ಪ್ರಗತಿವಾಹಿನಿ ಸುದ್ದಿ; ಮೈಸೂರು: ಕರಕುಶಲ ಕರ್ಮಿಗಳಿಗೆ ಮೈಸೂರಿನ ಕರಕುಶಲ ನಗರ, ಮೆಟಗಲ್ಲಿಯಲ್ಲಿರುವ ಮನೆಗಳ ಹಕ್ಕು ಪತ್ರ ವಿತರಣಾ ಸಮಾರಂಭ ಇತ್ತೀಚೆಗೆ ನಡೆಯಿತು.
ಒಟ್ಟು 26 ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಲಾಯಿತು. 10 ವರ್ಷಗಳ ಹಿಂದೆ ಭಾರತ ಸರ್ಕಾರದ ವಿಶ್ವ ಯೋಜನೆಯಡಿ ಕರಕುಶಲ ನಿಗಮದ ಜಾಗದಲ್ಲಿ ಕಟ್ಟಿಕೊಟ್ಟ ಮನೆಗಳ ಹಕ್ಕು ಪತ್ರ ವಿತರಿಸಲಾಯಿತು.
ಕರ್ನಾಟಕ ಕರಕುಶಲ ನಿಗಮದಿಂದ ಆಯೋಜಿಸಲಾದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂಎಲ್ಎ ಎಲ್ ನಾಗೇಂದ್ರ ಅವರು ವಹಿಸಿದ್ದರು.
ಮೈಸೂರಿನ ಎಂಪಿ ಪ್ರತಾಪ್ ಸಿಂಹ ಉಪಸ್ಥಿತಿ ಇದ್ದು, ನಿಗಮದ ಅಧ್ಯಕ್ಷರುಮಾರುತಿ ಮಲ್ಲಪ್ಪ ಅಶ್ಟಗಿ, ಎಂಡಿ ಡಿ ರೂಪಾ ಐಪಿಎಸ್, ಕಾರ್ಪೊರೇಟರ್ ರಮೇಶ್ ಉಪಸ್ಥಿತರಿದ್ದರು.
ಕಿತ್ತೂರು ಉತ್ಸವಕ್ಕೆ ಸರ್ವಸಿದ್ಧತೆ: ಶಾಸಕ ಮಹಾಂತೇಶ ದೊಡಗೌಡರ
https://pragati.taskdun.com/politics/kitturu-utsava-2022belagavimahantesha-didagowdar/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ