Kannada NewsKarnataka NewsLatest
*ಆಟವಾಡುತ್ತಿದ್ದಾಗ ದುರಂತ; ಬಾವಿಗೆ ಬಿದ್ದು ಮಗು ದುರ್ಮರಣ*
ಪ್ರಗತಿವಾಹಿನಿ ಸುದ್ದಿ; ಕಾರವಾರ: ಮನೆಯಂಗಳದಲ್ಲಿಯೇ ಆಟವಾಡುತ್ತಿದ್ದ ಮಗು ಬಾವಿಗೆ ಬಿದ್ದು ಸಾವನ್ನಪ್ಪಿರುವ ದಾರುಣ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಹರಿದೇವನಗರಿಯಲ್ಲಿ ನಡೆದಿದೆ.
ಮೂರು ವರ್ಷದ ಸ್ತುತಿ ಮೃತ ಮಗು. ಆಟವಾಡುತ್ತಿದ್ದ ಮಗು ಆಯತಪ್ಪಿ ಬಾವಿಗೆ ಬಿದ್ದಿದೆ. ಬಾವಿಗೆ ಮಣ್ಣು ಹಾಕಲು ಮುಂದಾದಾಗ ಮಗು ನಿಯಂತ್ರಣ ತಪ್ಪಿ ಬಾವಿಗೆ ಬಿದ್ದು ಸಾವನ್ನಪ್ಪಿದೆ. ಮಗುವನ್ನು ಕಳೆದುಕೊಂಡ ಕುಟುಂಬದ ಆಕ್ರಂದನ ಮುಗಿಲುಮುಟ್ಟಿದೆ.
ಕಾರವಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




