ಪ್ರಗತಿವಾಹಿನಿ ಸುದ್ದಿ: ಬೆಂಗಳೂರು ನಗರದಲ್ಲಿ ಭೂಗಳ್ಳರು ಮಾಡುವ ಅಕ್ರಮಗಳಿಗೆ ಕೊನೇಯೇ ಇಲ್ಲದಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯನ್ನೇ ಮಾರಲು ಖದೀಮರು ಮುಂದಾಗಿರುವ ಘಟನೆ ಬೆಳಕಿಗೆ ಬಂದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿ ಕಚೇರಿಯ ನಕಲಿ ದಾಖಲೆ ಸೃಷ್ಟಿಸಿ ಕೆಲ ಭೂಗಳ್ಳರು ಪೊಲೀಸ್ ಕಚೇರಿ ಜಾಗವನ್ನು ಮಾರಾಟ ಮಾಡಲು ಯತ್ನಿಸಿದ್ದಾರೆ.
ಹನೀಫ್ ಎಂಬಾತ ಎಸ್ ಪಿ ಕಚೇರಿಯ ಫೋಟೋ, ವಿಡಿಯೋಗಳನ್ನು ತೆಗೆದು ಗ್ರಾಹಕರಿಗೆ ಶೇರ್ ಮಾಡಲು ಯತ್ನಿಸಿದ್ದಾನೆ. ಇದನ್ನು ಗಮನಿಸಿದ ಎಸ್ ಪಿ ಕಚೇರಿಯ ವೈರ್ ಲೆಸ್ ವಿಭಾಗದ ಇನ್ಸ್ ಪೆಕ್ಟರ್ ಸಂತೋಷ್ ಗೌಡ ಪ್ರಶ್ನಿಸಿದ್ದಾರೆ. ಆಗ ಆರೋಪಿ ಜಾಗ ನನ್ನದು, ನನ್ನ ಹೆಸರಲ್ಲಿ ಜಿಪಿಎ ಇದೆ ಎಂದಿದ್ದಾನೆ. ಈ ವಿಚಾರವನ್ನು ಇನ್ಸ್ ಪೆಕ್ಟರ್ ಸಂತೋಷ್ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.
ನಕಲಿ ದಾಖಲೆ ಸೃಷ್ಟಿಸಿ ಮಾರಲು ಮುಂದಾಗಿರುವ ಹನೀಫ್ ಸೇರಿದಂತೆ ರಾಜಶೇಖರ್, ಮೊಹಮ್ಮದ್ ನದೀಮ್, ಮೋಹನ್ ಶೆಟ್ಟಿ, ಗಣಪತಿ ಎಂಬಾತನ ಮೇಲೆ ದೂರು ದಾಖಸಿದ್ದಾರೆ. ಸದ್ಯ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದು, ಐಪಿಸಿ ಸೆಕ್ಷನ್ 353, 447 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಉಳಿದ ಆರೋಪಿಗಳಿಗಾಗಿ ಹುಡುಕಾಟ ಮುಂದುವರೆದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ