Kannada NewsKarnataka NewsNational
*ನಡುರಸ್ತೆಯಲ್ಲೇ ಮಹಿಳೆಯ ಜುಟ್ಟು ಹಿಡಿದು ಥಳಿತ*

ಪ್ರಗತಿವಾಹಿನಿ ಸುದ್ದಿ: ನಡುರಸ್ತೆಯಲ್ಲಿ ಸ್ನೇಹಿತನಿಂದಲೇ ಮಹಿಳೆ ಮೇಲೆ ಹಲ್ಲೆ ನಡೆಸಲಾಗಿದೆ. ಜುಟ್ಟು ಹಿಡಿದು ವ್ಯಕ್ತಿ ಎಳೆದಾಡಿದ್ದಾನೆ. ದೆಹಲಿಯ ಗ್ರೇಟರ್ ನೋಯ್ದಾದ ಒಮೇಕ್ಸ್ ಪಾಮ್ ಗ್ರೀನ್ ಸೊಸೈಟಿ ಅಂಗಳದಲ್ಲಿ ಘಟನೆ ನಡೆದಿದೆ.
ಸೂರ್ಯ ಎಂಬ ವ್ಯಕ್ತಿ ಏಕಾಏಕಿ ಆತನ ಸ್ನೇಹಿತೆಗೆ ಥಳಿಸಿದ್ದಾನೆ. ರಸ್ತೆಯಲ್ಲಿ ಕೂದಲು ಹಿಡಿದು ಎಳೆದಾಡಿದ್ದಾನೆ. ಅವಾಚ್ಯವಾಗಿ ನಿಂದಿಸಿದ್ದು, ಮನಬಂದಂತೆ ಹಲ್ಲೆ ಮಾಡಿ ಏನೂ ಗೊತ್ತಿಲ್ಲದ ರೀತಿ ನಡೆದುಕೊಂಡು ಹೋಗಿದ್ದಾನೆ. ಸೂರ್ಯನ ಉದ್ಧಟತನ ನೋಡಿದ ಸ್ಥಳೀಯರು ಧಾವಿಸಿ ಯುವತಿಯನ್ನ ರಕ್ಷಿಸಿದ್ದಾರೆ. ಸೂರ್ಯನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹೆಚ್ಚಿನ ವಿಚಾರಣೆ ಕೈಗೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಯುವಕ ಹಲ್ಲೆ ನಡೆಸಿರುವ ವಿಡಿಯೋ ವೈರಲ್ ಆಗಿದೆ.




