Latest

ಅಕ್ಷರ ಲೋಕದ ಮಾಂತ್ರಿಕ, ಖ್ಯಾತ ಪತ್ರಕರ್ತ ರವಿ ಬೆಳಗೆರೆ ಇನ್ನಿಲ್ಲ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಖ್ಯಾತ ಪತ್ರಕರ್ತ, ಅಕ್ಷರ ಲೋಕದ ಮಾಂತ್ರಿಕ, ರವಿ ಬೆಳಗೆರೆ ನಿಧನರಾಗಿದ್ದಾರೆ. ಅವರಿಗೆ 62 ವರ್ಷ ವಯಸ್ಸಾಗಿತ್ತು.

ಮಧ್ಯರಾತ್ರಿ 12 ಗಂಟೆಗೆ ಕಚೇರಿಯಲ್ಲೇ ಹೃದಯಾಘಾತಕ್ಕೊಳಗಾಗಿದ್ದ ಅವರನ್ನು ಅಪೋಲೋ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಬದುಕುಳಿಯಲಿಲ್ಲ.

ಹಾಯ್ ಬೆಂಗಳೂರು  ವಾರಪತ್ರಿಕೆ ಮೂಲಕ ಭಾರಿ ಖ್ಯಾತಿ ಗಳಿಸಿದ್ದ ರವಿ ಬೆಳಗೆರೆ, ಕನ್ನಡದ ಪ್ರಮುಖ ಬರಹಗಾರರ ಪೈಕಿ ಮೊದಲ ಸಾಲಿನಲ್ಲಿ ನಿಲ್ಲುವಂತವರಾಗಿದ್ದರು. ಪ್ರಾರ್ಥನಾ ಶಾಲೆ ಅವರ ಅದ್ಭುತ ಕೊಡುಗೆ.

ಭೂಗತ ಲೋಕದಲ್ಲಿ ಅವರ ಬರಹ ಭಾರಿ ಪ್ರಸಿದ್ಧವಾಗಿತ್ತು. ಪ್ರತಿ ವಿಷಯದ ಕುರಿತು ಸಹ ತಮ್ಮದೇ ನಿಲುವನ್ನು ಪ್ರತಿಪಾದಿಸುತ್ತಿದ್ದರು.

15 ಮಾರ್ಚ್ 1958 ಬಳ್ಳಾರಿಯಲ್ಲಿ ಜನಿಸಿದ್ದ ಅವರು,  ಬಳ್ಳಾರಿಯಲ್ಲಿ ಶಿಕ್ಷಣ ಮುಗಿಸಿದರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರದಲ್ಲಿ ಎಂ.ಎ. ಪದವಿ ಪಡೆದರು. ಅಲ್ಪಕಾಲ ಉಪನ್ಯಾಸಕರಾಗಿ ವೃತ್ತಿ ಮಾಡಿದರು.

ಜೊತೆಗೆ ಅವರು  ಕನ್ನಡ ಸಾಹಿತಿ, ಚಿತ್ರಕಥೆ ಬರಹಗಾರ, ಈ ಟಿವಿ ವಾಹಿನಿಯ ಜನಪ್ರಿಯ  ಕ್ರೈಂ ಡೈರಿ ಕಾರ್ಯಕ್ರಮದ ನಿರೂಪಕರಾಗಿ ಹಾಗೂ ಜನಶ್ರೀ ವಾಹಿನಿಯ ಮುಖ್ಯಸ್ಥರಾಗಿ, ಕಾರ್ಯಕ್ರಮಗಳ ನಿರೂಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಕನ್ನಡದಲ್ಲಿ ಹಲವಾರು ಪುಸ್ತಕಗಳನ್ನು ಬರೆದಿರುವ ಮತ್ತು ಭಾಷಾಂತರಿಸಿರುವ ರವಿ ಬೆಳಗೆರೆ, ಭಾವನಾ ಪ್ರಕಾಶನ, ಭಾವನಾ ಆಡಿಯೋ ರೀಚ್ ಮತ್ತು  ಪ್ರಾರ್ಥನಾ ಶಾಲೆಯ ಸಂಸ್ಥಾಪಕರಾಗಿದ್ದರು.  ಸಂಯುಕ್ತ ಕರ್ನಾಟಕ, ಕರ್ಮವೀರ ಪತ್ರಿಕೆಗಳಲ್ಲಿ ಸಹ ಕೆಲಸ ಮಾಡಿದ್ದರು.

ರವಿ ಬೆಳೆಗೆರೆ ಬಂದಿದ್ದ ಪ್ರಮುಖ ಪ್ರಶಸ್ತಿಗಳು –

1984 ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿವಾಹ (ಸೃಜನೇತರ)
1990 ಮಾಸ್ತಿ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ವಂಧ್ಯ (ಕತೆ)
1997 ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಾ.ವೆಂ. ಹೇಳಿದ ಕತೆ (ಸಣ್ಣ ಕತೆ)
2004 ಶಿವರಾಮ ಕಾರಂತ ಪುರಸ್ಕಾರ ನೀ ಹಿಂಗ ನೋಡಬ್ಯಾಡ ನನ್ನ (ಕಾದಂಬರಿ)
2005 ಕಂಪ್ಯೂಟರ್ ಎಕ್ಸಲೆನ್ಸಿ ಅವಾರ್ಡ್ ಪ್ರಾರ್ಥನಾ ಶಾಲೆ (ಕೇಂದ್ರ ಸರ್ಕಾರ)
2008 ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಜೀವಮಾನದ ಸಾಧನೆ
2011 ರಾಜ್ಯೋತ್ಸವ ಪ್ರಶಸ್ತಿ ಕರ್ನಾಟಕ ಸರ್ಕಾರ

ರವಿ ಬೆಳಗೆರೆ ಕೃತಿಗಳು 

ಕಥಾ ಸಂಕಲನ 

  • ದಾರಿ, 1980
  • ಪಾ.ವೆಂ. ಹೇಳಿದ ಕಥೆ, 1995
  • ಒಟ್ಟಾರೆ ಕಥೆಗಳು, 2001

ಕಾದಂಬರಿ 

  • ಗೋಲಿಬಾರ್, 1983
  • ಅರ್ತಿ, 1990
  • ಮಾಂಡೋವಿ, ಸೆಪ್ಟಂಬರ್ 1996
  • ಮಾಟಗಾತಿ, 1998
  • ಒಮರ್ಟಾ, ಜನವರಿ 1999
  • ಸರ್ಪ ಸಂಬಂಧ, ಜೂನ್ 2000
  • ಹೇಳಿ ಹೋಗು ಕಾರಣ, ಸೆಪ್ಟಂಬರ್ 2003
  • ನೀ ಹಿಂಗ ನೋಡಬ್ಯಾಡ ನನ್ನ, ಸೆಪ್ಟಂಬರ್ 2003
  • ಗಾಡ್‌ಫಾದರ್ , ಮಾರ್ಚ್ 2005
  • ಕಾಮರಾಜ ಮಾರ್ಗ, ನವೆಂಬರ್ 2010
  • ಹಿಮಾಗ್ನಿ, ೨೦೧೨

ಅನುವಾದ 

  • ವಿವಾಹ, 1983
  • ನಕ್ಷತ್ರ ಜಾರಿದಾಗ, 1984
  • ಹಿಮಾಲಯನ್ ಬ್ಲಂಡರ್, ಸೆಪ್ಟಂಬರ್1999
  • ಕಂಪನಿ ಆಫ್ ವಿಮೆನ್, ಜನವರಿ 2000
  • ಟೈಂಪಾಸ್, ಜನವರಿ 2001
  • ರಾಜ ರಹಸ್ಯ, ನವೆಂಬರ್ 2002
  • ಹಂತಕಿ ಐ ಲವ್ ಯೂ, ಜನವರಿ 2007
  • ದಂಗೆಯ ದಿನಗಳು, ಮಾರ್ಚ್ 2008

ದೇಶ-ಇತಿಹಾಸ-ಯುದ್ಧ 

  • ಕಾರ್ಗಿಲ್‌ನಲ್ಲಿ ಹದಿನೇಳು ದಿನ, ಸೆಪ್ಟಂಬರ್ 1999
  • ಬ್ಲ್ಯಾಕ್ ಫ್ರೈಡೆ (ಅನುವಾದ) ಆಗಸ್ಟ್ 2005
  • ರೇಷ್ಮೆ ರುಮಾಲು (ಅನುವಾದ) ಆಗಸ್ಟ್ 2007
  • ಇಂದಿರೆಯ ಮಗ ಸಂಜಯ, ಸೆಪ್ಟಂಬರ್ 2002
  • ಗಾಂಧೀ ಹತ್ಯೆ ಮತ್ತು ಗೋಡ್ಸೆ, ಸೆಪ್ಟಂಬರ್ 2003
  • ಡಯಾನಾ, ಜನವರಿ 2007
  • ನೀನಾ ಪಾಕಿಸ್ತಾನ
  • ಅವನೊಬ್ಬನಿದ್ದ ಗೋಡ್ಸೆ
  • ಮೇಜರ್ ಸಂದೀಪ್ ಹತ್ಯೆ
  • ಅನಿಲ್ ಲಾಡ್ ಮತ್ತು ನಲವತ್ತು ಕಳ್ಳರು
  • ಮುಸ್ಲಿಂ

ಜೀವನ ಕಥನ

  • ಪ್ಯಾಸಾ, 1991
  • ಪಾಪದ ಹೂವು ಫೂಲನ್, ಆಗಸ್ಟ್2001
  • ಸಂಜಯ, 2000
  • ಚಲಂ (ಅನುವಾದ) ಮಾರ್ಚ್ 2008

ಕ್ರೈಂ

ಹತ್ಯಾಕಥನ

  • ರಾಜೀವ್ ಹತ್ಯೆ ಏಕಾಯಿತು? ಹೇಗಾಯಿತು? 1991
  • ಮೈಸೂರಿನ ಸೀರಿಯಲ್ ಕಿಲ್ಲರ್ ರವೀಂದ್ರ ಪ್ರಸಾದ್, 1998
  • ರಂಗವಿಲಾಸ್ ಬಂಗಲೆಯ ಕೊಲೆಗಳು
  • ಬಾಬಾ ಬೆಡ್‌ರೂಂ ಹತ್ಯಾಕಾಂಡ (ತನಿಖಾ ವರದಿ) ಜನವರಿ 2007
  • ಪ್ರಮೋದ್ ಮಹಾಜನ್ ಹತ್ಯೆ (ಅನುವಾದ) ಅಕ್ಟೋಬರ್ 2012

ಭೂಗತ ಇತಿಹಾಸ

  • ಪಾಪಿಗಳ ಲೋಕದಲ್ಲಿ ಭಾಗ -1, 1995
  • ಪಾಪಿಗಳ ಲೋಕದಲ್ಲಿ ಭಾಗ 2, ಸೆಪ್ಟಂಬರ್ 1997
  •  ಭೀಮಾ ತೀರದ ಹಂತಕರು, ಮೇ 2001
  • ಪಾಪಿಗಳ ಲೋಕದಲ್ಲಿ, 2005
  • ಡಿ ಕಂಪನಿ, 2008

ಬದುಕು

  • ಖಾಸ್‌ಬಾತ್ 96, 1997
  • ಖಾಸ್‌ಬಾತ್ 97, ಸೆಪ್ಟಂಬರ್ 1997
  • ಖಾಸ್‌ಬಾತ್ 98, ಸೆಪ್ಟಂಬರ್ 1998
  • ಖಾಸ್‌ಬಾತ್ 99, ಅಕ್ಟೋಬರ್ 2003
  • ಖಾಸ್‌ಬಾತ್ 2000, ಅಕ್ಟೋಬರ್ 2003
  • ಖಾಸ್‌ಬಾತ್ 2001, ಜನವರಿ 2007
  • ಖಾಸ್‌ಬಾತ್ 2002, ಜನವರಿ 2008
  • ಖಾಸ್‌ಬಾತ್ 2003

ಅಂಕಣ ಬರೆಹಗಳ ಸಂಗ್ರಹ

ಜೀವನ ಪಾಠ

  • ಬಾಟಮ್ ಐಟಮ್ ಭಾಗ 1, ಫೆಬ್ರವರಿ2002
  • ಬಾಟಮ್ ಐಟಮ್ 2, ಅಕ್ಟೋಬರ್2003
  • ಬಾಟಮ್ ಐಟಮ್ ಭಾಗ 3, ಡಿಸೆಂಬರ್ 2006
  • ಬಾಟಂ ಐಟಮ್ 4
  • ಬಾಟಂ ಐಟಮ್ 5

ಪ್ರೀತಿ ಪತ್ರಗಳು

  • ಲವಲವಿಕೆ -1, ಡಿಸೆಂಬರ್ 1998
  • ಲವಲವಿಕೆ -2, ಸೆಪ್ಟಂಬರ್ 2004
  • ಲವಲವಿಕೆ -3
  • ಲವಲವಿಕೆ -4

ಕವನ ಸಂಕಲನ

  • ಅಗ್ನಿಕಾವ್ಯ, 1983

ಇತರೆ

  • ಕೇಳಿ, ಜೂನ್ 2001
  • ಮನಸೇ ಆಡಿಯೋ ಸಿಡಿ ಜನವರಿ 2007
  • ಫಸ್ಟ್ ಹಾಫ್
  • ಅಮ್ಮ ಸಿಕ್ಕಿದ್ಲು, ೨೦೧೨
  • ಇದು ಜೀವ: ಇದುವೇ ಜೀವನ, ೨೦೧೨
  • ಏನಾಯ್ತು ಮಗಳೇ, ಡಿಸೆಂಬರ್ 2013

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button