Kannada NewsKarnataka NewsLatest

*ಕ್ಯಾಬ್ ಗಾಗಿ ಕಾಯುತ್ತಿದ್ದ ಯುವತಿಯ ಬಳಿ ಬಂದು ನಿನ್ನ ರೇಟೆಸ್ಟು ಎಂದು ಕಿರುಕುಳ ನೀಡಿದ ವ್ಯಕ್ತಿ*

ಕಾಮುಕನನ್ನು ಹೆಡೆಮುರಿಕಟ್ಟಿದ ಪೊಲೀಸರು

Home add -Advt


ಪ್ರಗತಿವಾಹಿನಿ ಸುದ್ದಿ: ರಸ್ತೆ ಬದಿಯಲ್ಲಿ ಕ್ಯಾಬ್‌ಗಾಗಿ ಕಾಯುತ್ತಿದ್ದ ಯುವತಿಯೊಬ್ಬಳಿಗೆ ʻನಿನ್ ರೇಟ್ ಎಷ್ಟು?ʼ ಅಂತ ಕೇಳಿ ಕಿರುಕುಳ ನೀಡಿ ಕಾಮುಕನೊಬ್ಬ ಅಸಭ್ಯವಾಗಿ ವರ್ತಿಸಿರುವ ಘಟನೆ ನಡೆದಿದೆ.

ಬೆಂಗಳೂರಿನ ರಾಮಮೂರ್ತಿನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ವಿಜಯ್ ರಾಘವ್ ( 42 ) ಬಂಧಿತ ಆರೋಪಿ. ಈತ ಹಣ್ಣಿನ ವ್ಯಾಪಾರಿಯಾಗಿದ್ದು, ಎನ್ಆರ್‌ಐ ಲೇಔಟ್ ನಿವಾಸಿ ಎಂದು ತಿಳಿದುಬಂದಿದೆ.

ರಸ್ತೆ ಬದಿಯಲ್ಲಿ ಕ್ಯಾಬ್‌ಗಾಗಿ ( ಕಾಯುತ್ತಿದ್ದ ಯುವತಿಯೊಬ್ಬಳಿಗೆ ʻನಿನ್ ರೇಟ್ ಎಷ್ಟು?ʼ ಅಂತ ಕಿರುಕುಳ ನೀಡಿದ್ದಾನೆ. ಸ್ಕೂಟರ್‌ನಲ್ಲಿ ಬಂದ ವಿಜಯ್‌ ರಾಘವ್‌ ಯುವತಿಯನ್ನ ಕಂಡ ತಕ್ಷಣ ಸ್ಕೂಟರ್ ನಿಲ್ಲಿಸಿ ಅಸಭ್ಯವಾಗಿ ಮಾತನಾಡಿಸಿ, ಲೈಂಗಿಕವಾಗಿ ನಿಂದಿಸುತ್ತಾ ರೇಟ್ ಎಷ್ಟು? ಎಂದು ಕೇಳಿದ್ದಾನೆ. ಯುವತಿ ಇದನ್ನು ತನ್ನ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ. ಪೊಲೀಸರಿಗೆ ದೂರು ಕೊಡುತ್ತೇನೆ. ನನ್ನ ಬಳಿ ಬಂದು ಹೀಗೇಕೆ ಕೇಳುತ್ತಿದ್ದೀಯಾ? ಎಲ್ಲವನ್ನು ರೆಕಾರ್ಡ್ ಮಾಡುತ್ತಿದ್ದೇನೆ. ಇದನ್ನು ಪೊಸ್ಟ್ ಮಾಡುತ್ತೇನೆ ಎಂದು ಗದರಿದ್ದಾರೆ.

ಆದಾಗ್ಯೂ ಅವಾಚುವಾಅಗಿ ನಿಂದಿಸಿದ ವ್ಯಕ್ತಿ ಕೆಲ ಸಮಯದ ಬಳಿಕ ಸ್ಥಳದಿಂದ ತೆರಳಿದ್ದಾನೆ. ಯುವತಿ ರಾಮಮೂರ್ತಿನಗರ ಠಾಣೆಯಲ್ಲಿ ದೂರು ದಾಖಲಿಸಿದ್ದು, ಸದ್ಯ ಆರೋಪಿ ಅರೆಸ್ಟ್ ಆಗಿದ್ದಾನೆ.

Related Articles

Back to top button