
ಪ್ರಗತಿವಾಹಿನಿ ಸುದ್ದಿ: ಡಿ.ಕೆ ಶಿವಕುಮಾರ ಸಿಎಂ ಆಗುತ್ತಿದ್ದಂತೆ ಆಡಳಿತ ವ್ಯವಸ್ಥೆ ಬಲ ಪಡಿಸಲು ಹಿರಿಯ ಐಎಎಸ್ ಆಧಿಕಾರಿಗಳ ವರ್ಗಾವಣೆ ಆಗಿದೆ.
ರಾಜ್ಯದ ಬೇರೆ ಬೇರೆ ವಿಭಾಗಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ಆರು ಐಎಎಸ್ ಅಧಿಕಾರಿಗಳು ತಕ್ಷಣದಿಂದಲೇ ಜಾರಿಗೆ ಬರುವಂತೆ ವರ್ಗಾಯಿಸಿ ಆದೇಶಿಸಲಾಗಿದೆ.
ಯಾವ ಅಧಿಕಾರಿಗಳಿಗೆ ಎಲ್ಲೆಲ್ಲಿ ನೂತನ ಜವಾಬ್ದಾರಿಗಳನ್ನು ವಹಿಸಲಾಗಿದೆ ಎಂಬ ಸಂಪೂರ್ಣ ಪಟ್ಟಿಯನ್ನು ಸರ್ಕಾರ ಬಿಡುಗಡೆ ಮಾಡಿದೆ. ಸಾರ್ವಜನಿಕ ಆಡಳಿತದಲ್ಲಿ ಚುರುಕು ಮುಟ್ಟಿಸಲು ಕೈಗೊಳ್ಳಲಾಗಿರುವ ಈ ಬೃಹತ್ ಬದಲಾವಣೆಯು ಇಲಾಖೆಗಳ ಸಮನ್ವಯತೆಯನ್ನು ಮತ್ತಷ್ಟು ಉತ್ತಮಗೊಳಿಸಲಿದೆ ಎಂದು ಮೂಲಗಳು ತಿಳಿಸಿವೆ.

ಐ.ಎ.ಎಸ್ ಅಧಿಕಾರಿಗಳಾದ ಆಂಜುಮ್ ಪರ್ವೇಜ್, ಮುನೀಶ್ ಮೌನ್ಸಿಲ್, ದೀಪಾ ಚೋಲನ್, ಕಾವೇರಿ ಬಿ.ಬಿ, ಡಾ. ವೆಂಕಟೇಶ್ ಎಂ.ವಿ, ಡಾ. ಸೆಲ್ವಮಣಿ ಆರ್ ಸೇರಿದಂತೆ ಇಬ್ಬರು ಐ.ಪಿ.ಎಸ್ ಅಧಿಕಾರಿಗಳಾದ ಡಾ. ಪ್ರಣಬ್ ಮೊಹಂತಿ, ಡಾ. ಚಂದ್ರಗುಪ್ತ ಅವರನ್ನೂ ವರ್ಗಾವಣೆ ಮಾಡಿ ಆದೇಶಿಸಲಾಗಿದೆ.



