Belagavi NewsBelgaum NewsKannada NewsKarnataka NewsTravel

*ಬೆಳಗಾವಿಯ ಈ ಎರಡು ರಸ್ತೆಗಳಲ್ಲಿ ಏಕಮುಖ ಸಂಚಾರ: ಸಹಕರಿಸಲು ಮನವಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ನಗರದಲ್ಲಿ ಟ್ರಾಫಿಕ್ ಸಮಸ್ಯೆ ನಿವಾರಣೆಗಾಗಿ ಪ್ರಮುಖ ಎರಡು ರಸ್ತೆಗಳಲ್ಲಿ ಏಕಮುಖ ಸಂಚಾರ ನಿಯಮ ಜಾರಿ ಮಾಡಲಾಗಿದೆ.

ಬೆಳಗಾವಿ ನಗರ ಪ್ರದೇಶ ವ್ಯಾಪ್ತಿಯಲ್ಲಿ ಸಾರ್ವಜನಿಕರ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಫೋರ್ಟ್ ರಸ್ತೆಯಲ್ಲಿ ಎರಡೂ ಬದಿಗಳಲ್ಲಿ ಹೆಚ್ಚಿನ ಸಂಖ್ಯೆಯ ಅಂಗಡಿ ಮುಗ್ಗಟ್ಟುಗಳಿದ್ದು, ಈ ರಸ್ತೆಗಳಲ್ಲಿ ಹೆಚ್ಚಿನ ಸಂಖ್ಯೆಯ ವಾಹನ ಸಂಚಾರ ಹಾಗೂ ಸಾರ್ವಜನಿಕರ ಓಡಾಟವಿದ್ದುದರಿಂದ ಸುಗಮ ಸಂಚಾರದಲ್ಲಿ ಅತೀವ ತೊಂದರೆ ಉಂಟಾಗುತ್ತಿರುತ್ತದೆ. ಈ ಸಂಬಂಧ ಸ್ಥಳೀಯ ವರ್ತಕರ ಸಭೆಯನ್ನು ಏರ್ಪಡಿಸಿ ಅವರ ಕುಂದು ಕೊರತೆಗಳನ್ನು ಆಲಿಸಿ ನಂತರ ಏಕಮುಖ ಸಂಚಾರ ಪ್ರಸ್ತಾವನೆ ಮಾಡಿದ ರಸ್ತೆಯಲ್ಲಿ ಅವರೊಂದಿಗೆ ಸಂಚರಿಸಿ ಅಲ್ಲಿ ಉಂಟಾಗುತ್ತಿದ ಸಂಚಾರ ವ್ಯವಸ್ಥೆಯ ತೊಂದರೆಗಳನ್ನು ಗಮನಿಸಿ ಏಕಮುಖ ಸಂಚಾರದ ಬಗ್ಗೆ ಸ್ಥಳೀಯ ಸಾರ್ವಜನಿಕರ ಅಭಿಪ್ರಾಯವನ್ನು ಕೇಳಲ ಶೇಕಡಾ 80 ರಷ್ಟು ಜನರು ಏಕಮುಖ ಸಂಚಾರದ ಪರವಾಗಿ ಅಭಿಪ್ರಾಯ ನೀಡಿದ್ದು. 

ಈ ಹಿನ್ನೆಲೆಯಲ್ಲಿ ದೇಶಪಾಂಡೆ ಪೆಟ್ರೋಲ್ ಪಂಪ್ ದಿಂದ ಮುಜಾವರ ಬೂಟ ಕಡೆಗೆ ಪಶ್ಚಿಮ ದಿಂದ ಪೂರ್ವಕ್ಕೆ ಸಂಚರಿಸುವುದು‌

ಜಿಜಾಮಾತಾ ಸರ್ಕಲ್ ದಿಂದ ದೇಶಪಾಂಡೆ ಪೆಟ್ರೋಲ್ ಪಂಪ್ ಕಡೆಗೆ ಪೂರ್ವದಿಂದ ಪಶ್ಚಿಮಕ್ಕೆ ಸಂಚರಿಸುವುದು

Home add -Advt

ಈ ಮೇಲಿನಂತೆ ಎರಡೂ ರಸ್ತೆಗಳನ್ನು “ಏಕಮುಖ ಸಂಚಾರ” (One Way Traffic) ವ್ಯವಸ್ಥೆಯ ಆಜ್ಞೆಯನ್ನು ಎಪ್ರಿಲ್ 14 ರಂದು ಹೊರಡಿಸಲಾಗಿದೆ. ಇದೇ ರೀತಿ ಇನ್ನು ಮುಂದೆಯೂ ಸಹ ಬೆಳಗಾವಿ ನಗರದಲ್ಲಿ ಸಂಚಾರ ವ್ಯವಸ್ಥೆಗೆ ಹೆಚ್ಚು ತೊಂದರೆ ಉಂಟಾಗುವ ಸ್ಥಳಗಳಿಗೆ ಭೇಟಿ ನೀಡಿ ಸ್ಥಳೀಯ ಜನರೊಂದಿಗೆ ಚರ್ಚಿಸಿ ಏಕಮುಖ ಸಂಚಾರ ವ್ಯವಸ್ಥೆಯನ್ನು ಮಾಡಲಾಗುವುದು. 

ಸಾರ್ವಜನಿಕರು ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಿಕೊಂಡು ಬೆಳಗಾವಿ ನಗರ ಪೊಲೀಸರೊಂದಿಗೆ ಸಹಕರಿಸಬೇಕು ಎಂದು ಪೊಲೀಸ್ ಆಯುಕ್ತರು ವಿನಂತಿಸಿದ್ದಾರೆ.

Related Articles

Back to top button