Latest

ಇಂದಿನ ಚಿನ್ನ-ಬೆಳ್ಳಿ ದರ ಯಾವ ನಗರದಲ್ಲಿ ಎಷ್ಟಿದೆ?

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಚಿನ್ನಾಭರಣ ಖರೀದಿಗೆ ಪ್ಲಾನ್ ಮಾಡಿದ್ದರೆ ಇಂದಿನ ಬಂಗಾರ-ಬೆಳ್ಳಿ ದರದ ಬಗ್ಗೆ ಗಮನಿಸಲೇ ಬೇಕು. ಕಳೆದ ಎರಡು ದಿನಗಳಿಂದ ಚಿನ್ನಾಭರಣ ದರ ಏರಿಕೆಯಾಗುತ್ತಲೇ ಇದೆ.

ಇಂದು ದೇಶದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 47,750 ರೂ. ಆಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ 51,700 ಆಗಿದೆ. ಮಹಾನಗರಗಳಲ್ಲಿ ಚಿನ್ನ ಬೆಳ್ಳಿ ದರ ಇಂದು ಎಷ್ಟಿದೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

Home add -Advt

ರಾಜಧಾನಿ ಬೆಂಗಳೂರಿನಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 47,750 ರೂಪಾಯಿ ನಿಗದಿಯಾಗಿದೆ. 24 ಕ್ಯಾರೆಟ್ ಚಿನ್ನ 52,100 ರೂಪಾಯಿ ಆಗಿದೆ.

ಇನ್ನು ಹಲವು ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ದರ ಚೆನ್ನೈ- 48,280 ರೂ. ಮುಂಬೈ- 47,750 ರೂ, ದೆಹಲಿ- 47,750 ರೂ, ಕೊಲ್ಕತ್ತಾ- 47,750 ರೂ, ಹೈದರಾಬಾದ್- 47,750 ರೂ ನಿಗದಿಯಾಗಿದೆ.

24 ಕ್ಯಾರೆಟ್ ಚಿನ್ನ ಚೆನ್ನೈ- 52,670 ರೂ, ಮುಂಬೈ- 52,100 ರೂ, ದೆಹಲಿ- 52,100 ರೂ, ಕೊಲ್ಕತ್ತಾ- 52,100 ರೂ, ಹೈದರಾಬಾದ್- 52,100 ರೂ, ಪುಣೆ- 52,170 ರೂ, ಮಂಗಳೂರು- 52,100 ರೂ ಆಗಿದೆ.

ಇಂದು ದೇಶದಲ್ಲಿ ಬೆಳ್ಳಿ ದರ ಕೂಡ ಏರಿಕೆ ಆಗಿದ್ದು, ಬೆಂಗಳೂರಿನಲ್ಲಿ ಕೆಜಿ ಬೆಳ್ಳಿಗೆ- 73,400 ರೂ ನಿಗದಿಯಾಗಿದೆ. ಚನ್ನೈನಲ್ಲಿ ಇದೇ ದರ ಇದೆ.

ಗ್ರಾಹಕರ ಗಮನಕ್ಕೆ; ಮುಂದಿನ ವಾರ ಬ್ಯಾಂಕ್ ಸೇವೆಯಲ್ಲಿ ಭಾರಿ ವ್ಯತ್ಯಯ

Related Articles

Back to top button