Karnataka NewsLatest

*ಮೂವರು ಮಕ್ಕಳಿಗೆ ವಿಷಕೊಟ್ಟ ತಾಯಿ; ತಾನೂ ಸೇವಿಸಿ ಆತ್ಮಹತ್ಯೆಗೆ ಯತ್ನ: ಮುಂದೇನಾಯ್ತು?*

ಪ್ರಗತಿವಾಹಿನಿ ಸುದ್ದಿ: ಮಹಿಳೆಯೊಬ್ಬಳು ತನ್ನ ಮೂವರು ಮಕ್ಕಳಿಗೆ ವಿಷವುಣಿಸಿ ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಜಂಗ್ಲಿಪೀರ್ ತಾಂಡಾದಲ್ಲಿ ನಡೆದಿದೆ.

ಪತಿ-ಪತ್ನಿ ನಡುವಿನ ಕಲಹದಿಂದಾಗಿ ಪತಿ ಮೇಲಿನ ಸಿಟ್ಟಿನಿಂದ 30 ವರ್ಷದ ಗೀತಾಬಾಯಿ ಸಂತೋಷ್ ರಾಥೋಡ್ ಕ್ರಿಮಿನಾಶಕವನ್ನು ಬೆರೆಸಿ ಮೂವರು ಮಕ್ಕಳಿಗೆ ಕುಡಿಸಿದ್ದಾಲೆ. ಬಳಿಕ ತಾನೂ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

Home add -Advt

ಮಕ್ಕಳಾದ 4 ವರ್ಷದ ಚೈತನ್ಯ, 3 ವರ್ಷದ ಧನುಷ್ ಹಾಗೂ ಒಂದುವರೆ ತಿಂಗಳ ಹಸುಗೂಸು ಲಕ್ಷ್ಮೀ ಸ್ಥಿತಿ ಗಂಭೀರವಾಗಿದೆ. ವಿಷ ಸೇವಿಸಿದ ಮಕ್ಕಳು ಹೊಟ್ಟೆ ನೋವು ತಾಳಲಾರದೇ ಕಿರುಚಾಡಲಾರಂಭಿಸಿದ್ದಾರೆ.

ಇದನ್ನು ಗಮನಿಸಿ ಅಕ್ಕಪಕ್ಕದ ಮನೆಯವರು ಬಂದು ಪರಿಶೀಲಿಸಿದಾಗ ವಿಷ ಸೇವಿಸಿರುವುದು ತಿಳಿದುಬಂದಿದೆ. ತಕ್ಷಣ ನಾಲ್ವರನ್ನು ಚಿಂಚೋಳಿ ತಾಲೂಕು ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಬೀದರ್ ಜಿಲ್ಲಾಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.

ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button