Kannada NewsKarnataka NewsPolitics

**ಸರ್ಕಾರ ಪಾಪರ್ ಆಗಿರೋದಕ್ಕೆ ಇದಕ್ಕಿಂತ ಉದಾಹರಣೆ ಬೇಕಾ? ಆರ್.ಅಶೋಕ್ ಪ್ರಶ್ನೆ*

ಪ್ರಗತಿವಾಹಿನಿ ಸುದ್ದಿ: ಕೇಂದ್ರಕ್ಕೆ ಸಿಎಂ ಡಿಕೆ ಶಿವಕುಮಾರ್​​ ಡೆಡ್​ಲೈನ್: ಸರ್ಕಾರ ಪಾಪರ್ ಆಗಿರೋದಕ್ಕೆ ಇದಕ್ಕಿಂತ ಉದಾಹರಣೆ ಬೇಕಾ? ಆರ್.ಅಶೋಕ್
ಬರ ಪರಿಹಾರ ವಿಚಾರದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೇಂದ್ರ ಸರ್ಕಾರಕ್ಕೆ​​ ಡೆಡ್​ಲೈನ್ ನೀಡಿರುವ ವಿಚಾರಕ್ಕೆ ವಿಪಕ್ಷ ನಾಯಕ ಆರ್.ಅಶೋಕ್ ಪ್ರತಿಕ್ರಿಯೆ ನೀಡಿದ್ದಾರೆ.

ಬೆಳಗಾವಿ ಅಧಿವೇಶನದೊಳಗೆ ಕೇಂದ್ರ ಸರ್ಕಾರ ಬರ ಪರಿಹಾರ ಬಿಡುಗಡೆ ಮಾಡಬೇಕು ಎಂದು ಸಿಎಂ ಡಿ.ಕೆ.ಶಿವಕುಮಾರ್ ಗಡುವು ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಆರ್​. ಅಶೋಕ್​​, ರಾಜ್ಯ ಸರ್ಕಾರ ಪಾಪರ್ ಆಗಿರೋದಕ್ಕೆ ಇದಕ್ಕಿಂತ ಉದಾಹರಣೆ ಬೇಕಾ? ಎಂದು ಪ್ರಶ್ನಿಸಿದ್ದಾರೆ.

ಎಲ್ಲ ಕೋರ್ಟ್‌ನಲ್ಲೇ ತೀರ್ಮಾನ ಆಗುತ್ತಾ? ಎಂದು ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ದೇಶದ ಎಲ್ಲಾ ರಾಜ್ಯಗಳ ಬಗ್ಗೆ ಒಂದೇ ಸಭೆ ಆಗೋದು. ಕಾನೂನಿನ ಬಗ್ಗೆ ಅಧಿಕಾರಿಗಳು ಸಿಎಂ ಡಿ.ಕೆ.ಶಿವಕುಮಾರ್‌ಗೆ ಹೇಳಬೇಕು. ಇವರು ಕೋರ್ಟ್​​ಗೆ ಹೋಗುವುದು ಬರ ಪರಿಹಾರ ನೀಡುವುದು ತಡ ಮಾಡಲು. ಅನ್ಯಾಯ ಅಂತೀರಲ್ಲ, ಮನಮೋಹನ್ ಸಿಂಗ್ ಇದ್ದಾಗ ಕರ್ನಾಟಕಕ್ಕೆ‌ ಎಷ್ಟು ಹಣ ಕೊಟ್ಟಿದ್ದಾರೆ? ಮೋದಿ ಎಷ್ಟು ಬರ ಪರಿಹಾರ ಕೊಟ್ಟಿದ್ದಾರೆ ಹೇಳಿ. ಗೊಡ್ಡು ಬೆದರಿಕೆಗೆ ಹೆದರುವುದಿಲ್ಲ, ಪಾಪರ್ ಆಗಿದ್ದೀವಿ ಅಂತಾ ಹೇಳಿ. ಆಮೇಲೆ ಬೇಕಾದರೆ ನಾವು ಸರ್ವ ಪಕ್ಷ ನಿಯೋಗದಲ್ಲಿ ಹೋಗೋಣ ಎಂದು ​ ಹೇಳಿದ್ದಾರೆ.

ಸಿಎಂ ಎಡಬಿಡಂಗಿತನ, ಖಾದರ್ ದುರಹಂಕಾರದ ಹೇಳಿಕೆಗಳಿಂದ ಆಶಾ ಕಾರ್ಯಕರ್ತೆಯರಿಗೆ ನೋವುಂಟಾಗಿದೆ. ಇತ್ತೀಚೆಗೆ ಮುಂದುವರಿದ ದೇಶ ಜಪಾನ್ ಪ್ರವಾಸಕ್ಕೆ ಸಿಎಂ ಹೋಗಿದ್ರು. ಜಪಾನ್ ರೀತಿ ಸಿಎಂ ಆಶಾಗಳ ಸಮಸ್ಯೆ ಬಗೆಹರಿಸ್ತಾರೆಂದು ಅಂದುಕೊಂಡಿದ್ವಿ. ಬೆಳಗಾವಿ ಅಧಿವೇಶನ ಆರಂಭವಾಗುತ್ತಿದೆ, ಆಶಾಗಳಿಗೆ ನ್ಯಾಯ ಕೊಡಬೇಕು. ಹೀಗಾಗಿ ನಾವು ಸಹ ಹೋರಾಟ ಮಾಡುತ್ತೇವೆ. ಡಿಕೆಶಿ ಸರ್ಕಾರವನ್ನು ಸುಮ್ಮನೇ ಕೇಳುತ್ತಿಲ್ಲ, ಹೇಳಿದಂತೆ ನಡೆದುಕೊಳ್ಳಿ. ಆಶಾಗಳಿಗೆ 15 ಸಾವಿರ ಕೊಡ್ತೀವಿ ಅಂತಾ ಕೇಂದ್ರ ಸರ್ಕಾರ ಹೇಳಿತ್ತಾ? ಮೋದಿ ಹಲವು ಚುನಾವಣಾ ಪ್ರಚಾರ ಮಾಡಿದ್ದಾರೆ, ಎಂದಾದ್ರೂ ಹೇಳಿದ್ದಾರಾ? ಎಂದು ಅಶೋಕ್​​ ಪ್ರಶ್ನಿಸಿದ್ದಾರೆ. ಇದು ಮಾತು ತಪ್ಪಿದ, ಮೋಸ ಮಾಡಿದ, ಬೆನ್ನಿಗೆ ಚೂರಿ ಹಾಕಿದ ಸರ್ಕಾರ ಎಂದು ​​ ಕಿಡಿ ಕಾರಿದ್ದಾರೆ.

Related Articles

Back to top button