Kannada NewsKarnataka NewsLatest

ರಮೇಶ ಜಾರಕಿಹೊಳಿ ಎಲ್ಲಿದ್ದಾರೆ? ದೆಹಲಿಗೆ ತೆರಳಿದ್ದು ನಿಜವೇ? – ಪ್ರಗತಿವಾಹಿನಿಗೆ ಹೇಳಿದ್ದೇನು?

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ನಾನು ದೆಹಲಿಗೆ ಹೋಗಿಲ್ಲ. ಗೋವಾದಲ್ಲಿ ಚುನಾವಣೆ ಪ್ರಚಾರದಲ್ಲಿದ್ದೇನೆ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ತಿಳಿಸಿದ್ದಾರೆ.

ಬುಧವಾರ ರಾತ್ರಿ ಪ್ರಗತಿವಾಹಿನಿ ಜೊತೆಗೆ ಮಾತನಾಡಿದ ಅವರು, ನಾನು ಮಧ್ಯಾಹ್ನವೇ ಗೋವಾಕ್ಕೆ ಬಂದಿದ್ದೇನೆ. 3 -4 ಕ್ಷೇತ್ರದ ಪ್ರಚಾರದ ಜವಾಬ್ದಾರಿಯನ್ನು ನನಗೆ ಕೊಟ್ಟಿದ್ದಾರೆ. ಇಂದು ಪ್ರಚಾರ ಆರಂಭಿಸಿದ್ದೇನೆ. ಈಗಲೂ ಒಂದು ಸಭೆಯಲ್ಲಿದ್ದೇನೆ. ನಾಳೆಯೂ ಇಲ್ಲೇ ಇರುತ್ತೇನೆ ಎಂದು ಅವರು ತಿಳಿಸಿದರು.

Home add -Advt

ದೆಹಲಿಗೆ ಹೋಗಿರುವುದಾಗಿ ಹಬ್ಬಿರುವ ಸುದ್ದಿಯ ಕುರಿತು ಪ್ರಶ್ನಿಸಿದಾಗ, ಕೆಲವರು ಮನಸ್ಸಿಗೆ ಬಂದ ಹಾಗೆ ಸುದ್ದಿ ಹಬ್ಬಿಸುತ್ತಾರೆ. ಅದೆಲ್ಲ ಸುಳ್ಳು ನಾನು ಈಗ ಒಂದು ಸಭೆಯಲ್ಲಿದ್ದೇನೆ. ನಾಳೆ ಸಹ ಇಲ್ಲಿಯೇ ಪ್ರಚಾರ ನಡೆಸುತ್ತೇನೆ ಎಂದು ತಿಳಿಸಿದರು.

ಸಚಿವ ಸಂಪುಟ ವಿಸ್ತರಣೆ ಸಾಧ್ಯತೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿಗೆ ತೆರಳುತ್ತಿದ್ದು, ರಮೇಶ ಜಾರಕಿಹೊಳಿ ಕೂಡ ಗೋವಾ ಮೂಲಕ ದೆಹಲಿಗೆ ತೆರಳುತ್ತಿದ್ದಾರೆ ಎನ್ನುವ ಸುದ್ದಿ ಹರಡಿತ್ತು. ಆದರೆ ಅವರು ಇದನ್ನು ನಿರಾಕರಿಸಿದ್ದಾರೆ. ನಾನು ದೆಹಲಿಗೆ ತೆರಳಿಲ್ಲ, ಅದೆಲ್ಲ ಸುಳ್ಳು ಎಂದಿದ್ದಾರೆ.

ಆದರೆ ಗೋವಾ ಬಿಜೆಪಿ ಕಚೇರಿಯನ್ನು ಸ್ಥಳೀಯ ಮಾಧ್ಯಮಗಳು ಸಂಪರ್ಕಿಸಿದಾಗ, ರಮೇಶ ಜಾರಕಿಹೊಳಿ ಗೋವಾಕ್ಕೆ ಬಂದಿರುವ ಮಾಹಿತಿ ಇಲ್ಲ ಎನ್ನುವ ಮಾಹಿತಿ ನೀಡಿದೆ.

ಸಿಎಂ ದೆಹಲಿ ಪ್ರವಾಸ ಸೋಮವಾರಕ್ಕೆ ಮುಂದೂಡಿಕೆ: ಬಜೆಟ್ ಸರಣಿ ಸಭೆಗೆ ಅನಿಶ್ಚಿತತೆ

Related Articles

Back to top button