Belagavi NewsBelgaum NewsElection NewsPolitics

*ಕ್ಷೇತ್ರದ ಅಭಿವೃದ್ಧಿಗೆ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರನ್ನು ಗೆಲ್ಲಿಸಿ : ಮಹಾಂತೇಶ ಕವಟಗಿಮಠ*

ಗುರುವಾರ ಪಟ್ಟಣಕುಡಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಚುನಾವಣೆ ಪ್ರಚಾರಾರ್ಥವಾಗಿ  ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಪ್ರಚಾರ ಸಭೆ ನಡೆಸಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

Home add -Advt

ಸಂಸದ ಅಣ್ಣಾಸಾಹೇಬ ಜೊಲ್ಲೆ  ಮಾತನಾಡಿ ಚಿಕ್ಕೋಡಿ ಕ್ಷೇತ್ರದಲ್ಲಿ ಮೂಲಸೌಕರ್ಯ ರಸ್ತೆ,ಹಾಗೂ ಹಲವಾರು ಕೇಂದ್ರದ ಸರಕಾರದ ಯೋಜನೆಗಳನ್ನು  ತಲುಪಿಸಲು ಪ್ರಯತ್ನಿಸಿದ್ದೇನೆ. ನಿಮ್ಮೆಲ್ಲರ ಕಷ್ಟ ಸುಖಗಳಲ್ಲಿ ನಾನು ಸದಾ ನಿಮ್ಮೊಂದಿಗಿದ್ದೆನೆ. ಮುಂದೆಯೂ ಇರಲಿದ್ದೇನೆ ಎಲ್ಲರೂ ನನಗೆ ಮತ್ತೊಮ್ಮೆ ಎಲ್ಲರ ಸೇವೆ ಮಾಡುವ ಅವಕಾಶ ನೀಡಿ ಆಶಿರ್ವಾದ ಮಾಡಿ ಎಂದು ಕೇಳಿಕೊಳ್ಳುತ್ತೇನೆ.

ವಿಧಾನ ಪರಿಷತ್ ಮಾಜಿ ಸದಸ್ಯರಾದ ಮಹಾಂತೇಶ ಕವಟಗಿಮಠ ಮಾತನಾಡಿ, ನರೇಂದ್ರ ಮೋದಿ ಅವರನ್ನು 3 ಬಾರಿ ಮತ್ತೊಮ್ಮೆ ಪ್ರಧಾನಮಂತ್ರಿಯನ್ನಾಗಿಸಿ ದೇಶದ ರಕ್ಷಣೆಗೆ ಬಿಜೆಪಿ ಬಿಟ್ಟರೆ ನಮ್ಮ ಮುಂದೆ ಯಾವುದೇ ಬೇರೆ ಆಯ್ಕೆಗಳಿಲ್ಲ ಮೋದಿಜಿ ಅವರು ತೆಗೆದುಕೊಳ್ಳುವ ಗಟ್ಟಿ ನಿರ್ಧಾರಗಳು ದೇಶದ ಪ್ರತಿಯೊಬ್ಬ ನಾಗರಿಕರು ನೆಮ್ಮದಿಯ ಜೀವನ ಕಲ್ಪಿಸಿಕೊಡುತ್ತಿದೆ ಯಾವುದೇ ಆಮಿಷಕ್ಕೊಳಗಾಗದೇ ಚಿಕ್ಕೋಡಿ ಲೋಕಸಭಾ ಅಭ್ಯರ್ಥಿಯಾದ ಅಣ್ಣಾಸಾಹೇಬ ಜೊಲ್ಲೆ ಅವರನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸಿ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯರಾದ ಮಹಾಂತೇಶ ಕವಟಗಿಮಠ, ಜಿಲ್ಲಾಧ್ಯಕ್ಷರಾದ ]ಸತೀಶ ಅಪ್ಪಾಜಿಗೋಳ, ರಾಜು ಶ್ರೀಪನ್ನವರ, ಕಿರಣ ಪಾಟೀಲ, ವಿನಾಯಕ ಪಾಟೀಲ, ಪವನ ಮಹಾಜನ, ಸಂಜಯ ಪಾಟೀಲ, ಸೋಮಶೇಖರ ಸರವಾಡೆ, ಅಭಿಷೇಕ ಪಾಟೀಲ, ಸ್ಥಳೀಯ ಮುಖಂಡರು, ಪಕ್ಷದ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

https://pragativahini.com/who-is-the-prime-ministerial-candidate-of-india-maithrikota-malvika-avinash

Related Articles

Back to top button