ಪ್ರಗತಿವಾಹಿನಿ ಸುದ್ದಿ, ನವದೆಹಲಿ – ಕೊರೋನಾ 3ನೇ ಅಲೆ ಮತ್ತು ರೂಪಾಂತರಿ ವೈರಸ್ ಲಾಂಬ್ಡಾ ಆತಂಕದ ಮಧ್ಯೆಯೂ ದೇಶದ ಕೆಲವು ರಾಜ್ಯಗಳು ಶಾಲೆ, ಕಾಲೇಜು ಆರಂಭಕ್ಕೆ ಸಿದ್ಧತೆ ನಡೆಸಿವೆ.
ಕೇಂದ್ರ ಸರಕಾರ ಶಾಲೆ, ಕಾಲೇಜು ಆರಂಭದ ನಿರ್ಧಾರವನ್ನು ಆಯಾ ರಾಜ್ಯಗಳಿಗೆ ಬಿಟ್ಟಿದೆ. ಜೊತೆಗೆ 2ನೇ ಅಲೆಯು ಇನ್ನೂ ಮುಗಿದಿಲ್ಲ ಎನ್ನುವ ಎಚ್ಚರಿಕೆಯೊಂದಿಗೆ 3ನೇ ಅಲೆ ಮತ್ತು ಲಾಂಬ್ಡಾ ವೈರಸ್ ದಾಳಿಯ ಕುರಿತು ಸಹ ಮುನ್ನೆಚ್ಚರಿಕೆ ನೀಡಿದೆ.
ಇವೆಲ್ಲದರ ಮಧ್ಯೆ ಅನೇಕ ರಾಜ್ಯಗಳು ಶಾಲೆಗಳನ್ನು ಆರಂಭಿಸುವ ಗಂಭೀರ ಚಿಂತನೆ ನಡೆಸಿವೆ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಶಾಲೆ, ಕಾಲೇಜು ಆರಂಭಿಸಬೇಕಿದೆ ಎಂದು ಹೇಳಿವೆ.
ಗುಜರಾತ್‌ನಲ್ಲಿ ಜುಲೈ 15ರಿಂದ ಶಾಲೆಗಳು ಆರಂಭವಾಗಲಿವೆ. ಹರಿಯಾಣದಲ್ಲಿ ಜುಲೈ 16ರಿಂದಶಾಲೆ ಆರಂಭಕ್ಕೆ ಸಿದ್ಧತೆ ನಡೆದಿದೆ. ಮೊದಲ ಹಂತದಲ್ಲಿ 9 ರಿಂದ 12ನೇ ತರಗತಿವರೆಗೆ ಆರಂಭವಾಗಲಿದೆ. ಬಿಹಾರದಲ್ಲಿ ಸಹ ಶಾಲೆ ಆರಂಭಿಸಲು ಎಲ್ಲ ತಯಾರಿ ನಡೆದಿದೆ.
ಆಂಧ್ರಪ್ರದೇಶದಲ್ಲಿ ಸಹ ಆಗಸ್ಟ್‌ನಲ್ಲಿ ಕಾಲೇಜು ಆರಂಭಿಸುವ ತಯಾರಿ ನಡೆದಿದೆ. ನವದೆಹಲಿಯಲ್ಲಿ ಆಗಸ್ಟ್ 2ರಿಂದ ಶಾಲೆ ಆರಂಭಿಸಲಾಗುತ್ತದೆ. ತೆಲಂಗಾಣ ಮತ್ತು ಉತ್ತರ ಪ್ರದೇಶದಲ್ಲಿ ಜುಲೈ 1ರಿಂದ ತರಗತಿ ಆರಂಭವಾಗಿವೆ.
ಕರ್ನಾಟಕದಲ್ಲಿ ಸಹ ಸರಕಾರ ಶಾಲೆ ಆರಂಭಿಸುವ ಗಂಭೀರ ಚಿಂತನೆ ನಡೆದಿದೆ. ಕಾಲೇಜು ಆರಂಭಕ್ಕೂ ಸಿದ್ಧತೆ ನಡೆದಿದೆ. ಲಸಿಕೆ ಹಾಕಿದ ನಂತರ ಕಾಲೇಜು ಆರಂಭಿಸಬೇಕೆಂದು ತಜ್ಞರು ಸೂಚಿಸಿದ್ದಾರೆ.
ಕೇರಳ ಮತ್ತು ಮಹಾರಾಷ್ಟ್ರದಲ್ಲಿ 2ನೇ ಅಲೆ ಮತ್ತೆ ಅಬ್ಬರ ಆರಂಭಿಸಿರುವುದರಿಂದ ಎಲ್ಲೆಡೆ ಆತಂಕ ಶುರುವಾಗಿದೆ.
8 ಜಿಲ್ಲೆಗಳಲ್ಲಿ ಚಿಂತಾಜನಕ ಸ್ಥಿತಿ
ಕರ್ನಾಟಕಕ್ಕೆ ಮತ್ತೊಂದು ದೊಡ್ಡ ಆತಂಕ: ಇದೇ ಮತ್ತೆ ಲಾಕ್ ಡೌನ್ ಗೆ ಕಾರಣವಾಗುವ ಸಾಧ್ಯತೆ
ಜುಲೈ 19ರಿಂದ ಮತ್ತೆ ರಾಜ್ಯದಲ್ಲಿ ಲಾಕ್ ಡೌನ್?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ