Cancer Hospital 2
Beereshwara 36
LaxmiTai 5

*ನಾಪತ್ತೆಯಾಗಿದ್ದ ಶಿಕ್ಷಕಿ ಅನ್ಯಕೋಮಿನ ಯುವಕನ ಜೊತೆ ಪತ್ತೆ; ಲವ್ ಜಿಹಾದ್ ಆರೋಪ*

Anvekar 3
GIT add 2024-1

ಪ್ರಗತಿವಾಹಿನಿ ಸುದ್ದಿ: ಕೆಲ ದಿನಗಳ ಹಿಂದೆ ನಾಪತ್ತೆಯಾಗಿದ್ದ ಕಾಸರಗೋಡು ಶಾಲೆಯ ಶಿಕ್ಷಕಿಯೊಬ್ಬರು ಇದೀಗ ಅನ್ಯಕೋಮಿನ ಯುವಕನ ಜೊತೆ ಪತ್ತೆಯಾಗಿದ್ದು, ಲವ್ ಜಿಹಾದ್ ಆರೋಪ ಕೇಳಿಬಂದಿದೆ.

ಮೇ 23ರಂದು ಮನೆಯಿಂದ ಹೊರಟಿದ್ದ ಶಿಕ್ಷಕಿ ಯುವತಿ ನಾಪತ್ತೆಯಾಗಿದ್ದರು. ಬದಿಯದ್ಕ ಠಾಣೆಯಲ್ಲಿ ಯುವತಿಯ ತಂದೆ ದೂರು ದಾಖಲಿಸಿದ್ದರು. ಇದೀಗ ಯುವತಿ ಅನ್ಯಕೋಮಿನ ಯುವಕನ ಜೊತೆ ಪತ್ತೆಯಾಗಿದ್ದು, ಇಬ್ಬರೂ ವಿವಾಹವಾಗಿದ್ದಾರೆ ಎನ್ನಲಾಗಿದೆ.

Emergency Service

ಬದಿಯಡ್ಕ ರಿಜಿಸ್ಟ್ರಾರ್ ಕಚೇರಿಯಲ್ಲಿ ಇಬ್ಬರ ಭಾವಚಿತ್ರವಿರುವ ನೋಟಿಸ್ ಪತ್ತೆಯಾಗಿದೆ. ರಿಜಿಸ್ಟ್ರಾರ್ ಕಚೇರಿಯಲ್ಲಿ ಯುವತಿ ವಿವಾಹವಾಗಿ, ಮೇ 27ರಂದು ಬದಿಯಡ್ಕ ಪೊಲೀಸ್ ಠಾಣೆಗೆ ಬಂದು ಜೋಡಿ ಹಾಜರಾಗಿದೆ.

ಇದೊಂದು ಲವ್ ಜಿಹಾದ್ ಪ್ರಕರಣವಾಗಿದ್ದು, ಪೊಲೀಸರಿಗೆ ಮಾಹಿತಿ ಇದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಲವ್ ಜಿಹಾದ್ ಗೆ ಕೇರಳದ ಮುಸ್ಲಿಂ ಲೀಗ್ ನೇತಾರನೊಬ್ಬನ ತಂತ್ರ ಅಡಗಿದೆ ಎಂದು ಹಿಂದೂ ಪರ ಸಂಘಟನೆಗಳು ಆರೋಪಿಸಿವೆ.


Bottom Add3
Bottom Ad 2