Kannada NewsKarnataka News

ರೇಷ್ಮಾ ತಾಳಿಕೋಟೆ ಪತಿ ಆತ್ಮಹತ್ಯೆಗೆ ಶರಣು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಹಿಡಕಲ್ ಡ್ಯಾಂ ಭೂ ಸ್ವಾಧೀನಾಧಿಕಾರಿ ರೇಷ್ಮಾ ತಾಳಿಕೋಟಿ ಅವರ ಪತಿ ಜಾಫರ್ ಫಿರ್ಜಾದೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರಿಗೆ 40 ವರ್ಷ ವಯಸ್ಸಾಗಿತ್ತು.

ರೇಷ್ಮಾ ತಾಳಿಕೋಟೆ ಬೆಂಗಳೂರಿಗೆ ತೆರಳಿದ್ದ ಸಂದರ್ಭದಲ್ಲಿ ಬಳಗಾವಿಯ ಆಜಂ ನಗರದ ಮನೆಯಲ್ಲೇ ನೇಣು ಹಾಕಿಕೊಂಡು ಅವರು ಸೋಮವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ.

Home add -Advt

ಕೆಎಎಸ್ ಅಧಿಕಾರಿಯಾಗಿರುವ ರೇಷ್ಮಾ ತಾಳಿಕೋಟೆ ಹುಕ್ಕೇರಿ, ಖಾನಾಪುರ ಸೇರಿದಂತೆ ವಿವಿಧೆಡೆ ತಹಸಿಲ್ದಾರರಾಗಿ ಕಾರ್ಯನಿರ್ವಹಿಸಿದ್ದರು. ಪತಿ ಜಾಫರ್ ಜಿಲ್ಲಾ ತರಬೇತಿ ಕೇಂದ್ರದಲ್ಲಿ  ಎಫ್ ಡಿಎ ಆಗಿ ಕಾರ್ಯನಿರ್ವಹಿಸುತ್ತಿದ್ದರು.

ತಮ್ಮ ಸಹೋದರ ಆಸಿಫ್ ಅವರ ಆಜಂ ನಗರದ ಮನೆಗೆ ತೆರಳಿ ಅಲ್ಲಿಯೇ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಜಾಫರ್ ಕಳೆದ ಕೆಲವು ತಿಂಗಳಿನಿಂದ ಡಿಪ್ರೆಶನ್ ಗೆ ಒಳಗಾಗಿದ್ದರು ಎನ್ನುವ ಮಾಹಿತಿ ಇದ್ದು ತನಿಖೆ ನಡೆಸಲಾಗುತ್ತಿದೆ ಎಂದು ಡಿಸಿಪಿ ಶೇಖರ್ ಅವರು ಪ್ರತಿವಾಹಿನಿಗೆ ಮಾಹಿತಿ ನೀಡಿದ್ದಾರೆ.

*ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿಗೆ ಜೈಲುಶಿಕ್ಷೆ ವಿಧಿಸಿ ಕೋರ್ಟ್ ಆದೇಶ*

https://pragati.taskdun.com/bjp-mla-m-p-kumaraswamy4-yearsjail/

Related Articles

Back to top button