Kannada News

ಇಬ್ಬರು ಯುವತಿಯರು ನಾಪತ್ತೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : 20 ಮತ್ತು 19 ವರ್ಷದ ಯುವತಿಯರು ನಾಪತ್ತೆಯಾಗಿದ್ದು, ಪೊಲೀಸ್ ದೂರು ದಾಖಲಾಗಿದೆ

ವಿಜಯಪೂರ ಜಿಲ್ಲೆಯ ಸಿಂದಗಿ ತಾಲೂಕಿನ ಒತಿಹಾಳ ಗ್ರಾಮದ ಯುವತಿ ಭಾಗ್ಯಶ್ರೀ ಮಲ್ಲಿಕಾರ್ಜುನ ನಾಕೆತ್ತಿನ(೨೦) ಇವರು ಜನವರಿ.೨೮, ೨೦೨೩ ರಂದು ಮುಗಳಖೋಡ ಮಠದಿಂದ ಶೌಚಾಲಯಕ್ಕೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದವಳು ಮರಳಿ ಮನೆಗೆ ಬರದೇ ಕಾಣೆಯಾಗಿದ್ದಾಳೆ ಎಂದು ಇವರ ತಾಯಿ ನೀಲಮ್ಮಾ ಮಲ್ಲಿಕಾರ್ಜುನ ನಾಕೆತ್ತಿನ ಇವರು ದೂರು ದಾಖಲಿಸಿದ್ದಾರೆ.
ಕಾಣೆಯಾದ ಯುವತಿಯ ಚಹರೆಪಟ್ಟಿ: ಎತ್ತರ ೫ ಫೂಟ, ಸಾಧಾರಣ ಮೈ ಕಟ್ಟು, ಗೋದಿಗೆಂಪು ಮೈ ಬಣ್ಣ, ಕೋಲು ಮುಖ, ಉದ್ದ ಮೂಗು, ಉದ್ದನೆಯ ಕಪ್ಪು ಕೂದಲು ಇದ್ದು ಕೇಸರಿ ಬಣ್ಣದ ಚೂಡಿದಾರ ಕೆಂಪು ವೇಲ್ ಧರಿಸಿರುತ್ತಾಳೆ ಹಾಗೂ ಕನ್ನಡ ಭಾಷೆ ಬಲ್ಲವಳಾಗಿದ್ದಾಳೆ.
ಸದರಿ ಯುವತಿಯ ಬಗ್ಗೆ ಮಾಹಿತಿ ದೊರೆತಲ್ಲಿ ಹಾರೂಗೇರಿ ಪೋಲಿಸ್ ಠಾಣೆಗೆ ಸಂಪರ್ಕಿಸಬೇಕು ಎಂದು ಠಾಣಾಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Home add -Advt

ಹಾರೂಗೇರಿ

ಬಾಗಲಕೋಟ ಜಿಲ್ಲೆಯ ಇಳಕಲ್ ತಾಲೂಕಿನ ಯುವತಿ ರಂಜೀತಾ(೧೯) ಇವರು ಫೆಬ್ರುವರಿ ೨೮, ೨೦೨೩ ರಂದು ಬೆಳಿಗ್ಗೆ ೩ ಗಂಟೆಯ ಅವಧಿಯಲ್ಲಿ ಹಾರೂಗೇರಿಯ ತನ್ನ ಅಜ್ಜಿಯ ಮನೆಯಿಂದ ಕಾಣೆಯಾಗಿದ್ದಾಳೆ ಎಂದು ಇವರ ತಾಯಿ ರೂಪಾ ರಾಮಕೃಷ್ಣಸಾ ರಾಯಬಾಗಿ ಅವರು ದುರೂ ದಾಖಲಿಸಿದ್ದಾರೆ.
ಕಾಣೆಯಾದ ಯುವತಿಯ ಚಹರೆಪಟ್ಟಿ: ಎತ್ತರ ೫ ಫೂಟ ೧ ಇಂಚ, ಸಾಧಾರಣ ಮೈ ಕಟ್ಟು, ಗೋದಿಗೆಂಪು ಮೈ ಬಣ್ಣ, ಕೋಲು ಮುಖ, ಉದ್ದನೆಯ ಕಪ್ಪು ಕೂದಲು ಇದ್ದು ಕಪ್ಪು ಬಣ್ಣದ ಪ್ಲಾಜೊ ಪ್ಯಾಂಟ್ ಪಿಂಕ ಬಣ್ಣದ ಟಾಪ್ ಧರಿಸಿರುತ್ತಾಳೆ ಹಾಗೂ ಕನ್ನಡ ಮರಾಠಿ ಭಾಷೆ ಬಲ್ಲವಳಾಗಿದ್ದಾಳೆ.
ಸದರಿ ಯುವತಿಯ ಬಗ್ಗೆ ಮಾಹಿತಿ ದೊರೆತಲ್ಲಿ ಹಾರೂಗೇರಿ ಪೋಲಿಸ್ ಠಾಣೆಗೆ ಸಂಪರ್ಕಿಸಬೇಕು ಎಂದು ಠಾಣಾಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Related Articles

Back to top button