Latest

ಈಗ  ಶ್ರೀರಾಮ  ಮಂದಿರದ  ಆಶ್ವಾಸನೆ  ಪೂರ್ಣ  ಮಾಡಬೇಕು

ಅಷ್ಟಮ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ ಆರಂಭ !

ರಾಮನಾಥಿ (ಗೋವಾ):

ಅಯೋಧ್ಯೆಯ ಶ್ರೀರಾಮಮಂದಿರದ ವಿಷಯದಲ್ಲಿ ಭಾಜಪ ಸರ್ಕಾರ ಹಿಂದಿನ ಆಡಳಿತಾವಧಿಯಲ್ಲಿಯೇ ಶ್ರೀರಾಮಮಂದಿರ ನಿರ್ಮಾಣದ ಸುಗ್ರಿವಾಜ್ಞೆಯನ್ನು ತರಬೇಕು ಎಂದು ಹಿಂದೂಗಳ ಅಪೇಕ್ಷೆಯಾಗಿತ್ತು. ಇಂದಿನ ಲೋಕಸಭೆಯ ಚುನಾವಣೆಯಲ್ಲಿ ಭಾಜಪ ಶ್ರೀರಾಮಮಂದಿರವನ್ನು ನಿರ್ಮಿಸುವ ಆಶ್ವಾಸನೆಯನ್ನು ನೀಡಿದ್ದರಿಂದ ಜನರುತೋರಿಸಿರುವ ವಿಶ್ವಾಸವನ್ನು ಗೌರವಿಸಿ ಸರ್ಕಾರ ಸ್ಥಾಪನೆ ಆಗುತ್ತಿದ್ದಂತೆ ಶ್ರೀರಾಮಮಂದಿರದ ಆಶ್ವಾಸನೆಯನ್ನು ಪೂರ್ಣ ಮಾಡುವ ದೃಷ್ಟಿಯಿಂದ ಪ್ರಯತ್ನ ಮಾಡುವುದು ಆವಶ್ಯಕವಿದೆ ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರಾದ ಸದ್ಗುರು (ಡಾ.) ಚಾರುದತ್ತ ಪಿಂಗಳೆಯವರು ಆಗ್ರಹಿಸಿದರು.

ಶ್ರೀ ರಾಮನಾಥ ದೇವಸ್ಥಾನದ ಶ್ರೀವಿದ್ಯಾಧಿರಾಜ ಸಭಾಂಗಣದಲ್ಲಿ ಇಂದು ‘ಅಷ್ಟಮ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ದ ಉದ್ಘಾಟನೆಯ ಸಮಯದಲ್ಲಿಅವರು ಮಾತನಾಡುತ್ತಿದ್ದರು.

‘ಭಾಜಪ ಸರ್ಕಾರ ಅಲಾಹಬಾದನ ಹೆಸರನ್ನು ‘ಪ್ರಯಾಗರಾಜ’ ಎಂದು ನಾಮಕರಣ ಮಾಡಿ, ಅದೇ ರೀತಿ ಕುಂಭಮೇಳದಲ್ಲಿ ಸೂಕ್ತ ಆಯೋಜನೆಯನ್ನು ಮಾಡಿ ಒಂದು ಉತ್ತಮ ಕೃತಿಯನ್ನು ಮಾಡಿದೆ;ಆದರೆ ಶ್ರೀರಾಮಮಂದಿರದ ನಿರ್ಮಾಣ ಮಾಡದಿದ್ದಲ್ಲಿ ಹಿಂದೂಗಳ ಮನಸ್ಸಿನಲ್ಲಿ ‘ಆಶ್ವಾಸನೆಯನ್ನು ನೀಡಿ ವಿಶ್ವಾಸದ್ರೋಹಮಾಡಿದ’ ಭಾವನೆಯು ಪ್ರಬಲವಾಗಬಹುದು’, ಎಂದೂ ಅವರು ಹೇಳಿದರು.

ಆರಂಭದಲ್ಲಿ ಭಾಗೀರಥಿ ಮಹಾರಾಜ, ಸ್ವಾಮಿ ಶ್ರೀರಾಮಜ್ಞಾನದಾಸಜಿ ಮಹಾರಾಜ, ಬಂಗಾಲದಲ್ಲಿಯ ಶ್ರೀ ಸತ್ಯಾನಂದಮಹಾಪೀಠದ ಸ್ವಾಮಿ ಆತ್ಮಸ್ವರೂಪಾನಂದಜಿ ಮಹಾರಾಜ, ಸದ್ಗುರು ನಂದಕುಮಾರ ಜಾಧವ, ಸದ್ಗುರು (ಡಾ.)ಚಾರುದತ್ತ ಪಿಂಗಳೆ ಇವರ ಶುಭಹಸ್ತದಿಂದ ದೀಪಪ್ರಜ್ವಲನೆಯನ್ನು ಮಾಡಲಾಯಿತು.

ನಿಲೇಶ ಸಿಂಗಬಾಳ ಅಧಿವೇಶನದ ಉದ್ದೇಶವಿವರಿಸಿದರು. ಮೇ ೨೯ ರಿಂದ ಜೂನ್ ೪ರ ಅವಧಿಯಲ್ಲಿ ನಡೆಯಲಿರುವ ೭ ದಿನಗಳಅಧಿವೇಶನದ ಮೊದಲ ದಿನ ಭಾರತ ಹಾಗೂ ಬಾಂಗ್ಲಾದೇಶದಿಂದ ವಿವಿಧ ಹಿಂದುತ್ವನಿಷ್ಠ ಸಂಘಟನೆಗಳ ೨೪೦ ಕ್ಕಿಂತಲೂ ಹೆಚ್ಚುಪ್ರತಿನಿಧಿಗಳು ಉಪಸ್ಥಿತರಿದ್ದರು. ‘ಹಿಂದೂ ವಿಧಿಜ್ಞ ಪರಿಷತ್ತಿ’ನ ರಾಷ್ಟ್ರೀಯ ಕಾರ್ಯದರ್ಶಿಯಾದ ನ್ಯಾಯವಾದಿ ಸಂಜೀವ ಪುನಾಳೆಕರ ಇವರನ್ನು ‘ಸಿಬಿಐ’ನವರು ಡಾ. ದಾಭೊಲಕರ ಹತ್ಯೆಯ ಪ್ರಕರಣದಲ್ಲಿ ಬಂಧಿಸಿರುವುದನ್ನು’ ಅಷ್ಟಮಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನದಲ್ಲಿ ಖಂಡಿಸಲಾಯಿತು.

ದೇವಸ್ಥಾನವನ್ನು ಸರ್ಕಾರದಿಂದ ಮುಕ್ತ ಮಾಡಲು ಪ್ರಯತ್ನಿಸುವೆವು ! – ನ್ಯಾಯವಾದಿ ಶರದಚಂದ್ರ ಮುಂದರಗಿ

‘ಹಿಂದೂ ವಿಧಿಜ್ಞ ಪರಿಷತ್ತಿನ ಮಾಧ್ಯಮದಿಂದ ರಾಷ್ಟ್ರ ಮತ್ತು ಧರ್ಮದ ಕಾರ್ಯವನ್ನು ಮಾಡುವ ಅವಕಾಶವು ನಮಗೆಲಭ್ಯವಾಗಿದೆ. ಈ ಮಾಧ್ಯಮದಿಂದ ನಾವು ದೇವಸ್ಥಾನವನ್ನು ಸರ್ಕಾರದಿಂದ ಮುಕ್ತ ಮಾಡಲು ಪ್ರಯತ್ನಿಸುವೆವು. ಅದೇ ರೀತಿಮಾಹಿತಿ ಹಕ್ಕು ಕಾನೂನಿನ ಸಹಾಯದಿಂದ ಭ್ರಷ್ಟಾಚಾರ ಮತ್ತು ಇತರ ದುಷ್ಪ್ರವೃತ್ತಿಗಳ ವಿರುದ್ಧ ಹೋರಾಟ ಮಾಡುತ್ತೇವೆ. ಗೋಹತ್ಯೆ, ಲವ್ ಜಿಹಾದ್, ಮತಾಂತರ ಇವುಗಳ ವಿರುದ್ಧ ನಾವು ಹೋರಾಡುವೆವು’, ಎಂದು ಬೆಳಗಾವಿಯ ನ್ಯಾಯವಾದಿ ಶರದಚಂದ್ರ ಮುಂದರಗಿ ಅಭಿಪ್ರಾಯವನ್ನು ವ್ಯಕ್ತ ಪಡಿಸಿದರು.

ದೇಶಾದ್ಯಂತ ಆಂದೋಲನ – ನ್ಯಾಯವಾದಿ ಹರಿ ಶಂಕರ ಜೈನ್

ಶ್ರೀರಾಮಮಂದಿರವು ಹಿಂದೂಗಳ ಅಸ್ಮಿತೆಯ ವಿಷಯವಾಗಿದೆ. ೨೦೧೪ ರಲ್ಲಿ ಭಾಜಪವು ಶ್ರೀರಾಮಮಂದಿರದ ಆಶ್ವಾಸನೆಯನ್ನುನೀಡಿತ್ತು; ಆದರೆ ಅದು ಪೂರ್ಣ ಮಾಡಲಿಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿ ಇವರನ್ನು ಹಿಂದುತ್ವದ ಕಾರ್ಯವನ್ನು ಮಾಡಲಿಕ್ಕಾಗಿ ಹಿಂದೂಗಳು ಮತ್ತೊಮ್ಮೆ ಬಹುಮತದಿಂದ ಆರಿಸಿದರು. ಆದ್ದರಿಂದ ಈಗಲಾದರೂ ಭಾಜಪ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿ ಶ್ರೀರಾಮಮಂದಿರ ಮಾರ್ಗವನ್ನು ಸುಗಮಗೊಳಿಸಬೇಕು. ದೇವಸ್ಥಾನ ನಿರ್ಮಾಣ ಮಾಡದಿದ್ದಲ್ಲಿ, ದೇಶದಲ್ಲಿಯ ಹಿಂದೂ ಸಮಾಜವು ಭುಗಿಲೇಳುವುದು ಮತ್ತು ದೇಶದಾದ್ಯಂತ ಆಂದೋಲನವನ್ನು ಮಾಡುವರು, ಎಂದು ದೆಹಲಿಯ ‘ಹಿಂದೂ ಫ್ರಂಟ್ ಫಾರಜಸ್ಟಿಸ್’ನ ಅಧ್ಯಕ್ಷರಾದ ನ್ಯಾಯವಾದಿ ಹರಿಶಂಕರ ಜೈನ್ ಇವರು ಅಧಿವೇಶನದಲ್ಲಿ ಎಚ್ಚರಿಸಿದರು.

ಪ್ರಸಕ್ತ ನ್ಯಾಯವ್ಯವಸ್ಥೆಯಲ್ಲಿ ನ್ಯಾಯವಿಲ್ಲ ! – ರಾಜೇಂದ್ರ ವರ್ಮಾ, ನ್ಯಾಯವಾದಿ, ಸರ್ವೋಚ್ಚ ನ್ಯಾಯಾಲಯ

ಪ್ರಸಕ್ತ ನ್ಯಾಯವ್ಯವಸ್ಥೆಯಲ್ಲಿ ನ್ಯಾಯ ಸಿಗದೇ ಅದು ಕೇವಲ ತೀರ್ಪಾಗಿರುತ್ತದೆ. ನ್ಯಾಯಾಲಯದಲ್ಲಿ ರಾಮ ಮಂದಿರದ ಸಮಸ್ಯೆ ಬಗೆಹರಿಯುವುದಿಲ್ಲ. ಅದಕ್ಕಾಗಿ ನಾವು ಸಂವಿಧಾನಕ್ಕಿಂತ ಮುಂದೆ ಹೋಗಿ ವಿಚಾರ ಮಾಡಬೇಕಾಗುವುದು. ಅದಕ್ಕಾಗಿ ಜನಾಂದೋಲನ ಮತ್ತು ಹಿಂದೂ ಸಮನ್ವಯ ಆವಶ್ಯಕವಾಗಿದೆ. ಆಧ್ಯಾತ್ಮಿಕ ಬಲದಿಂದಲೇ ಸಾಮಾಜಿಕ ಮತ್ತು ರಾಷ್ಟ್ರದ ವಿಕಾಸವಾಗಲಿದೆ. ಅಲ್ಪಸಂಖ್ಯಾತರ ಓಲೈಕೆಯು ಒಂದು ದೊಡ್ಡ ಸಂಚಾಗಿದೆ’, ಎಂದು ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ರಾಜೇಂದ್ರ ವರ್ಮಾ ‘ಅಲ್ಪಸಂಖ್ಯಾತರ ತುಷ್ಟೀಕರಣದಿಂದಾಗುವ ಭಾರತೀಯ ಸಂಸ್ಕೃತಿ ಹಾನಿ’ ಈ ವಿಷಯದಲ್ಲಿ ಮಾತನಾಡುವಾಗ ಪ್ರತಿಪಾದಿಸಿದರು.
ಈ ಸಮಯದಲ್ಲಿ ‘ಹಿಂದೂ ಸಮಾಜವು ತಮ್ಮ ರಾಜ್ಯವನ್ನು ನಡೆಸಲು ಅರ್ಹತೆ ಮತ್ತು ಸಾಮರ್ಥ್ಯವನ್ನು ಹೇಗೆ ತರಬೇಕು’, ಎನ್ನುವ ವಿಷಯವಾಗಿ ಭೋಪಾಲ (ಮಧ್ಯಪ್ರದೇಶ)ದ ರಾಜಸೂಯ ಹಿಂದೂ ವಿದ್ಯಾ ಕೇಂದ್ರದ ರಾಮೇಶ್ವರಮಿಶ್ರರವರು ಮಾತನಾಡುತ್ತಾ, “ಹಿಂದೂಗಳಲ್ಲಿರುವಷ್ಟು ದೇಶಭಕ್ತಿ ವಿಶ್ವದಲ್ಲಿ ಯಾರಲ್ಲಿಯೂ ಇಲ್ಲ; ಆದರೆ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಇಷ್ಟು ಸಾಕಾಗದೇ ಆತ್ಮಬಲದ ಅವಶ್ಯಕತೆ ಇದೆ. ಸನಾತನ ಶಾಸ್ತ್ರಕ್ಕನುಸಾರ ಮಾರ್ಗಕ್ರಮಣ ಮಾಡಿದರೆ ಮಾತ್ರಹಿಂದೂ ರಾಷ್ಟ್ರದ ಸ್ಥಾಪನೆಯಾಗುವುದು”, ಎಂದರು.
ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿ ಪುರಸ್ಕೃತ ‘ಹಿಂದೂ ರಾಷ್ಟ್ರ : ಆಕ್ಷೇಪ ಮತ್ತು ಖಂಡನೆ’ ಈ ಹಿಂದಿ ಭಾಷೆಯ, ಪ್ರಜಾಪ್ರಭುತ್ವದಲ್ಲಿನ ದುಷ್ಟಪ್ರವೃತ್ತಿಗಳ ವಿರುದ್ಧ ಮಾಡಬೇಕಾದ ಪ್ರತ್ಯಕ್ಷ ಕೃತಿಗಳು’ ಎಂಬ ಕನ್ನಡ ಭಾಷೆಯ, ‘ಜಾಗದ ಲಭ್ಯತೆಗನುಸಾರ ಔಷಧಿ ಸಸ್ಯಗಳನ್ನು ಬೆಳೆಸಿ’ ಈ ಕನ್ನಡ ಭಾಷೆಯ, ಔಷಧಿ ಸಸ್ಯಗಳನ್ನು ಹೇಗೆ ಬೆಳೆಸಬೇಕು ಈ ಕನ್ನಡ ಭಾಷೆಯ ಹಾಗೂ ಸನಾತನದ ‘ಮುಂಡುಗಿಂತ(ಲುಂಗಿಯಂತೆ ವಸ್ತ್ರ) ಧೋತಿ ಶ್ರೇಷ್ಠವಾಗಿರುವುದರ ಶಾಸ್ತ್ರ’, ಎಂಬ ತಮಿಳು ಗ್ರಂಥದ ಪ್ರಕಾಶನಮಾಡಲಾಯಿತು.

ದೀಪ ಪ್ರಜ್ವಲನೆಯ ನಂತರ ಸನಾತನ ಪುರೋಹಿತ ಪಾಠಶಾಲೆಯ ಪುರೋಹಿತರು ವೇದಮಂತ್ರದ ಪಠಣಮಾಡಿದರು. ಈ ಸಂದರ್ಭದಲ್ಲಿ ಕಾಂಚಿ ಕಾಮಕೋಟಿ ಪೀಠಾಧಿಶ್ವರ ಜಗದ್ಗುರು ಶಂಕರಾಚಾರ್ಯ ಸ್ವಾಮಿ ವಿಜಯೇಂದ್ರಸರಸ್ವತಿಯವರು ನೀಡಿದ ಆಶೀರ್ವಚನವನ್ನು ಸನಾತನ ಸಂಸ್ಥೆಯ ಧರ್ಮಪ್ರಸಾರಕರಾದ ಪೂ. ಅಶೋಕ ಪಾತ್ರೀಕರ ಇವರು ಹಾಗೂ ಸನಾತನ ಸಂಸ್ಥೆಯ ಸಂಸ್ಥಾಪಕ ಪರಾತ್ಪರ ಗುರು ಡಾ. ಜಯಂತ ಆಠವಲೆಯವರು ಅಧಿವೇಶನದ ನಿಮಿತ್ತ ನೀಡಿದ ಸಂದೇಶವನ್ನು ಸನಾತನ ಸಂಸ್ಥೆಯ ಧರ್ಮಪ್ರಸಾರಕ ಸದ್ಗುರು ನಂದಕುಮಾರ ಜಾಧವ ಇವರು ಓದಿದರು, ಅಧಿವೇಶನದ ಸೂತ್ರ ಸಂಚಾಲನೆಯನ್ನು ಹಿಂದೂ ಜನಜಾಗೃತಿ ಸಮಿತಿಯ ಸುಮಿತ ಸಾಗವೇಕರ ಇವರು ಮಾಡಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button