Kannada NewsLatest
ವಟ ಸಾವಿತ್ರಿ ವ್ರತ ಮಾಡಿ ಆಲದ ಮರಕ್ಕೆ ಪೂಜೆ ಸಲ್ಲಿಸಿದ ಸಚಿವೆ ಶಶಿಕಲಾ ಜೊಲ್ಲೆ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಸತ್ಯವಾನ ಸಾವಿತ್ರಿ (ವಟ ಸಾವಿತ್ರಿ) ವ್ರತದ ನಿಮಿತ್ತ ಆಲದ ಮರಕ್ಕೆ ಪೂಜೆ ಸಲ್ಲಿಸುತ್ತಿರುವುದು.

ವಟ ಸಾವಿತ್ರಿ ವ್ರತದ ಶುಭ ದಿನವಾದ ಮಂಗಳವಾರ ನಿಪ್ಪಾಣಿ ಮತಕ್ಷೇತ್ರದ ಭಿವಶಿ ಗ್ರಾಮದಲ್ಲಿ, ಸುಮಂಗಲಿಯರ ಜೊತೆಗೂಡಿ ಆಲದ ಮರಕ್ಕೆ ಶಾಸ್ತ್ರೋಕ್ತವಾಗಿ ಮುಜರಾಯಿ, ಹಜ್ ಮತ್ತು ವಕ್ಫ್ ಇಲಾಖೆಯ ಸಚಿವರಾದ ಶಶಿಕಲಾ ಜೊಲ್ಲೆ ಯವರು ಪೂಜೆ ಸಲ್ಲಿಸಿದರು.
ಪತಿ-ಪತ್ನಿಯರ ನಡುವಿನ ಪವಿತ್ರ ಬಾಂಧವ್ಯದ ಶ್ರೇಷ್ಠತೆಯನ್ನು ಬಿಂಬಿಸುವ, ಸಂಸಾರದೊಂದಿಗೆ ಪಾರಮಾರ್ಥಿಕ ಚಿಂತನೆಯನ್ನು ಬೋಧಿಸುವ ವಿಶೇಷ ಆಚರಣೆ ಇದಾಗಿದೆ. ಹೀಗಾಗಿ ಪತಿಯ ಆಯುಷ್ಯ, ಆರೋಗ್ಯ ವೃದ್ಧಿಯಾಗಿ ಈ ವಿಶೇಷ ಆಚರಣೆಯನ್ನು ಮಾಡಲಾಗುತ್ತದೆ.
ಗೋವಿಂದ್ ಕಾರಜೋಳ ಏನು ಎಳೆ ಎತ್ತಾ? – ಪ್ರಕಾಶ ಹುಕ್ಕೇರಿಗೆ ಮುದಿ ಎತ್ತು ಎಂದವರಿಗೆ ಲಕ್ಷ್ಮೀ ಹೆಬ್ಬಾಳಕರ್ ಬರೆ




