National

*ಉಗ್ರರಿಗೆ ಕಠಿಣ ಶಿಕ್ಷೆ ಕೊಟ್ಟೇ ಕೊಡುತ್ತೇವೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ*

ಪ್ರಗತಿವಾಹಿನಿ ಸುದ್ದಿ : ಪಹಲ್ಗಾಮ್ ನಲ್ಲಿ ನಡೆದ ದಾಳಿಯಿಂದ ಹೃದಯದಲ್ಲಿ ಆಳವಾದ ನೋವು ಇದೆ. ಉಗ್ರರಿಗೆ ಕಠಿಣ ಶಿಕ್ಷೆ ಕೊಟ್ಟೇ ಕೊಡುತ್ತೇವೆಂದು ಮಾನ್ ಕಿ ಬಾತ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 

ಪಹಲ್ಗಾಮ್ ನಲ್ಲಿ ನಡೆದ ದಾಳಿಯ ಬಗ್ಗೆ ನಮ್ಮಲ್ಲಿ ಎಷ್ಟು ಕೋಪ, ನೋವು ಇದೆಯೋ ಅಷ್ಟೇ ನೋವು, ಇಡೀ ಜಗತ್ತಿನಾದ್ಯಂತ ಇದೆ, ಈ ದಾಳಿಯನ್ನು ಇಡೀ ವಿಶ್ವವೇ ಖಂಡಿಸಿದೆ, ಅಮಾಯಕರನ್ನು ಕೊಂದಿರುವ ವಿಷಯ ಕೇಳುವಾಗಲೆಲ್ಲ ರಕ್ತ ಕುದಿಯುತ್ತದೆ. ಈಗಾಗಲೇ ದಾಳಿಗೆ ಭಾರತೀಯ ಸೇನೆಯು ಪ್ರತಿದಾಳಿ ನಡೆಸುತ್ತಿದೆ ಎಂದರು.

Home add -Advt

ದಾಳಿಯಲ್ಲಿ ಮೃತಪಟ್ಟ ಸಂತ್ರಸ್ತರಿಗೆ ನ್ಯಾಯ ಸಿಗುತ್ತದೆ. ಬಲಿಪಶುಗಳ ಕುಟುಂಬಗಳಿಗೆ ಪ್ರತಿಯೊಬ್ಬ ಭಾರತೀಯನೂ ಸಹಾನುಭೂತಿ ಹೊಂದಿದ್ದಾನೆ, ಉಗ್ರರಿಗೆ ಕಠಿಣ ಶಿಕ್ಷೆ ಕೊಟ್ಟೇ ಕೊಡುತ್ತೇವೆಂದು ಭರವಸೆ ನೀಡಿದಿದ್ದಾರೆ. 

ಇನ್ನು ಇದೇ ವೇಳೆ ವಿಶ್ವ ಪರಿಸರ ದಿನದ ಪ್ರಯುಕ್ತ ಪ್ರತಿಯೊಬ್ಬರೂ ಕೂಡ ಅಮ್ಮನ ಹೆಸರಿನಲ್ಲಿ ಒಂದು ಮರ ನೆಡಿ ಎಂದು ಪ್ರಧಾನಿ ಕರೆ ನೀಡಿದ್ದಾರೆ.  ಈ ಒಂದು ವರ್ಷದಲ್ಲಿ ದೇಶಾದ್ಯಂತ 1.4 ಶತಕೋಟಿಗೂ ಹೆಚ್ಚು ಮರಗಳನ್ನು ನೆಡಲಾಗಿದೆ. ಭಾರತದ ಉಪಕ್ರಮವನ್ನು ನೋಡಿದರೆ, ವಿದೇಶದಲ್ಲಿರುವ ಜನರು ಸಹ ತಮ್ಮ ತಾಯಂದಿರ ಹೆಸರಿನಲ್ಲಿ ಮರಗಳನ್ನು ನೆಟ್ಟಿದ್ದಾರೆ. ನೀವು ಸಹ ಈ ಅಭಿಯಾನಕ್ಕೆ ಸೇರಬೇಕು ಎಂದು ಪಿಎಂ ತಿಳಿಸಿದರು.

Related Articles

Back to top button