Belagavi NewsBelgaum NewsKarnataka NewsLatest

*ಶೇಲವ್ವಾ ದೇವಿ ದೇವಸ್ಥಾನದ ಪ್ರಸಾದ ಸೇವಿಸಿ 100ಕ್ಕೂ ಹೆಚ್ಚು ಭಕ್ತರು ಅಸ್ವಸ್ಥ*

ಪ್ರಗತಿವಾಹಿನಿ ಸುದ್ದಿ: ಶೇಲವ್ವಾ ದೇವಿ ದೇವಸ್ಥಾನದ ಪ್ರಸಾದ ಸೇವಿಸಿ 100ಕ್ಕೂ ಹೆಚ್ಚು ಭಕ್ತರು ಅಸ್ವಸ್ಥಗೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ನಡೆದಿದೆ.

ಇಲ್ಲಿನ ಜೋಡಟ್ಟಿ ಗ್ರಾಮದ ಶೇಲವ್ವಾ ದೇವಿ ದೇವಸ್ಥಾನದಲ್ಲಿ ಈ ಘಟನೆ ನಡೆದಿದೆ. ಫುಡ್ ಪಾಯಿಸನ್ ಆಗಿ ಭಕ್ತರು ಅಸ್ವಸ್ಥಗೊಂಡಿದ್ದು, ಕಬ್ಬೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

ಜೋಡಟ್ಟಿ ಗ್ರಾಮದ ಶೇಲವ್ವಾ ದೇವಿ ದೇವಸ್ಥಾನದಲ್ಲಿ ವಿತರಿಸಲಾದ ಪ್ರಸಾದ ಸೇವಿಸಿದ ನೂರಾರು ಭಕ್ತರಲ್ಲಿ ವಾಂತಿ, ಭೇದಿ ಕಾಣಿಸಿಕೊಂಡಿದೆ. ತಕ್ಷಣವೇ ಅಸ್ವಸ್ಥಗೊಂಡವರನ್ನು ಕಬ್ಬೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ವಿಷಯ ತಿಳಿಯುತ್ತಿದ್ದಂತೆ ಅಸ್ವಸ್ಥರ ಆರೋಗ್ಯ ವಿಚಾರಿಸಲು ಕಬ್ಬೂರು ಆಸ್ಪತ್ರೆಗೆ ಭೇಟಿ ನೀಡಿದ ಶಾಸಕ ದುರ್ಯೋಧನ ಐಹೊಳೆ ಅವರಿಗೆ, ಇಷ್ಟೊಂದು ದೊಡ್ಡ ಪ್ರಮಾಣದ ತುರ್ತು ಪರಿಸ್ಥಿತಿ ಇದ್ದರೂ ಆಸ್ಪತ್ರೆಯಲ್ಲಿ ಕರ್ತವ್ಯನಿರತರಾಗಿರಬೇಕಾದ ತಾಲೂಕು ಆರೋಗ್ಯಾಧಿಕಾರಿ ಗೈರಾಗಿರುವುದು ಕಂಡುಬಂದಿದೆ.

ಆರೋಗ್ಯಾಧಿಕಾರಿ ಡಾ. ರಾಜಶೇಖರ ಖಣದಾಳೆ ಅವರನ್ನು ಫೋನ್ ಮೂಲಕ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. “ಇಷ್ಟೊಂದು ಜನ ಆಸ್ಪತ್ರೆಯಲ್ಲಿ ದಾಖಲಾಗಿದ್ದರೂ ಎಲ್ಲಿದ್ದೀಯಾ? ಸಾರಾಯಿ ಅಂಗಡಿಯಲ್ಲಿದ್ದೀಯಾ? ಕುಡಿದು ಮಲಗಿದ್ದೀಯಾ?” ಎಂದು ಕಟು ಪದಗಳಿಂದ ತರಾಟೆಗೆ ತೆಗೆದುಕೊಂಡರು. ಅಲ್ಲದೆ, “ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟವಾಡದೆ ತಕ್ಷಣವೇ ಆಸ್ಪತ್ರೆಗೆ ಆಗಮಿಸಿ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಸಿಗುವಂತೆ ಕ್ರಮ ವಹಿಸಬೇಕು” ಎಂದು ಎಚ್ಚರಿಕೆ ನೀಡಿದರು.

Related Articles

Back to top button