Karnataka News

*ಬ್ಲ್ಯಾಕ್ ಮೇಲ್: ಮದುವೆ ಸಂಭ್ರಮದಲ್ಲಿ ಯುವತಿ ಆತ್ಮಹತ್ಯೆ*

ಪ್ರಗತಿವಾಹಿನಿ ಸುದ್ದಿ: ಮಾಜಿ ಪ್ರಿಯಕರನ ಬ್ಲ್ಯಾಕ್ ಮೇಲ್ ಗೆ ಹೆದರಿ ಮದುವೆ ಸಂಭ್ರಮದಲ್ಲಿದ್ದ ಯುವತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

Home add -Advt

ಗದಗ ಜಿಲ್ಲೆಯ ಅಸುಂಡಿ ಗ್ರಾಮದದಲ್ಲಿ 29 ವರ್ಷದ ಸಾಯಿರಾಬಾನು ನದಾಫ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾವಿಗೂ ಮುನ್ನ ಯುವತಿ ಬರೆದಿಟ್ತಿರುವ ಡೆತ್ ನೋಟ್ ಲಭ್ಯವಾಗಿದ್ದು, ಮೈಲಾರಿ ಎಂಬಾತನ ವಿರುದ್ಧ ಬ್ಲ್ಯಾಕ್ ಮೇಲ್ ಆರೋಪ ಕೇಳಿಬಂದಿದೆ.

ಮೇ 8 ರಂದು ಸಾಯಿರಾಬಾನು ಮದುವೆ ನಿಶ್ಚಯವಾಗಿತ್ತು. ಮನೆಯಲ್ಲಿ ಅದ್ಧೂರಿ ಮದುವೆಗೆ ಸಿದ್ಧತೆ ನಡೆದಿತ್ತು, ಸಾಯಿರಾಬಾನು ಖುಷಿಯಿಂದಲೇ ಮದುವೆಗೆ ಸಿದ್ಧತೆ ನಡೆಸಿದ್ದಳು. ಮದುವೆಗಾಗಿ ಬಟ್ಟೆ, ಒಡವೆಗಳನ್ನು ಸಂಭ್ರಮದಿಂದ ಖರೀದಿಸಿದ್ದಳು. ಆದರೆ ಈಗ ಏಕಾಏಕಿ ನೇಣಿಗೆ ಕೊರಳೊಡ್ಡಿದ್ದಾಳೆ.

ಐದು ವರ್ಷಗಳ ಹಿಂದೆ ಮೈಲಾರಿ ಜೊತೆ ಸಾಯಿರಾಬಾನು ಲವ್ ಬ್ರೇಕಪ್ ಆಗಿತ್ತು. ನಿನಗೆ ತೊಂದರೆ ಕೊಡಲ್ಲ ಎಂದು ಮೈಲಾರಿ ಸಾಯಿರಾಳಿಂದ ದೂರಾಗಿದ್ದ. ಆದರೆ ಐದು ವರ್ಷಗಳ ಬಳಿಕ ಮತ್ತೆ ಬಂದಿದ್ದ ಪಾಗಲ್ ಪ್ರೇಮಿ, ವಿಡಿಯೋ, ಫೋಟೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಲಾರಂಭಿಸಿದ್ದ. ದೈಹಿಕ ಶಿಕ್ಷಕಿ, ಕ್ರೀಡಾಪಟುವಾಗಿದ್ದ ಸಾಯಿರಾಬಾನು ಮಾಜಿ ಪ್ರಿಯಕರನ ಬ್ಲ್ಯಾಕ್ ಮೇಲ್ ಗೆ ಹೆದರಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಗದಗ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button