆಂದರೆ ಯಶಸ್ಸಿನ ಶ್ರೇಷ್ಠತೆಯನ್ನು ಹೊಂದಿರುವವನು. ಗಣಪತಿಯು ಸರ್ವರ ಮಂಗಳಕಾರಿ ಆಗಿರುವುದರಿಂದ ಅವನಿಗೆ ಮಂಗಳಮೂರ್ತಿ ಎಂದು ಕರೆಯುತ್ತಾರೆ; ವಿಘ್ನಗಳನ್ನು ವಿನಾಶ ಮಾಡುವುದರಿಂದ ವಿಘ್ನೇಶ್ವರನೆಂದು ಕರೆಯುತ್ತಾರೆ.
ದು:ಖವನ್ನು ಹರಣ ಮಾಡಿ ಸುಖವನ್ನು ಕೊಡುವುದರಿಂದ ದು:ಖಹರ-ಸುಖಕರನೆಂದು ಹೇಳಲಾಗುತ್ತದೆ. ಲಂಬೋದರನೆಂದರೆ ವಿಶಾಲ ಹೊಟ್ಟೆ ಅರ್ಥಾತ್ ಎಲ್ಲರ ತಪ್ಪುಗಳನ್ನು ತನ್ನ ಹೊಟ್ಟೆಗೆ ಹಾಕಿ ಕ್ಷಮಿಸುವವನು ಎಂದರ್ಥ. ಮೂಷಕವಾಹನನೆಂಬುದು ಮನಸ್ಸು-ಬುದ್ಧಿಯ ಮೇಲೆ ನಿಯಂತ್ರಣ ಮಾಡುವ ಸಂಕೇತವಾಗಿದೆ. ಗಜಮುಖದ ಪ್ರತೀಕಾರ್ಥ ಬಲಶಾಲಿ ಆಗಿರುವುದಾಗಿದೆ. ಮೋದಕಪ್ರಿಯನೆಂದರೆ ಸ್ನೇಹ ಮತ್ತು ಮಧುರತೆಯ ಗುಣವನ್ನು ಹೊಂದಿರುವವನು ಎಂದರ್ಥ. ಹೀಗೆ ಅವನ ಅನೇಕ ನಾಮಗಳು ಗುಣಗಳವಾಚಕಗಳಾಗಿವೆ.
ಗಣಪತಿಗೆ 11, 21, 32, 10, 1008 ನಾಮಗಳಿವೆ. ಗಣೇಶ ಪುರಾಣ, ಮುದ್ಗಲ್ ಪುರಾಣ, ಗಣಪತಿ ಅಥರ್ವಶೀರ್ಸ, ಶಿವಪುರಾಣ ಇನ್ನೂ ಮುಂತಾದ ಶಾಸ್ತ್ರಗಳಲ್ಲಿ ಅವನ ಮಹಿಮೆಯನ್ನು ಉಲ್ಲೇಖಿಸಲಾಗಿದೆ.
ಗಣೇಶನ ಅಷ್ಟವಿನಾಯಕ ಮಂದಿರಗಳು ಸುಪ್ರಸಿದ್ಧವಾಗಿದೆ. ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಅಷ್ಟವಿನಾಯಕ ದರ್ಶನಯಾತ್ರೆ ಮಾಡುತ್ತಾರೆ. ಮುಖ್ಯವಾಗಿ ಇದರಲ್ಲಿ ಅನೇಕ ಸ್ಥಳಗಳಲ್ಲಿ ಉದ್ಭವ ಮೂರ್ತಿಗಳಿವೆ. ಮೋರೆಗಾವ್ನಲ್ಲಿ ಮೇರೆಶ್ವರ, ಥೇಯುರ್ದಲ್ಲಿ ಚಿಂತಾಮಣಿ, ಸಿದ್ಧಟೇಕದ ಸಿದ್ಧಿವಿನಾಯಕ, ರಾಂಜಣಗಾವ್ದ ಮಹಾಗಣಪತಿ, ಓಝರ್ನಲ್ಲಿ ವಿಘ್ನೇಶ್ವರ, ಲೆಣ್ಯಾದ್ರ್ರಿಯ ಗಿರಿಜಾತ್ಮಜ, ಮಹಾಡದ ವರದ ವಿನಾಯಕ ಮತ್ತು ಪಾಲಿಯ ಬಲ್ಲಾಳೇಶ್ವರ. ಈ ರೀತಿ ಪೂನಾ ಜಿಲ್ಲೆಯಲ್ಲಿ ಐದು, ರೈಗಡ್ ಜಿಲ್ಲೆಯಲ್ಲಿ ಎರಡು ಮತ್ತು ಅಹಮದ್ನಗರ ಜಿಲ್ಲೆಯಲ್ಲಿ ಒಂದು ತೀರ್ಥಸ್ಥಾನ ಇದೆ.
ಗಣೇಶನ ಮೂರ್ತಿಯು ಮಣ್ಣಿನಿಂದ ತಯಾರಿಸಿ, ಬಣ್ಣವನ್ನು ಹಚ್ಚಿ ಶೃಂಗಾರ ಮಾಡಿ ಪೂಜೆ ಮಾಡುವರು. ಕೆಲವು ದಿನಗಳ ನಂತರ ಗಣಪನ ವಿರ್ಸಜನೆ ಮಾಡುವರು. ಇದರ ನಿಜವಾದ ಅರ್ಥ ಮಾನವನ ವಿನಾಶಿ ಶರೀರವು ಪಂಚತತ್ವಗಳಿಂದ ತಯಾರಾಗಿದೆ. ನಮ್ಮನ್ನು ನಾವು ಆತ್ಮರೆಂದು, ಜಾತಿ ಇಲ್ಲದ ಜ್ಯೋತಿ ಎಂದು ತಿಳಿದು ದಿವ್ಯಗುಣಗಳ ಶೃಂಗಾರ ಮಾಡಿಕೊಂಡಾಗ ಪೂಜೆಗೆ ಯೋಗ್ಯರಾಗುತ್ತೇವೆ. ದೇಹಾಭಿಮಾನದ ಮೂಲವಾಗಿರುವ ಪಂಚವಿಕಾರಗಳ ತ್ಯಾಗದಿಂದ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬಹುದು. ಬ್ರಹ್ಮಚಾರಿ ವಿನಾಯಕನಿಗೆ ಇಬ್ಬರು ಪತ್ನಿಯರು – ಸಿದ್ಧಿ ಮತ್ತು ಬುದ್ಧಿ ಎಂದು ತೋರಿಸಲಾಗುತ್ತದೆ. ಇದರ ಅರ್ಥ ಪ್ರವೃತ್ತಿ ಮಾರ್ಗದಲ್ಲಿದ್ದರೂ ನಾವು ಪವಿತ್ರತೆಯ ಬಲದಿಂದ ಸಿದ್ಧಿ ಮತ್ತು ಬುದ್ಧಿಯನ್ನು ಪ್ರಾಪ್ತಿ ಮಾಡಿಕೊಳ್ಳಬಹುದು.
ಸದ್ಗುಣಗಳ ಮೂರ್ತಿ, ಗುಣಗಳ ಗಣಿ, ದಿವ್ಯ ಬುದ್ಧಿದಾತ ಗಣೇಶನಾಗಿರುವುದರಿಂದ ಪ್ರತಿಯೊಂದು ಕಾರ್ಯವು ಸೂಸುತ್ರವಾಗಲು, ಪ್ರಾರಂಭದಲ್ಲಿ ಗಣೇಶನ ಪೂಜೆಯನ್ನು ಮಾಡುವ ವಾಡಿಕೆ ಇದೆ. ಪೂಜೆಯ ಜೊತೆಗೆ ನಾವು ನಮ್ಮ ಜೀವನದಲ್ಲಿ ಗಣೇಶನ ವಿಶೇಷತೆಗಳನ್ನು ಅಳವಡಿಸಿಕೊಂಡರೆ ನಮ್ಮ ಜೀವನ ಸಾರ್ಥಕವಾಗುವುದು. ಅದಕ್ಕೆ ಆತ್ಮಜ್ಞಾನದ ಅವಶ್ಯಕತೆ ಇದೆ. ಇಲ್ಲಿ ಗಣಪತಿ ವ್ಯಕ್ತಿವಾಚಕ ಶಬ್ದವಲ್ಲ, ಅದು ಗುಣವಾಚಕ ಶಬ್ದವಾಗಿದೆ. ಆತ್ಮವು ಶರೀರ ಬಿಟ್ಟು ಹೋದ ಮೇಲೆ ದೇಹವು ಪಂಚ ತತ್ವಗಳಲ್ಲಿ ವಿಲೀನವಾಗುತ್ತದೆ. ನಮ್ಮ ಜೀವನವು ಗಣಪತಿಯಂತೆ ನಾಲ್ಕು ದಿನಗಳ ಬಾಳಾಗಿದೆ.
ಆದ್ದರಿಂದ ಅನೇಕ ಸಮಸ್ಯೆಗಳು, ಬೆಲೆ ಏರಿಕೆ, ಪ್ರಾಕೃತಿಕ ವಿಕೋಪಗಳ ಸಂಕಷ್ಟದ ಸಮಯದಲ್ಲಿ ಗಣೇಶನ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳೋಣ. ಸಮೀಪದ ಈಶ್ವರೀಯ ವಿಶ್ವ ವಿದ್ಯಾಲಯಕ್ಕೆ ಹೋಗಿ ನಿರಾಕಾರ ಪರಮಾತ್ಮನು ತಿಳಿಸುವ ಸತ್ಯ ಜ್ಞಾನದ ಆಧಾರದಿಂದ ಹಬ್ಬದ ಮಹತ್ವವನ್ನು ಅರಿತುಕೊಳ್ಳೋಣ.
ವಕ್ರ ತುಂಡ ಮಹಾಕಾಯ ಸೂರ್ಯ ಕೋಟಿ ಸಮಪ್ರಭ!
ನಿರ್ವಿಘ್ನಂ ಕುರುಮೇ ದೇವ ಸರ್ವ ಕಾರ್ಯೇಷು ಸರ್ವದ!!
ಗಣಪತಿಯ ಅನೇಕ ಅವತಾರಗಳು ಇವೆ. ಒಟ್ಟಾರೆಯಾಗಿ ಹೇಳಬೇಕೆಂದರೆ 32 ಬಗೆಯ ಅವತಾರಗಳಲ್ಲಿ ಗಣಪತಿ ಕಾಣಿಸಿಕೊಂಡಿದ್ದಾನೆ. ಇವುಗಳಲ್ಲಿ ಕೆಲವು ಗಣಪತಿಯ ಜೀವನದ ವಿವಿಧಕಾಲ ಘಟ್ಟಗಳನ್ನು ಪ್ರತಿನಿಧಿಸಿದರೆ, ಇನ್ನು ಕೆಲವು ಲೋಕ ಕಲ್ಯಾಣಾರ್ಥವಾಗಿ ತಳೆದ ಅವತಾರಗಳಾಗಿದೆ.
- ಬಾಲ ಗಣಪತಿ ಹೆಸರೆ ಸೂಚಿಸುವಂತೆ, ಗಣಪತಿಯ ಎಳೆಯ ಮಗುವಿನ ರೂಪ. ಇದರಲ್ಲಿ ಸ್ವಾಮಿಯ ತನ್ನ ಬಾಲ್ಯದ ಸುಂದರವಾದ ಮತ್ತು ಮುದ್ದಾದ ರೂಪವಾಗಿದೆ.
- ತರುಣ ಗಣಪತಿ ಗಣಪತಿಯ ತಾರುಣ್ಯವನ್ನು ಪ್ರತಿನಿಧಿಸುವ ರೂಪವಾಗಿದೆ. ಇದು 8 ಕೈಗಳನ್ನು ಮತ್ತು ಮುರಿದ ದಂತವನ್ನು ಹೊಂದಿರುತ್ತದೆ.
- ಭಕ್ತಿ ಗಣಪತಿ ಎಂಬುದು ಸುಗ್ಗಿಯ ಅವಧಿಯಲ್ಲಿ ರೈತರಿಂದ ಪೂಜಿಸಲ್ಪಡುವ ಗಣಪತಿ ಅವತಾರವಾಗಿದೆ. ಈ ಗಣೇಶನ ಕೈಯಲ್ಲಿ ಬಾಳೆಹಣ್ಣು ಮತ್ತು ತೆಂಗಿನಕಾಯಿ ಇರುತ್ತದೆ.
- ವೀರ ಗಣಪತಿಯ ಅವತಾರದಲ್ಲಿ ಗಣಪತಿಯ ಆಯುಧಗಳನ್ನು 16 ಕೈಗಳು ಇರುತ್ತದೆ. ಗಣಪತಿಯ ಈ ‘ವೀರ’ ಅವತಾರವು ಯುದ್ಧಕ್ಕೆ ಸನ್ನದ್ದವಾಗಿರುವ ರೀತಿಯಲ್ಲಿ ಕಾಣಿಸುತ್ತದೆ.
- ಶಕ್ತಿ ಗಣಪತಿಯ ಅವತಾರದಲ್ಲಿ ಗಣಪತಿಯ ತೊಡೆಯ ಮೇಲೆ ಸ್ವಾಮಿಯ ಒಬ್ಬ ಪತ್ನಿಯು ಹೂಮಾಲೆಯನ್ನು ಹೀಡಿದು ಕುಳಿತಿರುತ್ತಾಳೆ. ಈತನ ಕುಟುಂಬವನ್ನು ಕಾಪಾಡುವ ದೇವರು ಎಂದು ಪೂಜಿಸಲಾಗುತ್ತದೆ.
- ದ್ವಿಜ ಗಣಪತಿ ದ್ವಿಜ ಎಂದರೆ ಎರಡು ಬಾರಿ ಜನಿಸಿದವನು ಎಂದರ್ದ. ಗಣೇಶನು ನಿಜವಾಗಿಯು ಎರಡು ಬಾರಿ ಜನಿಸಿದವನು. ಮೊದಲು ಜನಿಸಿದ ನುಂತರ ಕೊಲ್ಲಲ್ಪಟ್ಟು ಆ ಮೇಲೆ ಪುನ: ಜೀವವನ್ನು ಪಡೆದವನು. ಈ ಅವತಾರದಲ್ಲಿ ಗಣಪತಿಗೆ 4 ತಲೆಗಳು ಇವೆ.
- ಸಿದ್ಧಿ ಗಣಪತಿಯನ್ನು ಯಶಸ್ಸು ಮತ್ತು ಸಂಪತ್ತಿನ ಸಲವಾಗಿ ಪೂಜಿಸಲಾಗುತ್ತದೆ. ಈ ಗಣಪತಿಯ ಮೂರ್ತಿಯು ಹಳದಿ ಬಣ್ಣದಲ್ಲಿರುತ್ತದೆ.
- ಉಚ್ಚಿಷ್ಟ ಗಣಪತಿ ಈ ಗಣಪತಿಯು ಸಹ ಹಲವು ಕೈಗಳಿಂದ ಸುಂದರವಾಗಿ ಕಾಣುತ್ತಾನೆ.ತಿಳಿ ನೀಲಿ ಬಣ್ನದ ಈ ಗಣಪತಿಯು 6 ಕೈಗಳು ಹೊಂದಿದ್ದು ಕೈಯಲ್ಲಿ ವೀಣೆಯಂತಹ ಸಂಗಿತ ವಾದ್ಯಗಳನ್ನು ಹಿಡಿದಿರುತ್ತಾನೆ.
- ವಿಘ್ನ ಗಣಪತಿ ಗಣಪತಿಯನ್ನು ವಿಘ್ನೇಶ್ವರ ವಿಘ್ನನಾಶಕ ಎಂದು ಸಹ ಕರೆಯುತ್ತಾರೆ. ಚಿನ್ನದ ಬಣ್ಣದ ಈ ಗಣಪತಿಯ ವಿಗ್ರಹವು ನಿಮಗೆ ಎದರಾಗುವ ಎಲ್ಲಾ ಕಂಟಕಗಳನ್ನು ನಿವಾರಿಸುತ್ತದೆ.
- ಕ್ಷಿಪ್ರ ಗಣಪತಿ ಕೆಂಪು ವರ್ಣದ ಈ ಗಣಪತಿಯ ಹೆಸರೇ ಸುಚಿಸುವಂತೆ ಕಾರ್ಯಗಳನ್ನು ಕ್ಷಿಪ್ರವಾಗಿ ಸಿದ್ಧಿಸಿಕೊಳ್ಳಲು ನೆರವಾಗುತ್ತಾನೆ.
- ಹೇರಂಬ ಗಣಪತಿಯು ದೀನರನ್ನು ಉದ್ಧಾರ ಮಾಡಲು ಅವತರಿಸಿದ್ದಾನೆ. ಈತನಿಗೆ 5 ತಲೆಗಳು ಇದ್ದು ನೆಗೆಯಲು ಸಿದ್ಧವಾಗಿರುವ ಸಿಂಹದ ವಾಹನವನ್ನು ಎರಿರುವ ಅವತಾರ ಇದಾಗಿದೆ.
- ಲಕ್ಷ್ಮೀ ಗಣಪತಿ ಯನ್ನು ಸಹೋದರಿ ಸಹೋದರಿಯರಂತೆ ಕಾಣಲಾಗುತ್ತದೆ. ಚಿನ್ನದ ಬಣ್ಣದ ಈ ಗಣಪತಿಯು ಹಣ ಮತ್ತು ಐಶ್ವರ್ಯಗಳ ಸಂಕೇತವಾಗಿ ಪೂಜಿಸಲಾಗುತ್ತದೆ.
- ಮಹಾಗಣಪತಿ ಮಹಾ ಎಂಬ ಮಾತೇ ಶ್ರೇಷ್ಟ ಎಂಬುದನ್ನು ಸೂಚಿಸುತ್ತದೆ. ಕೆಂಪು ಬಣ್ಣದಲ್ಲಿರುವ ಈ ಗಣಪತಿಯು ತನ್ನು ಶಕ್ತಿಯ ಜೊತೆಯಲ್ಲಿ ಕುಳಿತಿರುತ್ತಾನೆ.
- ವಿಜಯ ಗಣಪತಿ ಹೇಸರೇ ಸೂಚಿಸುವಂತೆ ವಿಜಯದ ಸಂಕೇತ. ಈತನಿಗೆ ನಾಲ್ಕು ಕೈಗಳು ಇದ್ದು ಮೂಷಕ ವಾಹನನಾಗಿ ಕಾಣಿಸುತ್ತಾನೆ.
- ನೃತ್ಯ ಗಣಪತಿಯು ತನ್ನ ಅಗಾಧ ದೇಹದ ಹೊರತಾಗಿಯು ನೃತ್ಯವನ್ನು ಮಾಡುವ ಭಂಗಿಯಲ್ಲಿ ಇಲ್ಲಿ ಕಾಣಿಸಿಕೊಳ್ಳುತ್ತಾನೆ. ನೃತ್ಯ ಮಾಡುವ ಗಣಪತಿಯ ಅಂದಕ್ಕೆ ಬೆರಗಾಗದೆ ಇರುವವರು ಯಾತಿದ್ದಾರೆ?
- ಊಧ್ರ್ವ ಗಣಪತಿ ಎಂದರೆ ಉದ್ದವಾಗಿ ಇರುವ ಗಣಪತಿ ಎಂದರ್ಧ. ಈ ಗಣಪತಿಯು ಪ್ರಮುಖವಾಗಿ ಹಿಡುವಳಿಯನ್ನು ಹರಿಸುವ ಗಣಪತಿಯಂತೆ ಕಾಣುತ್ತಾನೆ. ಈತನ ಕೈಯಲ್ಲ್ತಿ, ಭತ್ತ, ನೈದಿಲೆ, ಕಬ್ಬನ ಜಲ್ಲ್ಲೆಗಳನ್ನು ನಾವು ಕಾಣಬಹುದು.
- ಏಕಾಕ್ಷರ ಗಣಪತಿ ಯು ಹೆಸರೆ ಸೂಚಿಸುವಂತೆ ‘ಒಂದೆ ಅಕ್ಷರದ ಗಣಪತಿಯಾಗಿರುತ್ತಾನೆ ಈತನು ಕೆಂಪು ಬಣ್ಣದಲ್ಲಿದ್ದು ಮೂಷಕ ವಾಹನನಾಗಿ ನಮಗೆ ಕಾಣಿಸುತ್ತಾನೆ.
- ವರದ ಗಣಪತಿ ನಿಮಗೆ ಯಾವುದಾದರು ಒಂದು ವರ ಬೇಕೆ? ಹಾಗಾದರೆ ನೀವು ವರದ ಗಣಪತಿಯನ್ನು ಪೂಜಿಸಿ. ಈತನಿಗೆ ಮೂರನೆ ಕಣ್ಣು ಇದೆ ಇದು ಜ್ಞಾನವನ್ನು ಪ್ರತಿನಿಧಿಸುತ್ತದೆ.
- ತ್ರಯಾಕ್ಷರ ಗಣಪತಿಯು ಮೂರು ಅಕ್ಷರದ ಗಣಪತಿಯಾಗಿದ್ದು ಕೈಯಲ್ಲಿ ತನ್ನು ಪ್ರೀತಿಯ ತಿನಿಸಾದ ಮೋದಕವನ್ನು ಹಿಡಿದು ತಿನ್ನುತ್ತಿದುವುದನ್ನು ಕಾಣಬಹುದು.
- ಕ್ಷಿಪ್ರಪ್ರಸಾದ ಗಣಪತಿಯು ನಿಮ್ಮ ಕೋರಿಕೆಯನ್ನು ಅತಿ ಶೀಘ್ರದಲ್ಲಿಯೇ ಪೂರೈಸಿವನೆಂದು ಭಾವಿಸಲಾಗಿದೆ.
- ಹರಿದ್ರ ಗಣಪತಿಯು ಸಂದರವಾದ ಚಿನ್ನದ ಬಣ್ಣವನ್ನು ಹೊಂದಿದ್ದು ಹಳದಿ ಬಣ್ಣದ ರಾಜ ಠಿವಿಯಿಂದ ಕೂಡಿದ ವಸ್ತ್ರವನ್ನು ಧರಿಸಿರುತ್ತಾನೆ.
- ಎಕದಂತ ಗಣಪತಿಯು ಒಂದೆ ಒಂದು ದಂತವನ್ನು ಹೋಂದಿದ್ದು ನೀಲಿಬಣ್ಣದಿಂದ ಕೂಡಿರುತ್ತಾನೆ.
- ಸೃಷ್ಟಿ ಗಣಪತಿಯ ಈ ಸಣ್ಣರೂಪವು ಮೂಷಕ ವಾಹನವಾಗಿದ್ದು ಒಳ್ಳೆಯ ಮೂಡ್ ನಲ್ಲಿ ಕಾಣಿಸಿಕೊಳ್ಳುತ್ತಾನೆ.
- ಉದ್ದಂಡ ಗಣಪತಿಯು ವಿಶ್ವದಲ್ಲಿ ಧರ್ಮವನ್ನು ಪರಿಪಾಲಿಸುತ್ತಾನೆ. ಈ ಗಣಪತಿಯ 10 ಕೈಗಳನ್ನು ಹೊಂದಿದ್ದು ವಿಶ್ವದಲ್ಲಿರುವ ಎಲ್ಲಾ 10 ಒಳ್ಳೆಯ ಅಂಶಗಳನ್ನು ಪ್ರತಿನಿಧಿಸುತ್ತಾನೆ.
- ಖುಣಮೋಚನ ಗಣಪತಿಯು ಮಾನವ ಕುಲವನ್ನು ಕೀಳರಿಮೆ ಮತ್ತು ಸಾಲಗಳಿಂದ ಮುಕ್ತಗೊಳಿಸುತ್ತಾನೆ. ಗಣಪತಿಯ ಈ ಅವತಾರವು ಬೂದು ಬಣ್ನದಿಂದ ಕೂಡೊರುತ್ತದೆ.
- ದುಂಧಿ ಗಣಪತಿಯು ಕೆಂಪು ವಣದಲ್ಲಿದ್ದು ಕೈಗಳಲ್ಲಿ ರುದ್ರಾಕ್ಷದ ಮಾಲೆಯನ್ನು ಹೊಂದಿರುತ್ತಾನೆ.
- ದ್ವಿಮುಖ ಗಣಪತಿಯ ಹೆಸರೇ ಸೂಚಿಸುವಂತೆ ಎರಡು ತಲೆಗಳನ್ನು ಹೊಂದಿದ್ದು, ಎರಡು ಕಡಗೆ ಮುಖ ಮಾಡಿರುತ್ತಾನೆ. ಈತನ ಬಣ್ಣ ನೀಲಿ.
- ತ್ರಿಮಖ ಗಣಪತಿಯು ಮೂರು ಮುಖಗಳನ್ನು ಹೊಂದಿದ್ದು ಚಿನ್ನದ ಕಮಲದ ಹೂವಿನ ಮೇಲೆ ಆಸಿನನಾಗಿರುತ್ತಾನೆ.
- ಸಿಂಹ ಗಣಪತಿಯು ತಾನು ಕುಳಿತ ಸಿಂಹದಿಂದಾಗಿ ಈ ಹೆಸರು ಪಡೆದಿರುತ್ತಾನೆ.
- ಯೋಗ ಗಣಪತಿಯು ಪದ್ಮಾಸನದಲ್ಲಿ ಕುಳಿತಿರುತ್ತಾನೆ ಮತ್ತು ಧ್ಯಾನ ಯೋಗ ನಿರತನಂತೆ ಕಾಣುತ್ತಾನೆ.
- ದುರ್ಗಾ ಗಣಪತಿಯು ಗಣಪತಿಯ ಒಂದು ಅವತಾರವಾಗಿದ್ದು ಈ ಅವತಾರದಲ್ಲಿ ಈತ ತನ್ನು ಮಾತೆಯಾದ ದುರ್ಗಾ ದೇವಿಯಿಂದ ಶಕ್ತಿಗಳನ್ನು ಸಂಪಾದಿಸಿರುತ್ತಾನೆ.
- ಸಂಕಷ್ಟ ಹರ ಗಣಪತಿಯ ಈ ಅವತಾರವು ಮಾನವ ಕುಲದ ಸಂಕಷ್ಟಗಳನ್ನು ನಿವಾರಿಸುತ್ತಾನೆ.
ಸರ್ವೇ ಜನ: ಸುಖಿನೋ ಭವಂತು.
ವಿಶ್ವಾಸ ಸೋಹೋನಿ
ಬ್ರಹ್ಮಾಕುಮಾರಿಸ್ ಮೀಡಿಯಾ ವಿಂಗ್ಸ್




