Belagavi NewsBelgaum NewsKannada NewsKarnataka News

*ಬೆಳಗಾವಿ ಜಿಲ್ಲೆಯಲ್ಲಿ ಭಾರಿ ಮಳೆ: ರೈತರಲ್ಲಿ ಮೂಡಿದ ಮಂದಹಾಸ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನಾದ್ಯಂತ ಇಂದು ಆಲಿಕಲ್ಲು ಸಹಿತ ಸುರಿದ ಭಾರಿ ಮಳೆಗೆ ಅಲ್ಲಿನ ರೈತರು, ಜನರು ಫುಲ್ ಖುಷ್ ಆಗಿದ್ದಾರೆ.

Home add -Advt

ಹಲವು ತಿಂಗಳಿನಿಂದ ಮಳೆಗಾಗಿ ಕಾದಿದ್ದ ಜನರಿಗೆ, ರೈತರಿಗೆ ಇಂದು ಏಕಾಏಕಿ ಸುರಿದ ಮಳೆಯಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.‌ ಚಿಕ್ಕೋಡಿ ತಾಲೂಕಿನಾದ್ಯಂತ ಇಂದು ಸುಮಾರು ಅರ್ಧ ಗಂಟೆಗಳ ಕಾಲ ಮಳೆಯಾಗಿದೆ.

ಈ ಬಾರಿ ಅದೆಷ್ಟೋ ರೈತರು ಮಳೆ ಇಲ್ಲದೆ ಬೆಳೆಯನ್ನು ಬೆಳೆದಿರಲಿಲ್ಲ, ಕೆಲವು ರೈತರು ಪರ್ಯಾಯ ವ್ಯವಸ್ಥೆ ಮೂಲಕ ಅಲ್ಪಸ್ವಲ್ಪ ಬೆಳೆ ಬೆಳೆದಿದ್ದರು, ಇದೀಗ ಚಿಕ್ಕೋಡಿ ತಾಲೂಕಿನಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದ್ದು, ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನು ದಿಢೀರ್​ ಮಳೆಯಿಂದ ವಾಹನ ಸವಾರರು ಪರದಾಡುವಂತಾಗಿದೆ.

Related Articles

Back to top button