Belagavi NewsBelgaum NewsKannada News

ನಾಲಾ ಪಕ್ಕದಲ್ಲಿದ್ದ ಶೆಡ್ ತೆರವುಗೊಳಿಸಿದ ಪಾಲಿಕೆ ಅಧಿಕಾರಿಗಳು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವಡಗಾಂವ ಆನಂದ ನಗರದಲ್ಲಿ ಬೆಳಗಾವಿ ಮಹಾನಗರ ಪಾಲಿಕೆ ಜಾಗದಲ್ಲಿ ವಾಸ ಮಾಡುತ್ತಿದ್ದವರಿಗೆ ಪಾಲಿಕೆ ಅಧಿಕಾರಿಗಳು ಬಿಗ್ ಶಾಕ್ ನೀಡಿದ್ದಾರೆ.

ನಾಲಾ ಪಕ್ಕದಲ್ಲಿ ವಾಸಮಾಡುತ್ತಿರುವ ಕುಟುಂಬಗಳನ್ನ ಶೆಡ್ ನಿಂದ ಹೊರಹಾಕಿದ್ದಾರೆ. ಸುಮಾರು 45 ವರ್ಷಗಳಿಂದ ಶೆಡ್ ನಲ್ಲಿ ಇದ್ದ ಐದು ಕುಟುಂಬಗಳನ್ನು ಜಾಗ ಖಾಲಿ ಮಾಡಿಸಿದ್ದಾರೆ. ಮನೆ ತೆರವುಗೊಳಿಸಲು ಮುಂದಾದ ಹಿನ್ನೆಲೆಯಲ್ಲಿ ಕುಟುಂಬದ ಸದಸ್ಯರು ಕಣ್ಣೀರು ಹಾಕಿದ್ದಾರೆ.

Home add -Advt

ಕೆಲ ದಿನಗಳ ಹಿಂದೆ ಮಳೆ ನೀರು ಮನೆಗಳಿಗೆ ನುಗ್ಗಿದ ಹಿನ್ನೆಲೆಯಲ್ಲಿ ನಾಲಾ ನಿರ್ಮಾಣಕ್ಕೆ ಪಾಲಿಕೆ ಅಧಿಕಾರಿಗಳು ಮುಂದಾಗಿದ್ದಾರೆ. ಶೆಡ್‌ಗಳ ಪಕ್ಕದಲ್ಲೇ ನಾಲಾ ನಿರ್ಮಾಣ ಹಿನ್ನೆಲೆ ಶೆಡ್‌ ತೆರವು ಮಾಡಲು ಅಧಿಕಾರಿಗಳು ಮುಂದಾದರು.

ಪಾಲಿಕೆ ಅಧಿಕಾರಿ ಲಕ್ಷ್ಮೀ ನಿಪ್ಪಾಣಿಕರ ಜೊತೆ ವಾಗ್ವಾದಕ್ಕಿಳಿದ ಕುಟುಂಬಸ್ಥರಿಗೆ ಬುದ್ದಿವಾದ ಹೇಳಿ ಮನೆಯಲ್ಲಿರುವ ವಸ್ತುಗಳನ್ನ ಹೊರತೆಗೆಯಲು ಸೂಚನೆ ನೀಡಿದ್ದಾರೆ. ಇದೇ ಸ್ಥಳದಲ್ಲೇ ನಾವು 45 ವರ್ಷಗಳಿಂದ ವಾಸಮಾಡುತ್ತಿದ್ದೇವೆ, ಏಕಾಏಕಿ ತೆರವು ಮಾಡಿದರೆ ನಾವು ಎಲ್ಲಿ ಹೋಗೊದು ಎಂದು ಕಣ್ಣೀರು ಹಾಕಿದರು.

Related Articles

Back to top button