Latest

ಚಿನ್ನದ ದರದಲ್ಲಿ ಭಾರೀ ಇಳಿಕೆ

ಪ್ರಗತಿವಾಹಿನಿ ಸುದ್ದಿ; ಮುಂಬೈ: ಕಳೆದ ಮೂರು ವಾರಗಳಿಂದ ಚಿನ್ನದ ದರದಲ್ಲಿ ಭಾರೀ ಇಳಿಕೆಯಾಗಿದ್ದು, ದೀಪಾವಳಿ ಬಳಿಕವೂ ಇಳಿಕೆಯತ್ತ ಸಾಗಿರುವುದು ಅಚ್ಚರಿ ತಂದಿದೆ.

10 ಗ್ರಾಂ ಚಿನ್ನದ ದರದಲ್ಲಿ ಈ ಅವಧಿಯಲ್ಲಿ ಸುಮಾರು 4000 ರೂ ಇಳಿಕೆಯಾಗಿದೆ. ಗುರುವಾರ 10 ಗ್ರಾಂ ಚಿನ್ನದ ದರ 48,517 ರೂಪಾಯಿ ಇತ್ತು. ಇಂದು 24 ಕ್ಯಾರೆಟ್ ನ 10 ಗ್ರಾಂ ಚಿನ್ನದ ದರ 48,800 ರೂ ಇದೆ.

ಇನ್ನು 22 ಕ್ಯಾರೆಟ್ ನ 10 ಗ್ರಾಂ ಚಿನ್ನದ ದರ 47,800 ರೂ ಇದ್ದು, ನಿನ್ನೆಗಿಂತ 50 ರೂ ಕಡಿಮೆಯಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button