Kannada NewsKarnataka News

ಆನಂದ ಮಾಮನಿ ಅಂತಿಮ ದರ್ಶನ ಪಡೆದ ಹೆಬ್ಬಾಳಕರ್, ಹಟ್ಟಿಹೊಳಿ

 ಪ್ರಗತಿವಾಹಿನಿ ಸುದ್ದಿ,  ಬೆಳಗಾವಿ:  ವಿಧಾನ ಸಭೆಯ ಉಪಾಧ್ಯಕ್ಷ ಆನಂದ ಮಾಮನಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಹಾಗೂ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಮಾಮನಿ ಅವರ ಅಕಾಲಿಕ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಈ ವೇಳೆ ಮಾತನಾಡಿದ ಹೆಬ್ಬಾಳಕರ್, ಆನಂದ ಮಾಮನಿ ಬಹಳ ಸೌಮ್ಯ ಸ್ವಭಾವದವರಾಗಿದ್ದರು. ಅಪಾರ ಜನಪ್ರಿಯತೆ ಹೊಂದಿದ್ದರು. ನಮ್ಮ ಹರ್ಷ ಸಕ್ಕರೆ ಕಾರ್ಖಾನೆಗೆ ಎಲ್ಲ ರೀತಿಯ ಸಹಕಾರ ನೀಡುತ್ತಿದ್ದರು. ನಮ್ಮೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಅವರ ಅಕಾಲಿಕ ನಿಧನ ದುಃಖವನ್ನುಂಟುಮಾಡಿದೆ ಎಂದರು.

Home add -Advt

ಮಾಮನಿ ಅವರ ಅಕಾಲಿಕ ನಿಧನದ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ತಾಯಿ, ಪತ್ನಿ, ಚಿಕ್ಕ ಮಕ್ಕಳು ಹಾಗೂ ಕುಟುಂಬಸ್ಥರಿಗೆ ದೇವರು ನೀಡಲಿ ಎಂದು ಅವರು ಪ್ರಾರ್ಥಿಸಿದರು.

 

ಕರ್ನಾಟಕ ಸಾಮರಸ್ಯದ ನಾಡೆಂಬುದು ಭಾರತ್ ಜೋಡೋ ಯಾತ್ರೆಯಿಂದ ಸಾಬೀತಾಗಿದೆ: ರಾಹುಲ್ ಗಾಂಧಿ

https://pragati.taskdun.com/latest/bharat-jodo-yatra-proves-that-karnataka-is-a-land-of-harmony-rahul-gandhi/

ಬೆಳಗಾವಿ: ಬೆಚ್ಚಿಬೀಳಿಸಿದ ಹೈಸ್ಕೂಲ್ ವಿದ್ಯಾರ್ಥಿಯ ಮರ್ಡರ್; ಕೊಲೆಗೈದ ಹದಿಹರೆಯದವರು ಪೊಲೀಸ್ ಬಲೆಗೆ

https://pragati.taskdun.com/belgaum-news/three-accused-arrested-in-highschool-student-murder-case/

Related Articles

Back to top button