Kannada NewsLatest

*ಭೀಕರ ಅಪಘಾತ; 6 ಜನ ಸ್ಥಳದಲ್ಲೇ ದುರ್ಮರಣ*

ಪ್ರಗತಿವಾಹಿನಿ ಸುದ್ದಿ; ಥಾಣೆ: ಕಂಟೈನರ್ ಹಾಗೂ ಜೀಪ್ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ 6 ಜನರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಥಾಣೆಯ ಭೀವಂಡಿ ನಾಸಿಕ್ ರಸ್ತೆ ಬಳಿ ಸಂಭವಿಸಿದೆ.

ಖಡ್ವಾಲಿ ಗ್ರಾಮದಲ್ಲಿ ಈ ದುರಂತ ಸಂಭವಿಸಿದ್ದು, ಕಂಟೈನರ್ ಗೆ ಎದುರಿನಿಂದ ಬಂದ ಜೀಪ್ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ 6 ಜನರು ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಮೃತರನ್ನು ಚಿನ್ಮಯಿ ವಿಕಾಶ್ ಶಿಂಧೆ (15), ರಿಯಾ ಕಿಶೋರ್, ಚೈತಾಲಿ, ಸಂತೋಷ್ ಅನಂತ್ ಜಾಧವ್, ವಸಂತ್ ಧರ್ಮ ಜಾಧವ್, ಪ್ರಜ್ವಲ್ ಫಿರ್ಕೆ ಎಂದು ಗುರುತಿಸಲಾಗಿದೆ.

ಗಾಯಾಳುಗಳನ್ನು ಭೀವಂಡಿಯ ಅಜಿಎಂ ಆಸ್ಪತ್ರೆಗೆ ದಾಖಲಿಸಲಾಗಿದೆ.


Related Articles

Back to top button