Kannada NewsKarnataka News

ಅಂಬೋಲಿ ಘಾಟ್ ನಲ್ಲಿ ರಸ್ತೆ ಅಪಘಾತ: ನಂದಗಡದ ಚಾಲಕ ಸಾವು


ಪ್ರಗತಿವಾಹಿನಿ ಸುದ್ದಿ, ಖಾನಾಪುರ: ಮಹಾರಾಷ್ಟ್ರದ ಅಂಬೋಲಿ ಘಾಟ್ ನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಲಾರಿ
ರಸ್ತೆ ಪಕ್ಕದ ಪ್ರಪಾತಕ್ಕೆ ಬಿದ್ದಿದ್ದರಿಂದ ಸಂಭವಿಸಿದ ರಸ್ತೆ ಅಪಘಾತದಲ್ಲಿ ಲಾರಿ
ಚಾಲಕ, ತಾಲ್ಲೂಕಿನ ನಂದಗಡ ಗ್ರಾಮದ ಶಂಕರ ಪಾಟೀಲ (36) ಸ್ಥಳದಲ್ಲೇ ಸಾವನ್ನಪಿದ ಘಟನೆ
ಸೋಮವಾರ ವರದಿಯಾಗಿದೆ.

ಭಾನುವಾರ ರಾತ್ರಿ ಮಹಾರಾಷ್ಟ್ರದ ಸಿಂಧದುರ್ಗ ಜಿಲ್ಲೆಯಿಂದ
ಚೀರೆಖಾನಿ ಇಟ್ಟಿಗೆಗಳನ್ನು ತುಂಬಿಕೊಂಡು ಬೆಳಗಾವಿಯತ್ತ ಹೊರಟಿದ್ದ ಲಾರಿ ಸೋಮವಾರ
ನಸುಕಿನಜಾವ ಮಾರ್ಗಮಧ್ಯದ ಅಂಬೋಲಿ ಜಲಪಾತದಿಂದ 4 ಕಿಮೀ ಅಂತರದ ರಸ್ತೆ ತಿರುವಿನಲ್ಲಿ
ಚಾಲಕನ ನಿಯಂತ್ರಣ ಕಳೆದುಕೊಂಡು ಪ್ರಪಾತಕ್ಕೆ ನುಗ್ಗಿದ್ದರಿಂದ ಈ ಅವಘಡ ಸಂಭವಿಸಿದೆ.

Home add -Advt


ಅಂಬೋಲಿ ಪೊಲೀಸ್ ಹೊರಠಾಣೆಯ ಪೊಲೀಸರು ತಜ್ಞರ ನೆರವಿನಿಂದ ಪ್ರಪಾತದಲ್ಲಿ ಬಿದ್ದಿದ್ದ
ಲಾರಿಯಲ್ಲಿ ಸಿಲುಕಿದ್ದ ಶಂಕರ ಅವರ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿದ
ಬಳಿಕ ಸಂಬಂಧಿಕರಿಗೆ ಹಸ್ತಾಂತರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Related Articles

Back to top button