Kannada NewsKarnataka News

ಗೋಕಾಕ ಟಿಎಪಿಸಿಎಂಎಸ್ ಗೆ 59 ಲಕ್ಷ ರೂ.ಲಾಭ

ಪ್ರಗತಿವಾಹಿನಿ ಸುದ್ದಿ, ಗೋಕಾಕ: ಪ್ರಸಕ್ತ ಸಾಲಿನಲ್ಲಿ ಗೋಕಾಕ ತಾಲೂಕ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘವು ೪೭.೨೩ ಕೋಟಿ ರೂಪಾಯಿಗಳ ವಹಿವಾಟು ನಡೆಸಿ ೫೯.೨೧ ಲಕ್ಷರೂಗಳ ನಿವ್ವಳ ಲಾಘ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಅಶೋಕ ನಾಯಕ ತಿಳಿಸಿದ್ದಾರೆ.

ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುವ ಅವರು, ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಸಂಘದ ಸಿಬ್ಬಂದಿ ಜೀವದ ಹಂಗು ತೊರೆದು ಪಡಿತರ ಆಹಾರ ಧಾನ್ಯಗಳನ್ನು ಜನತೆಗೆ ತಲುಪಿಸಲು ಶ್ರಮಿಸಿದ್ದಾರೆ. ಸಂಘವು ರೈತರ ಬೆಳೆಗಳಿಗೆ ಯೋಗ್ಯದರ ಕಲ್ಪಿಸಿ ಅವರಿಗೆ ಗುಣಮಟ್ಟದ ಬೀಜ, ಗೊಬ್ಬರ, ಕೀಟನಾಶಕಗಳನ್ನು ಪೂರೈಸಿ ರೈತರ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಜಾರಕಿಹೊಳಿ ಸಹೋದರರ ಮಾರ್ಗದರ್ಶನದಲ್ಲಿ ಸದಸ್ಯರ, ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಸಹಕಾರದಿಂದ ಸಂಘವು ಪ್ರಗತಿ ಪಥದತ್ತ ಸಾಗುತ್ತಿದೆ ಎಂದು ಹೇಳಿದ್ದಾರೆ.

Home add -Advt

Related Articles

Back to top button