Kannada NewsLatestNational

*ರಣ ಬಿಸಿಲಿನಿಂದ ಉಷ್ಣಾಘಾತ: ಜನಗಣತಿಗೆ ತೆರಳಿದ್ದ ಇಬ್ಬರು ಶಿಕ್ಷಕರು ಸಾವು*

ಪ್ರಗತಿವಾಹಿನಿ ಸುದ್ದಿ: ತಾಪಮಾನ ವಿಪರೀತ ಹೆಚ್ಚಳವಾಗುತ್ತಿದ್ದು, ಸಾವು-ನೋವಿನ ವರದಿಗಳು ಹೆಚ್ಚುತ್ತಿವೆ. ಈ ಬಾರಿ ಇಡೀ ದೇಶಾದ್ಯಂತ ರಣ ಬಿಸಿಲ ಝಳ, ಅತ್ಯಧಿಕ ತಾಪಮಾನ ಏರಿಕೆಯಾಗಲಿದೆ ಎಂದು ಕೆಲ ದಿನಗಳ ಹಿಂದೆಯೇ ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಈ ನಡುವೆ ಜನಗಣತಿಗೆ ಹೋಗಿದ್ದ ಇಬ್ಬರು ಶಿಕ್ಷಕರು ಉಷ್ಣ ಅಲೆ ಹೊಡೆತಕ್ಕೆ ಸಾವನ್ನಪ್ಪಿರುವಬ್ ಘಟನೆ ನಡೆದಿದೆ.

ಒಡಿಶಾದ ಮಯೂರ್ ಗಂಜ್ ಹಾಗೂ ಸುಂದರಘರ್ ಜಿಲ್ಲೆಯಲ್ಲಿ ಇಬ್ಬರು ಶಿಕ್ಷಕರು ಸುಡಿ ಬಿಸಿಲಿನಿಂದ ಅಸ್ವಸ್ಥರಾಗಿ, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಮೃತರನ್ನು ಮಯೂರ್ ಗಂಜ್ ಜಿಲ್ಲೆಯ ಬೇಟ್ ನೋಟ್ ಬ್ಲಾಕ್ ನ ವೈದ್ಯನಾಥ್ ಹೈಸ್ಕೂಲು ಶಿಕ್ಷಕ ರಾಜಕುಮಾರ್ ಹೆಂಬ್ರಾಮ್ ಹಗೂ ಸುಂದರ್ ಘರ್ ಜಿಲ್ಲೆಯ ಗುರುಂಡಿಯಾ ಬ್ಲಾಕ್ ನ ಜರ್ದಾ ಸರ್ಕಾರಿ ಹೈಸ್ಕೂಲ್ ಶಿಕ್ಷಕ ಅನುರಾಗ್ ಎಕ್ಕಾ ಎಂದು ಗುರುತಿಸಲಾಗಿದೆ.

ಇಬ್ಬರೂ ಶಿಕ್ಷಕರು ತಮಗೆ ನಿಯೋಜಿಸಿದ್ದ ಗ್ರಾಮಗಳಲ್ಲಿ ಜನಗಣತಿಯಲ್ಲಿ ತೊಡಗಿದ್ದರು. ತಾಪಮಾನ 37 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಬಿಸಿಲಿಂದಾಗಿ ತೀವ್ರವಾಗಿ ಅಸ್ವಸ್ಥರಾಗಿದ್ದರು. ಇಬ್ಬರನ್ನೂ ಪ್ರತ್ಯೇಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಬ್ಬರೂ ಇಂದು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button