Latest

ವಿ.ಸಿ.ಐರಸಂಗ ಇನ್ನಿಲ್ಲ

ಪ್ರಗತಿವಾಹಿನಿ ಸುದ್ದಿ, ಧಾರವಾಡ:  ಹಿರಿಯ ಕವಿ ಡಾ‌.ವಿ.ಸಿ. ಐರಸಂಗ ಶುಕ್ರವಾರ ಧಾರವಾಡದಲ್ಲಿ ನಿಧನರಾದರು. ಅವರಿಗೆ 91 ವರ್ಷ ವಯಸ್ಸಾಗಿತ್ತು.

ಸರಳತೆಯಿಂದಲೇ ಜನಮನ ಸೆಳೆದಿದ್ದ ಐರಸಂಗ್, ಸೈಕಲ್ ನಲ್ಲೇ ಓಡಾಡುತ್ತಿದ್ದರು. ಹಾಗಾಗಿ ಸೈಕಲ್ ಕವಿ ಎಂದೇ ಚಿರಪರಿಚಿತರಾಗಿದ್ದರು. ಜೀವನದುದ್ದಕ್ಕೂ ಬಡತನದ ಹಾಸಿಗೆಯಲ್ಲೇ ಮಲಗಿ ಎದ್ದವರು. ಅವರ 50ಕ್ಕೂ ಹೆಚ್ಚು ಕವನ ಸಂಕಲನಗಳು ಪ್ರಕಟವಾಗಿದ್ದು, ಹಲವಾರು ಕವನಗಳು ಜನಮಾನಸವನ್ನು ಗೆದ್ದಿವೆ.
ಆಕಾಶವಾಣಿಯ ಭಾವಸಂಗಮದ ಹಾಡುಗಳ ಮೂಲಕ ನಾಡಿನ ಬಹುಪಾಲು ಶೋತೃಗಳಿಗೆ ಚಿರಪರಿಚಿತರಾಗಿದ್ದ ಐರಸಂಗ ಅವರು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. ಅಂತ್ಯಕ್ರಿಯೆ ಶುಕ್ರವಾರ ಬೆಳಗ್ಗೆ 11.30ಕೈ ಹೊಸ ಯಲ್ಲಾಪೂರ ರುದ್ರಭೂಮಿಯಲ್ಲಿ ನಡೆಯಲಿದೆ.
ಜನಸಾಮಾನ್ಯರೊಂದಿಗಿದ್ದೇ ಕಾವ್ಯಲೋಕದ ಕಣಿ ಎನಿಸಿಕೊಂಡಿದ್ದ ಅವರು, ತಮ್ಮ  ಸುಮಾರು ಆರು ದಶಕಗಳ ಕಾಲ ಕಾವ್ಯ ಕೃಷಿ ಮಾಡಿದ್ದ ಅವರು, 50ಕ್ಕೂ ಹೆಚ್ಚು ಕವನ ಸಂಕಲನಗಳನ್ನು ರಚಿಸಿದ್ದರು. ಮಾರುತಿ ಪ್ರಕಾಶನ ಸಂಸ್ಥೆಯನ್ನು ಅವರೇ ಹುಟ್ಟುಹಾಕಿದ್ದರು. ಧಾರವಾಡದ ಕರ್ಣಾಟಕ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತ್ತು. ಧಾರವಾಡ ಜಿಲ್ಲಾ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿದ್ದ ಅವರು ಸೈಕಲ್’ನಲ್ಲೇ ಬಂದು ಗಮನ ಸೆಳೆದಿದ್ದರು.

1947ರಲ್ಲಿ ಬರೆದ ’ಸುಪ್ರಭಾತ’ ಅವರ ಮೊದಲ ಕವನ ಸಂಕಲನ. ಅವರ ಮನೆಯಲ್ಲಿ ನಡೆಯುತ್ತಿದ್ದ ಪೂಜೆ, ಭಜನೆಗಳೇ ಅವರ ಕಾವ್ಯಕ್ಕೆ ಸ್ಫೂರ್ತಿಯಾಗಿತ್ತು. ದೇಶಭಕ್ತಿ, ನಾಡಗೀತೆ, ಪೌರಾಣಿಕ, ಪ್ರೀತಿ, ಪ್ರೇಮ, ವಿರಹ, ವಿಡಂಬನೆ, ಮಕ್ಕಳ ಸಾಹಿತ್ಯ ಹೀಗೇ ವೈವಿಧ್ಯಮಯ ವಿಷಯಗಳ ಕುರಿತು ಕಾವ್ಯ ಸೃಷ್ಟಿಸಿದ್ದು ಐರಸಂಗರ ವೈಶಿಷ್ಟ್ಯ. ಪಂ.ಮಾಧವ ಗುಡಿ, ಬಾಲಚಂದ್ರ ನಾಕೋಡ, ಸಂಗೀತಾ ಕಟ್ಟಿ, ಪರಮೇಶ್ವರ ಹೆಗಡೆ ಮುಂತಾದವರು ಐರಸಂಗರ ಕಾವ್ಯಕ್ಕೆ ದನಿಯಾಗಿದ್ದಾರೆ.

 

Home add -Advt

Related Articles

Back to top button