Belagavi NewsBelgaum NewsKannada NewsKarnataka News

ಬೆಳಗಾವಿ ಮಾರ್ಕೆಟ್ ಪೊಲೀಸರ ಭರ್ಜರಿ ಭೇಟೆ

ಮನೆಗಳ್ಳನ ಬಂಧನ; 10 ಲಕ್ಷ ಮೌಲ್ಯದ ಬಂಗಾರ & ಬೆಳ್ಳಿ ಆಭರಣಗಳ ಜಪ್ತು

Related Articles
Home add -Advt

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಇಲ್ಲಿಯ ಮಾರ್ಕೆಟ್ ಠಾಣೆ ಪೊಲೀಸರು ಎಸಿಪಿ ನಾರಾಯಣ ಬರ್ಮನಿ ನೇತೃತ್ವದಲ್ಲಿ ಮನೆಗಳ್ಳತನ ಮಾಡಿದ ಅರೋಪಿಯನ್ನು ಬಂಧಿಸಿದ್ದು, 10 ಲಕ್ಷ ರೂ. ಮೌಲ್ಯದ ಬಂಗಾರ ಮತ್ತು ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ದಿನಾಂಕ: 20/05/2023 ರಂದು ಮಾರ್ಕೇಟ್ ಪೊಲೀಸ್ ಠಾಣೆ ವ್ಯಾಪ್ತಿಯ ಸಮರ್ಥ ನಗರದ ಒಂದು ಮನೆಯಲ್ಲಿ ಕಳ್ಳರು ಬಂಗಾರ ಮತ್ತು ಬೆಳ್ಳಿಯ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಮಾರ್ಕೇಟ್ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಕೈಗೊಳ್ಳಲಾಗಿತ್ತು.

ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ, ಎನ್ ವಿ ಭರಮನಿ ಎಸಿಪಿ ಮಾರ್ಕೆಟ್ ಉಪವಿಭಾಗ ಬೆಳಗಾವಿ ರವರ ನೇತೃತ್ವದಲ್ಲಿ ಮಹಾಂತೇಶ ಧಾಮನ್ನವರ ಹಾಗೂ ಅವರ ತಂಡ ಮಾಹಿತಿ ಕಲೆ ಹಾಕಿ ಆರೋಪಿತನಾದ ನಿಪ್ಪಾಣಿಯ ಯಾಸೀನ ಹಾಸಿಮ ಶೇಖ (23) ಈತನನ್ನು ಬಂಧಿಸಿ ಈತನಿಂದ ಸುಮಾರು 10 ಲಕ್ಷ ಮೌಲ್ಯದ 231 ಗ್ರಾಂ ಬಂಗಾರ ಮತ್ತು 140 ಗ್ರಾಂ ಬೆಳ್ಳಿಯ ಆಭರಣಗಳನ್ನು ಜಪ್ತಪಡಿಸಿಕೊಂಡು ಆತನ ವಿರುದ್ಧ ಕಾನೂನು ಕ್ರಮ ಜರುಗಿಸಿ, ತನಿಖೆ ಮುಂದುವರೆಸಲಾಗಿದೆ.

ಈ ಪ್ರಕರಣವನ್ನು ಪತ್ತೆ ಮಾಡುವಲ್ಲಿ ಶ್ರಮಿಸಿದ ಮಾರ್ಕೆಟ್ ಠಾಣೆಯ ಪಿಐ ಮಹಾಂತೇಶ ಧಾಮಣ್ಣವರ, ವಿಠಲ ಹಾವನ್ನವರ ಪಿಎಸ್‌ಐ ಮಹಾಂತೇಶ ಮಠಪತಿ ಪಿಎಸ್‌ಐ ಹಾಗೂ ಶರತಕುಮಾರ ಖಾನಾಪೂರೆ, ವಿಶ್ವನಾಥ ಮಾಳಗಿ, ಶಂಕರ ಕುಗಳೊಳ್ಳಿ, ಖಾದರಸಾಬ ಖಾನಮ್ಮನವರ, ಲಕ್ಷ್ಮಣ ಕಡೋಲ್ಕರ, ಆಶೀರ್ ಜಮಾದಾರ, ಶಿವಾನಂದ ಚಂಡಕಿ, ವಿನೋದ ಜಗದಾಳೆ, ಶಿವಪ್ಪಾ ತೇಲಿ, ಸಂಜು ಪಾತ್ರೋಟ ರವರ ಕಾರ್ಯವನ್ನು ಪೊಲೀಸ್ ಆಯುಕ್ತರು, ಉಪ-ಪೊಲೀಸ್ ಆಯುಕ್ತರು (ಕಾ&ಸು ಹಾಗೂ ಅ&ಸಂ) ಶ್ಲಾಘಿಸಿದ್ದಾರೆ.

Related Articles

Back to top button