Latest

ಮಹಿಳಾ ದಿನಾಚರಣೆಯಂದು ಸಂಭ್ರಮಿಸಿದ ಮಹಿಳೆಯರು…

ಪ್ರಗತಿವಾಹಿನಿ ಕರೆಗೆ ಸಾಲು ಸಾಲು ಫೋಟೋಗಳು -ಸ್ಪಂದಿಸಿದ ಎಲ್ಲರಿಗೂ ಧನ್ಯವಾದಗಳು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಮಹಿಳೆಯರಿಲ್ಲದ ಪ್ರಪಂಚ, ಮಹಿಳೆಯರಿಲ್ಲದ ರಾಷ್ಟ್ರ, ಮಹಿಳೆಯರಿಲ್ಲದ ನಾಡು, ಅಷ್ಟೇ ಏಕೆ, ಮಹಿಳೆಯರಿಲ್ಲದ ಮನೆ ಊಹೆಗೂ ನಿಲುಕದ್ದು. ಯಾವುದೇ ಶುಭ ಕಾರ್ಯಗಳಿರಲಿ, ಹಬ್ಬ ಹರಿದಿನಗಳಿರಲಿ ಮಹಿಳೆ ಇದ್ದರೇನೆ ಅದಕ್ಕೊಂದು ಸಂಭ್ರಮ, ಅರ್ಥ.

ತಾಯಿಯಾಗಿ, ಹೆಂಡತಿಯಾಗಿ, ಮಗಳಾಗಿ, ಸಹೋದರಿಯಾಗಿ ಎಲ್ಲ ಹಂತಗಳಲ್ಲಿ ಮಾರ್ಗದರ್ಶಕಳಾಗಿ ನಿಲ್ಲುವ ಮಹಿಳೆಗಾಗಿ ಒಂದು ದಿನವಲ್ಲ, 365 ದಿನವೂ ಮಹಿಳೆಯರದ್ದೆ.

ಆದರೂ ಸಾಂಕೇತಿಕವಾಗಿ ಆಚರಿಸಲ್ಪಡುವ ಇಂದಿನ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಂದರ್ಭದಲ್ಲಿ, ಮಹಿಳೆಯರು ತಮ್ಮದೇ ಆದ ರೀತಿಯಲ್ಲಿ ಸಂಭ್ರಮಿಸಿದ ಕ್ಷಣಗಳನ್ನು ಸೆರೆ ಹಿಡಿದು ಪ್ರಗತಿವಾಹಿನಿಗೆ ಕಳುಹಿಸಿದ್ದಾರೆ.

ಅವುಗಳಲ್ಲಿ ಆಯ್ದ ಫೋಟೋಗಳನ್ನು ಇಲ್ಲಿ ನೀಡಲಾಗುತ್ತಿದೆ. ನಿರಂತರವಾಗಿ ಫೋಟೋಗಳನ್ನು ಇಲ್ಲಿ ಅಪ್ ಲೋಡ್ ಮಾಡಲಾಗುತ್ತದೆ. ಫೋಟೋ ಕಳಿಸಿ, ನೋಡಿ ಸಂಭ್ರಮಿಸಿ…

ಪ್ರಗತಿವಾಹಿನಿಯಿಂದ ಮತ್ತೊಮ್ಮೆ ಎಲ್ಲ ಮಹಿಳೆಯರಿಗೂ ಶುಭಾಷಯಗಳು.


ದೀಪಿಕಾ ಚಾಟೆ ಹಾಗೂ ವಡಗಾವಿಯ ಯೋಗಾ ಗ್ರುಪ್ ಕನ್ಯಾಕುಮಾರಿಯ ವಿವೇಕಾನಂದ ಮೆಮೋರಿಯಲ್ ರಾಕ್ ಹತ್ತಿರ ಹಾಗೂ ರಾಮೇಶ್ವರದಲ್ಲಿ.

 

ಚನ್ನಮ್ಮ ನಗರದ ನಿವೇದಾರ್ಪಣ ಮ್ಯೂಸಿಕ್ ಅಕಾಡೆಮಿ ಸದಸ್ಯೆಯರು

ಕೆಎಲ್ಇ ಸಂಗೀತ ಶಾಲೆ ಸಿಬ್ಬಂದಿಯ ಸಂಭ್ರಮ

ಮಹಿಳಾ ಕಲ್ಯಾಣ ಸಂಸ್ಥೆ ಬೆಳಗಾವಿ ಹಾಗೂ ಮೈ ಚಾಯ್ಸ್ ಫೌಂಡೇಶನ್ ಹೈದರಾಬಾದ್ ಇವರ ವತಿಯಿಂದ
ಗೋಕಾಕ ತಾಲೂಕಿನ ಬಿಲಕುಂದಿ ಗ್ರಾಮದಲ್ಲಿ ಮಹಿಳಾ ದಿನಾಚರಣೆ.

ಬೆಳಗಾವಿಯ ವಿಕ್ರಾಂತ ಸೋಷಿಯಲ್ ಫೌಂಡೇಶನ್ ಪದಾಧಿಕಾರಿಗಳು ಓಲ್ಡ್ ಏಜ್ ಹೋಮ್ ಮತ್ತು ಉಜ್ವಲ ಕೇಂದ್ರಕ್ಕೆ ಭೇಟಿ ನೀಡಿ ಬಟ್ಟೆಗಳನ್ನು ವಿತರಿಸಿದರು.

ಹಿಡಕಲ್ ಡ್ಯಾಂನಲ್ಲಿ ಮಹಿಳಾ ಕಲ್ಯಾಣ ಸಂಸ್ಥೆ ಹಾಗೂ ಬಸವೇಶ್ವರ ಪದವಿ ಪೂರ್ವ ಕಾಲೇಜು ಇವರುಗಳ ಸಂಯುಕ್ತ ಆಶ್ರಯದಲ್ಲಿ ಮಹಿಳಾ ದಿನಾಚರಣೆಯ ಕಾಯಕ್ರಮ

ಅಥಣಿಯ ಜಹರಾಬಿ ಡಾಂಗೆ, ಮಿನಾಜ್ ಡಾಂಗೆ ಸಂಭ್ರಮ.

ಬೆಳಗಾವಿಯ ಪರಂಪರಾ ಮಹಿಳಾ ಮಂಡಳದ ಸದಸ್ಯೆಯರು ಬೆಂಗಳೂರಿನ ಐಎಎಸ್ ಅಧಿಕಾರಿಗಳ ಅತಿಥಿಗೃಹದಲ್ಲಿ ಮಹಿಳಾ ದಿನ ಆಚರಿಸಿದರು. ಮಾಹಿತಿ ತಂತ್ರಜ್ಞಾನ ಪ್ರಧಾನ ಕಾರ್ಯದರ್ಶಿ ಗೌರವ ಗುಪ್ತ ಸೇರಿದಂತೆ ವಿವಿಧ ಅಧಿಕಾರಿಗಳನ್ನು ಭೇಟಿ ಮಾಡಿದರು. ರತ್ನಪ್ರಭಾ, ಪ್ರಿಯಾ ಪುರಾಣಿಕ, ವಿದ್ಯಾ ದೇಶಪಾಂಡೆ, ಲಕ್ಷ್ಮಿ ದೇಶಪಾಂಡೆ, ಅನುಶ್ರೀ ರಘುವೀರ, ಸ್ವಾತಿ ಶಂಭಾತ್ನವರ್ ಮೊದಲಾದವರು ಇದ್ದಾರೆ.

ಅಂತರಾಷ್ಟ್ರೀಯ ಮಹಿಳಾ ದಿನಚಾರಣೆ ಅಂಗವಾಗಿ ಬೆಳಗಾವಿಯ ತಾಳೂಕರ ಚಿತ್ರಕಲಾ ಮತ್ತು ದೇವಾಂಗ ಸಮಾಜ ಪ್ರತಿಷ್ಠಾನ ವತಿಯಿಂದ ಅನಗೋಳ ಅಂಚೆಕಚೇರಿಯ ಮಹಿಳಾ ಅಂಚೆ ಪೇದೆಯಾದ ರುಕ್ಮಿಣಿ ಬಡಿಗೇರ ಹಾಗೂ ಬಿ. ಕೆ. ಕಂಗ್ರಾಳಿ ಅಂಚೆ ಕಚೇರಿಯ ಸುಧಾ ಎಸ್ ಮುರಳಿ ಅವರನ್ನು ಅನ್ನಪೂರ್ಣಾ ಕೃಷ್ಣರಾಜೇಂದ್ರ ತಾಳೂಕರ, ಆರತಿ ಬುಚಡಿ, ಪ್ರೇಮಾ ಕಾಂಬಳೆ ಗೌರವಿಸಿದರು. ಅಂಚೆ ಸಿಬ್ಬಂಧಿಗಳಾದ ಪ್ರಭಾಕರ ಎನ್. ಕಟ್ಟಿ, ಮಂಜುನಾಥ ನಾಯ್ಕರ ಉಪಸ್ಥಿತರಿದ್ದರು.

ಬೆಳಗಾವಿ ಮಹಾನಗರ ಪಾಲಿಕೆ ಮಹಿಳಾ ಸದಸ್ಯೆಯರ ಮಹಿಳಾ ದಿನಾಚರಣೆ ದಿನ ಸಂಭ್ರಮ

ಬೆಳಗಾವಿಯ ಮರಾಠಾ ಮಂಡಳ ಪದವಿ ಕಾಲೇಜಿನಲ್ಲಿ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ವಿಜಯಲಕ್ಷ್ಮಿ ಪುಟ್ಟಿ, ಹೊಸಕೋಟಿ, ರೇಖಾ, ಡಾ.ಶಾಮಲಾ. ಡಾ.ನೌಷಾದ್, ಜಯಶ್ರೀ ಮೊದಲಾದವರು.

ಬೆಳಗಾವಿಯ ವಸಂತರಾವ್ ಪೋತದಾರ್ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮಹಿಳಾ ದಿನಾಚರಣೆ.

ಕೌಜಲಗಿಯ ಸೀಮಾ ಮತ್ತು ಶ್ರೀದೇವಿ ಹೊಸಮನಿ ಸಂಭ್ರಮ.

ಬೆಳಗಾವಿ ಹಲಗಾದ ಭರತೇಶ ಸೆಂಟ್ರಲ್ ಸ್ಕೂಲ್ ಸಿಬ್ಬಂದಿಯ ಸಂಭ್ರಮ.

ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ

ರಾಜೇಶ್ವರಿ ಹೆಗಡೆ ಬರೆದ ಕವನ

.

 

 

 

 

 

ಮಹಿಳಾ ದಿನಾಚರಣೆ ಸಂಭ್ರಮದಲ್ಲಿ ಬೆಳಗಾವಿಯ ಕೆಎಲ್ಇ ಸಂಸ್ಥೆಯ ಸಿಬಿಎಲ್ ಸಿ ಸ್ಟಾಪ್ ಸಂಭ್ರಮ.

ಶಿರಡಾಣಾದ ಡಾ.ಗಂಗಾಧರ ಇಂಗ್ಲೀಷ್ ಮೀಡಿಯಂ ಸ್ಕೂಲ್ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಒಂದೇ ಬಣ್ಣದ ಸೀರೆಯುಟ್ಟು ಮಹಿಳಾ ದಿನಾಚರಣೆಯ ದಿನ ಸಂಭ್ರಮಿಸಿದರು.

ಅಥಣಿಯಲ್ಲಿ ಮಹಿಳಾ ದಿನಾಚರಣೆಯ ಸಂಭ್ರಮ.

ಮೂಡಲಗಿಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಶುಕ್ರವಾರ ಅಂತರ್‌ರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಪರಂಪರೆ ಕೂಟದ ಸಂಪ್ರದಾಯ ಆಚರಣೆಯಲ್ಲಿ ವಿದ್ಯಾರ್ಥಿನಿಯರು.

ಮಂಗಳೂರಿನ ಸಹ್ಯಾದ್ರಿ ಇಂಜಿನೀರಿಂಗ್ ಕಾಲೇಜಿನ ಬಸವರಾಜೇಶ್ವರಿ, ಲೀಲಾ, ಸಹನಾ.

ಗುಲಾಬಿ ಗ್ಯಾಂಗ್ ಸಂಸ್ಥಾಪಕಿ ಸಂಪತ್ ಪಾಲ್ ಜೊತೆ ರೇಡಿಯ ಜರ್ನಲಿಸ್ಟ್, ಸುನೀತಾ ದೇಸಾಯಿ.

ಬೆಳಗಾವಿಯ ರೇಡಿಯೋ ಜರ್ನಲಿಸ್ಟ್ ಗಳಾದ ಸುನೀತಾ ಮತ್ತು ಮನಿಷಾ ಸಂಭ್ರಮ.

ಬೆಳಗಾವಿಯ ಸಂತಮೀರಾ ಶಾಲೆಯ ಶಿಕ್ಷಕಿಯರು ಮಹಿಳಾ ದಿನಾಚರಣೆಯ ಸಂಭ್ರಮಾಚರಣೆ.

ಬೆಳಗಾವಿಯ ಸ್ಕೈ ಪಾರ್ಕ್ ಮಹಿಳೆಯರು ಸಾಂಪ್ರದಾಯಿಕ ಸೀರೆಯಲ್ಲಿ ಸಂಭ್ರಮಿಸಿದ ಕ್ಷಣ.

ಕೆಎಸ್ಆರ್ ಪಿ ಮಚ್ಛೆ ಸ್ಕೂಲ್ ನಲ್ಲಿ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮ.

ಅಥಣಿಯ ವಿಶಾಲಾಕ್ಷಿ ಅವರು ಮಗಳು ಬಸವರಾಜೇಶ್ವರಿಯೊಂದಿಗೆ ಖುಷಿಪಟ್ಟ ಚಿತ್ರ.

ಅಥಣಿ ವಿದ್ಯಾವರ್ಧಕ ಹೈಸ್ಕೂಲ್ ಶಿಕ್ಷಕರ ಸಂಭ್ರಮ.

ಧಾರವಾಡದ ಎಮ್.ಜಿ. ಗ್ರೂಪ್ಸ್ ಕೆ.ಎ.ಎಸ್. ಅಕಾಡೆಮಿಯಲ್ಲಿ ಮಹಿಳಾ ದಿನಾಚರಣೆ.

ಅಥಣಿಯಲ್ಲಿ ರೋಹಿಣಿ ಯಾದವಾಡ, ಜಯಶ್ರೀ ನಾಯಿಕ, ರಾಜಶ್ರೀ ಹಿರೇಮಠ, ಶೈಲಜಾ ಕುಲಕರ್ಣಿ ನಿಸರ್ಗದ ಮಡಿಲಲ್ಲಿ ಖುಷಿಪಟ್ಟ ಕ್ಷಣ.

ಮಂಗಳೂರಿನ ಕೆನರಾ ಪಿಯು ಕಾಲೇಜಿನಲ್ಲಿ ಉಪನ್ಯಾಸಕಿಯರು ಸಂಭ್ರಮಿಸುತ್ತಿರುವುದು.

ಬೆಳಗಾವಿಯ ಬೆನನ್ ಸ್ಮಿತ್ ಮೆಥೋಡಿಸ್ಟ್ ಡಿಗ್ರಿ ಕಾಲೇಜ್ ವಿದ್ಯಾರ್ಥಿನಿಯರ ಸಂಭ್ರಮ.

ಬೆಳಗಾವಿಯ ನಿರ್ಭಯ ಮಹಿಳಾ ಸಮಾಜ ಮಹಿಳಾ ದಿನಾಚರಣೆ ಆಚರಿಸಿದ ನೋಟ ಇಲ್ಲಿದೆ.

(ಪ್ರಗತಿವಾಹಿನಿ ಲಿಂಕ್ ನ್ನು ಇತರರೊಂದಿಗೆ ಶೇರ್ ಮಾಡಿಕೊಂಡು ಸಂಭ್ರಮಿಸಿ, ನಿರಂತರವಾಗಿ ವೆಬ್ ಸೈಟ್ ಗೆ ಭೇಟಿ ನೀಡಿ)

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button