Belagavi NewsBelgaum NewsKannada NewsKarnataka NewsTravel

*ಹುಬ್ಬಳ್ಳಿ, ಬೆಳಗಾವಿಯಿಂದ ಋಷಿಕೇಶಗೆ ಓಡಲಿದೆ ಖಾಯಂ ಎಕ್ಸ್‌ಪ್ರೆಸ್‌ ರೈಲು*

ಪ್ರಗತಿವಾಹಿನಿ ಸುದ್ದಿ: ರೈಲ್ವೆ ಮಂಡಳಿಯು ಎಸ್‌ಎಸ್‌ಎಸ್ ಹುಬ್ಬಳ್ಳಿ ಮತ್ತು ಯೋಗ ನಗರಿ ಋಷಿಕೇಶ ನಡುವಿನ ‘ವಿಶೇಷ ಸಾಪ್ತಾಹಿಕ ಎಕ್ಸ್‌ಪ್ರೆಸ್’ ರೈಲು ಸೇವೆಯನ್ನು ಈಗ ಖಾಯಂ (ನಿಯಮಿತ) ಸೇವೆಯನ್ನಾಗಿ ಪರಿವರ್ತಿಸಿದೆ. ಈ ರೈಲುಗಳು ಇನ್ನು ಮುಂದೆ ಅಧಿಕೃತ ರೈಲು ಸಂಖ್ಯೆಗಳೊಂದಿಗೆ ಸಂಚರಿಸಲಿವೆ. ಈ ಕ್ರಮದಿಂದ ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರ ಪ್ರದೇಶ, ದೆಹಲಿ ಹಾಗೂ ಉತ್ತರಾಖಂಡ ರಾಜ್ಯಗಳ ನಡುವೆ ಪ್ರಯಾಣಿಸುವ ದೂರದೂರಿನ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ.

ರೈಲು ಸಂಖ್ಯೆ 07363 ಎಸ್‌ಎಸ್‌ಎಸ್ ಹುಬ್ಬಳ್ಳಿ – ಯೋಗ ನಗರಿ ಋಷಿಕೇಶ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು 06.07.2026 ರಿಂದ ಜಾರಿಗೆ ಬರುವಂತೆ ರೈಲು ಸಂಖ್ಯೆ 17363 ಎಸ್‌ಎಸ್‌ಎಸ್ ಹುಬ್ಬಳ್ಳಿ – ಯೋಗ ನಗರಿ ಋಷಿಕೇಶ ಸಾಪ್ತಾಹಿಕ ಎಕ್ಸ್‌ಪ್ರೆಸ್ ಎಂದು ನಿಯಮಿತಗೊಳಿಸಲಾಗಿದೆ. ಅದೇ ರೀತಿ, ಅಸ್ತಿತ್ವದಲ್ಲಿರುವ ವಿಶೇಷ ರೈಲು ಸಂಖ್ಯೆ 07364 ಯೋಗ ನಗರಿ ಋಷಿಕೇಶ – ಎಸ್‌ಎಸ್‌ಎಸ್ ಹುಬ್ಬಳ್ಳಿ ಸಾಪ್ತಾಹಿಕ ವಿಶೇಷ  ಎಕ್ಸ್‌ಪ್ರೆಸ್ 09.07.2026 ರಿಂದ ಜಾರಿಗೆ ಬರುವಂತೆ ರೈಲು ಸಂಖ್ಯೆ 17364 ಯೋಗ ನಗರಿ ಋಷಿಕೇಶ – ಎಸ್‌ಎಸ್‌ಎಸ್ ಹುಬ್ಬಳ್ಳಿ ಸಾಪ್ತಾಹಿಕ ಎಕ್ಸ್‌ಪ್ರೆಸ್ ಎಂದು ಸಂಚರಿಸಲಿದೆ.

ರೈಲು ಸಂಖ್ಯೆ 17363 ಎಸ್‌ಎಸ್‌ಎಸ್ ಹುಬ್ಬಳ್ಳಿ – ಯೋಗ ನಗರಿ ಋಷಿಕೇಶ ಸಾಪ್ತಾಹಿಕ ಎಕ್ಸ್‌ಪ್ರೆಸ್ ಪ್ರತಿ ಸೋಮವಾರ 19:45 ಗಂಟೆಗೆ ಹುಬ್ಬಳ್ಳಿಯಿಂದ ಹೊರಟು, ಬುಧವಾರ 23:30 ಗಂಟೆಗೆ ಯೋಗ ನಗರಿ ಋಷಿಕೇಶ ತಲುಪಲಿದೆ. ಹಿಂದಿರುಗುವ ಪಯಣದಲ್ಲಿ, ರೈಲು ಸಂಖ್ಯೆ 17364 ಯೋಗ ನಗರಿ ಋಷಿಕೇಶ – ಎಸ್‌ಎಸ್‌ಎಸ್ ಹುಬ್ಬಳ್ಳಿ ಸಾಪ್ತಾಹಿಕ ಎಕ್ಸ್‌ಪ್ರೆಸ್ ಪ್ರತಿ ಗುರುವಾರ 6:15 ಗಂಟೆಗೆ ಯೋಗ ನಗರಿ ಋಷಿಕೇಶದಿಂದ ಹೊರಟು, ಶನಿವಾರ 6:30 ಗಂಟೆಗೆ ಎಸ್‌ಎಸ್‌ಎಸ್ ಹುಬ್ಬಳ್ಳಿಗೆ ಆಗಮಿಸಲಿದೆ.

ಈ ರೈಲು ಎರಡೂ ಮಾರ್ಗಗಳಲ್ಲಿ ಧಾರವಾಡ, ಲೋಂಡಾ, ಬೆಳಗಾವಿ, ಘಟಪ್ರಭಾ, ಮಿರಜ್, ಸಾಂಗ್ಲಿ, ಕರಾಡ್, ಸತಾರಾ, ಪುಣೆ, ದೌಂಡ್ ಕಾರ್ಡ್ ಲೈನ್, ಅಹಲ್ಯಾನಗರ, ಕೊಪರಗಾಂವ್, ಮನ್ಮಾಡ್, ಭುಸಾವಲ್, ಖಾಂಡ್ವಾ, ಹರ್ದಾ, ಇಟಾರ್ಸಿ, ರಾಣಿ ಕಮಲಾಪತಿ, ಬೀನಾ, ವೀರಾಂಗನಾ ಲಕ್ಷ್ಮೀಬಾಯಿ ಝಾನ್ಸಿ, ಗ್ವಾಲಿಯರ್, ಆಗ್ರಾ ಕ್ಯಾಂಟ್, ಮಥುರಾ, ಹಜರತ್ ನಿಜಾಮುದ್ದೀನ್, ಗಾಜಿಯಾಬಾದ್, ಮೀರತ್ ಸಿಟಿ, ಮುಜಾಫರ್‌ನಗರ, ದಿಯೋಬಂದ್, ಟಾಪ್ರಿ, ರೂರ್ಕಿ ಮತ್ತು ಹರಿದ್ವಾರ ನಿಲ್ದಾಣಗಳಲ್ಲಿ ನಿಲ್ಲಲಿದೆ.

Home add -Advt

ಈ ರೈಲು 16 ಬೋಗಿಗಳನ್ನು ಒಳಗೊಂಡಿದ್ದು, ಒಂದು ಎಸಿ 2-ಟೈರ್, ಮೂರು ಎಸಿ 3-ಟೈರ್, 6 ಸ್ಲೀಪರ್ ಕ್ಲಾಸ್, 4 ಸಾಮಾನ್ಯ ದರ್ಜೆ, ಒಂದು ದಿವ್ಯಾಂಗ ಸ್ನೇಹಿ ಕಂಪಾರ್ಟ್ಮೆಂಟ್ ಒಳಗೊಂಡ ಬ್ರೇಕ್ ವ್ಯಾನ್ ಮತ್ತು  ಒಂದು ಲಗೇಜ್ ಕಮ್ ಬ್ರೇಕ್ ವ್ಯಾನ್ ಮತ್ತು ಜನರೇಟರ್ ಕಾರ್ ಬೋಗಿಗಳು ಒಳಗೊಂಡಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಮತ್ತು ನಿಖರವಾದ ವೇಳಾಪಟ್ಟಿಗಾಗಿ ಪ್ರಯಾಣಿಕರು ಭಾರತೀಯ ರೈಲ್ವೆಯಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

Related Articles

Back to top button