Karnataka News

*ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾದ ತಾಯಿ-ಮಗ*

ಪ್ರಗತಿವಾಹಿನಿ ಸುದ್ದಿ: ತಾಯಿ ಹಾಗೂ ಮಗ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ ಜಿಲ್ಲೆಯ ಚನ್ನರಾಯ ಪಟ್ಟಣದ ಕಬ್ಬಳಿ ಗ್ರಾಮದ ಬಳಿ ನಡೆದಿದೆ.

ಜಯಂತಿ (60) ಹಾಗೂ ಭರತ್ (35) ಆತ್ಮಹತ್ಯೆಗೆ ಶರಣದಾವರು. ಭರತ್ 8 ತಿಂಗಳ ಹಿಂದಷ್ಟೇ ಅರಸಿಕೆರೆ ತಾಲೂಕಿನ ಬಾಗೂರನ ಗ್ರಾಮದ ಯುವತಿಯೊಂದಿಗೆ ವಿವಾಹವಾಗಿದ್ದರು. ಅತ್ತೆ-ಸೊಸೆ ನಡುವೆ ಹೊಂದಾಣಿಕೆಯಾಗದೇ ಪದೇ ಪದೇ ಜಗಳ ನಡೆಯುತ್ತಿತ್ತು.

Home add -Advt

ಇದರಿಂದ ಮನನೊಂದ ಭರತ್ ಪತ್ನಿ ಮನೆ ಬಿಟ್ಟು ತವರು ಸೇರಿದ್ದಳು. ಕುಟುಂಬದವರು, ಗ್ರಾಮದವರು ಎರಡು ಬಾರಿ ರಾಜಿ ಪಂಚಾಯ್ತಿ ಮಾಡಿದ್ದರು. ಆದಾಗ್ಯೂ ಭರತ್ ಪತ್ನಿ ತವರು ಮನೆಗೆ ಹೋದವಳು ವಾಪಾಸ್ ಆಗಿಲ್ಲ. ಇದರಿಂದ ಭರತ್ ಹಾಗೂ ಆತನ ತಾಯಿ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಹಿರಿಸಾವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Related Articles

Back to top button