Latest

ವಿವಾದದ ಸುಳಿಯಲ್ಲಿ ಗಂಗೂಬಾಯಿ ಕಾಠಿಯಾವಾಡಿ ಸಿನಿಮಾ; ಅದೇನು ವಿವಾದ? ಈ ಸುದ್ದಿ ಓದಿ

ಪ್ರಗತಿವಾಹಿನಿ ಸುದ್ದಿ; ಮುಂಬೈ: ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಬಹುನಿರೀಕ್ಷಿತ ಬಾಲಿವುಡ್ ಚಿತ್ರ ಗಂಗೂಬಾಯಿ ಕಾಠಿಯಾವಾಡಿ ಸಿನಿಮಾ ಇದೀಗ ವಿವಾದಕ್ಕೀಡಾಗುವ ಲಕ್ಷಣಗಳು ಕಂಡುಬರುತ್ತಿವೆ.

ಗಂಗೂಬಾಯಿ ಕಾಠಿಯಾವಾಡಿ ಸಿನಿಮಾ ಟ್ರೇಲರ್ ಈಗಾಗಲೇ ಬಿಡುಗಡೆಯಾಗಿದ್ದು, ಬನ್ಸಾಲಿ ಸಿನಿಮಾ ಮೇಕಿಂಗ್, ಆಲಿಯಾ ಭಟ್ ಅವರ ವಿಭಿನ್ನ ಅಭಿನಯ, ಅಜಯ್ ದೇವಗನ್ ಪಾತ್ರ ಸೇರಿದಂತೆ ಹಲವು ದೃಶ್ಯಗಳು ಟ್ರೇಲರ್ ನಲ್ಲಿ ಗಮನ ಸೆಳೆಯುತ್ತಿದೆ. ಇಡಿ ಚಿತ್ರ ರೆಟ್ರೋ ಶೈಲಿಯಲ್ಲಿ ಮೂಡಿ ಬಂದಂತಿದೆ. ಆದರೆ ಸಿನಿಮಾದ ಟೈಟಲ್ ಇದೀಗ ವಿವಾದಕ್ಕೀಡಾಗುವ ಸಾಧ್ಯತೆ ದಟ್ಟವಾಗಿದೆ.

Home add -Advt

ಮುಂಬೈನ ಕಾಮಾಟಿಪುರದ ವೇಶ್ಯೆಯಾಗಿದ್ದ ಗಂಗೂಬಾಯಿ ಕಾಠಿಯಾವಾಡಿ ಕಾಮಾಟಿಪುರದ ಡಾನ್ ಆಗಿ ಮೆರೆದಿದ್ದ ಕಥಾ ಹಂದರವುಳ್ಳ ಸಿನಿಮಾ ಇದಾಗಿದೆ. ಸಿನಿಮಾದ ಶೀರ್ಷಿಕೆಯೇ ವಿವಾದದ ಕೇಂದ್ರಬಿಂದುವಾಗಲಿದೆ ಎನ್ನಲಾಗುತ್ತಿದೆ.

ಕರ್ನಾಟಕದ ಹಿರಿಯ ಗಾಯಕಿ ಗಂಗೂಬಾಯಿ ಹಾನಗಲ್ ಅವರದ್ದು ಸಂಗೀತ ಕ್ಷೇತ್ರದಲ್ಲಿ ಹೆಸರುವಾಸಿ. ಇದೀಗ ಬಾಲಿವುಡ್ ಸಿನಿಮಾ ಟೈಟಲ್ ಗಂಗೂಬಾಯಿ ಹಾನಗಲ್ ಅವರಿಗೆ ಅಪಮಾನವಾಗುತ್ತಿದೆ. ಸಿನಿಮಾ ಹೆಸರು ಬದಲಿಸಬೇಕು ಎಂದು ಗಂಗೂಬಾಯಿ ಹಾನಗಲ್ ಅಭಿಮಾನಿಗಳು, ಕನ್ನಡ ಜಾಗೃತಿ ವೇದಿಕೆ ಆಗ್ರಹವಾಗಿದೆ. ಒಟ್ಟಾರೆ ಸಂಜಯ್ ಲೀಲಾ ಬನ್ಸಾಲಿ ಅವರ ಹೊಸ ಚಿತ್ರ ಗಂಗೂಬಾಯಿ ಕಾಠಿಯಾವಾಡಿ, ರಾಜ್ಯದಲ್ಲಿ ತೆರೆ ಕಾಣಲು ಅಡ್ದಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಬಿಕಿನಿಯಲ್ಲಿ ಮಹಿಳೆಗೆ ಪ್ರ್ಯಾಂಕ್ ; ಸಾರಾ ನಾಟಕ ನೋಡಿ ಹಿಗ್ಗಾ ಮುಗ್ಗಾ ತರಾಟಗೆ ತೆಗೆದುಕೊಂಡ ಫ್ಯಾನ್ಸ್ ; ಸ್ವಿಮ್ಮಿಂಗ್ ಪೂಲ್ ಎದುರು ಬಾಲಿವುಡ್ ನಟಿ ಹುಚ್ಚಾಟ

Related Articles

Back to top button