Latest

*ನೂರಕ್ಕೆ ನೂರರಷ್ಟು ಗೆಲ್ತೇನೆ ಡೌಟೇ ಇಲ್ಲ ಎಂದ ಸಿದ್ದರಾಮಯ್ಯ*

ಪ್ರಗತಿವಾಹಿನಿ ಸುದ್ದಿ; ಹಾವೇರಿ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಾನು ಕೊಲಾರದಿಂದ ನೂರಕ್ಕೆ ನೂರರಷ್ಟು ಗೆಲ್ಲುತ್ತೇನೆ. ಇದರಲ್ಲಿ ಡೌಟೇ ಇಲ್ಲ ಎಂದು ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಹಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಕೋಲಾರದಲ್ಲಿ ನನ್ನ ಗೆಲುವು ಖಚಿತ. ಕಾಂಗ್ರೆಸ್ ನಲ್ಲಿ ಯಾವುದೇ ಅಸಮಾಧನಾವೂ ಇಲ್ಲ. ಆಸ್ತಿ ಬೇಕಾದರೂ ಮಾರಲು ಸಿದ್ದರಿದ್ದೇವೆ ಕೋಲಾರದಿಂದಲೇ ಸ್ಪರ್ಧಿಸುವಂತೆ ಜನರು ಒತ್ತಾಯಿಸುತ್ತಿದ್ದಾರೆ. ಅಂತೆ ಕಂತೆಗಳ ಮಾತು ಬೇಕಿಲ್ಲ, ಅದರ ಬಗ್ಗೆ ಕಿವಿಗೊಡುವುದೂ ಇಲ್ಲ. ನೂರಕ್ಕೆ ನೂರರಷ್ಟು ಕೋಲಾರದಲ್ಲಿ ಗೆದ್ದೇ ಗೆಲ್ಲುತ್ತೇನೆ ಎಂದು ಹೇಳಿದ್ದಾರೆ.

Home add -Advt

ಸಿದ್ದರಾಮಯ್ಯ ಏನು ಮಾಡಿದ್ರು? ಎಂದು ಕೆಲವರು ಟೀಕಿಸುತ್ತಾರೆ. ಟೀಕೆ ಮಾಡುವವರಿಗೆ ನಾನು ಹೆದರುವವನಲ್ಲ. ಮಾಡುವ ಕೆಲಸ ನ್ಯಾಯಯುತವಾಗಿದ್ದರೆ ಯಾರೇ ಹೇಳಿದ್ರೂ ನಿಲ್ಲಿಸಲ್ಲ, ಅಧಿಕಾರ ಬರುತ್ತೆ ಹೋಗುತ್ತೆ ಆದ್ರೆ ನಾವು ಮಾಡಿದ ಕೆಲಸ ಮಾತ್ರ ಶಾಶ್ವತವಾಗಿರುತ್ತದೆ ಎಂದರು.

*ಕೆಟ್ಟದ್ದನ್ನು ನೋಡಲ್ಲ, ಕೇಳಲ್ಲ, ಮಾಡಲ್ಲ; ಅಗ್ನಿಪರೀಕ್ಷೆ… ತಾಳ್ಮೆ ಮುಖ್ಯ ಎಂದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್*

https://pragati.taskdun.com/belagavimla-lakshmi-hebbaalkarchikkamagalorereaction/

Related Articles

Back to top button