ಪ್ರಗತಿವಾಹಿನಿ ಸುದ್ದಿ: 2023-24ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶ ಇಂದಷ್ಟೇ ಹೊರಬಿದ್ದಿದೆ. ಇದರ ಬೆನ್ನಲ್ಲೇ ಫೇಲಾದ ವಿದ್ಯಾರ್ಥಿಗಳಿಗಾಗಿ ಹಾಗೂ ಪಾಸ್ ಆಗಿದ್ದರೂ ಹೆಚ್ಚಿನ ಅಂಕ ಪಡೆಯುವ ಉದ್ದೇಶವಿರುವ ವಿದ್ಯಾರ್ಥಿಗಳಿಗಾಗಿ ಎಸ್.ಎಸ್.ಎಲ್.ಸಿ ಪರೀಕ್ಷೆ-2 ವೇಳಾಪಟ್ಟಿ ಪ್ರಕಟವಾಗಿದೆ.
ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಮೂರು ಬಾರಿ ಪರೀಕ್ಷೆಗೆ ಶಾಲಾ ಶಿಕ್ಷಣ ಮಂಡಳಿ ಅವಕಾಶ ನೀಡಿದೆ. ಈ ಹಿನ್ನೆಲೆಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ-2 ದಿನಾಂಕ ಪ್ರಕಟವಾಗಿದೆ.
ಜೂನ್ 7ರಿಂದ ಜೂನ್ 14ರವರೆಗೆ ಪರೀಕ್ಷೆ ನಡೆಯಲಿದೆ. ಪ್ರತಿ ವಿಷಯಕ್ಕೂ ಪ್ರಶ್ನೆಗಳನ್ನು ಓದಲು 15 ನಿಮಿಷ ಕಾಲಾವಕಾಶ ನೀಡಲಾಗಿದೆ.
ವೇಳಾಪಟ್ಟಿ:
7-6-2024 – ಪ್ರಥಮ ಭಾಷೆ
8-6-2024 – ತೃತೀಯ ಭಾಷೆ
10-6-2024 – ಗಣಿತ, ಸಮಾಜ ಶಾಸ್ತ್ರ
11-6-2024 – ಅರ್ಥಶಾಸ್ತ್ರ, ಎಲಿಮೆಂಟ್ಸ್ ಆಫ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್
12-6-2024 – ವಿಜ್ಞಾನ ಹಾಗೂ ರಾಜ್ಯಶಾಸ್ತ್ರ ಹಿಂದೂಸ್ತಾನಿ ಸಂಗೀತ, ಕರ್ನಾಟಕ ಸಂಗೀತ
13-6-2024 – ದ್ವಿತೀಯ ಭಾಷೆ (ಇಂಗ್ಲೀಷ್, ಕನ್ನಡ)
14-6-2024 – ಸಮಾಜ ವಿಜ್ಞಾನ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ