*ಜಾಗತಿಕ ‘ಸ್ವಾನ್’ ಹಿರಿಯ ಸಲಹಾ ಸಮಿತಿಗೆ ಭಾರತದ ಏಕೈಕ ಪ್ರತಿನಿಧಿಯಾಗಿ ಜಲಮಂಡಳಿ ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್ ಆಯ್ಕೆ*

ಪ್ರಗತಿವಾಹಿನಿ ಸುದ್ದಿ: ಸ್ಮಾರ್ಟ್ ವಾಟರ್ ವಲಯದ ಜಾಗತಿಕ ಸಂಸ್ಥೆಯಾದ ‘ಸ್ಮಾರ್ಟ್ ವಾಟರ್ ನೆಟ್‌ವರ್ಕ್ಸ್ ಫೋರಮ್’ (SWAN), ತನ್ನ 5ನೇ ‘ಹಿರಿಯ ಯುಟಿಲಿಟಿ ಸಲಹಾ ಸಮಿತಿ’ಯನ್ನು ಪ್ರಕಟಿಸಿದೆ. ಈ ಜಾಗತಿಕ ಹಿರಿಯ ಸಲಹಾ ಸಮಿತಿಗೆ ಭಾರತದ ಏಕೈಕ ಪ್ರತಿನಿಧಿಯಾಗಿ ಬೆಂಗಳೂರು ಜಲಮಂಡಳಿ (BWSSB) ಅಧ್ಯಕ್ಷರಾದ ಡಾ. ರಾಮ್ ಪ್ರಸಾತ್ ಮನೋಹರ್ ಅವರು ಈ ಜಾಗತಿಕ ಗಣ್ಯರ ಸಮಿತಿಗೆ ಆಯ್ಕೆಯಾಗಿದ್ದಾರೆ.
ಈ ಪ್ರತಿಷ್ಠಿತ ಸಮಿತಿಗೆ ಆಯ್ಕೆಯಾದ ಭಾರತದ ಏಕೈಕ ಜಲಮಂಡಳಿ ಮುಖ್ಯಸ್ಥರು ಡಾ. ಮನೋಹರ್ ಆಗಿರುವುದು ವಿಶೇಷವಾಗಿದೆ. ಇವರೊಂದಿಗೆ ಆಸ್ಟ್ರೇಲಿಯಾ, ಕೆನಡಾ, ಪೋರ್ಚುಗಲ್, ಬ್ರೆಜಿಲ್ ಮತ್ತು ಅಮೆರಿಕದ ತಜ್ಞರು ಈ ಸಮಿತಿಯಲ್ಲಿದ್ದಾರೆ.
ಆಯ್ಕೆಯಾದ ಸಮಿತಿ ಸದಸ್ಯರು ಜಾಗತಿಕ ಮಟ್ಟದಲ್ಲಿ ನೀರಿನ ಸವಾಲುಗಳು, ಪ್ರಾದೇಶಿಕ ಟ್ರೆಂಡ್‌ಗಳು ಮತ್ತು ಕಾರ್ಯತಂತ್ರದ ಸಂಶೋಧನಾ ಆದ್ಯತೆಗಳನ್ನು ಗುರುತಿಸಲು ಒಟ್ಟಾಗಿ ಕೆಲಸ ಮಾಡಲಿದ್ದಾರೆ. ಉದ್ಯಮಕ್ಕೆ ನೀಡಿದ ವ್ಯಾಪಕ ಕೊಡುಗೆಯ ಆಧಾರದ ಮೇಲೆ ಆಯ್ಕೆಯಾಗಿರುವ ಈ ತಂಡ, ‘ಸ್ವಾನ್’ನ ಭವಿಷ್ಯದ ಯೋಜನೆಗಳು ಮತ್ತು ಜಾಗತಿಕ ಉಪಕ್ರಮಗಳನ್ನು ಪರಿಶೀಲಿಸಲಿದೆ.
ಇತ್ತೀಚೆಗೆ ಜಲಮಂಡಳಿಯಲ್ಲಿ ಕೃತಕ ಬುದ್ಧಿಮತ್ತೆ (AI) ಮತ್ತು ದತ್ತಾಂಶ-ಆಧಾರಿತ (data-driven) ಉಪಕ್ರಮಗಳನ್ನು ಯಶಸ್ವಿಯಾಗಿ ಅಳವಡಿಸಿಕೊಂಡಿದ್ದಕ್ಕಾಗಿ ಡಾ. ಮನೋಹರ್ ಅವರಿಗೆ ಜಾಗತಿಕ ಮಟ್ಟದಲ್ಲಿ ಈ ನೇರ ಮನ್ನಣೆ ದೊರೆತಿದೆ. ಅವರ ಪ್ರಯತ್ನಗಳಿಂದಾಗಿ ಬೆಂಗಳೂರು ಸ್ಮಾರ್ಟ್ ನೀರು ನಿರ್ವಹಣೆಯ ಪ್ರಮುಖ ಸರ್ಕಾರಿ ಜಲ ನಿರ್ವಹಣಾ ಸಂಸ್ಥೆಯಾಗಿ ಹೊರಹೊಮ್ಮಿದ್ದು, ಭಾರತ ದೇಶದ ನೀರಿನ ಸವಾಲುಗಳು ಮತ್ತು ತಾಂತ್ರಿಕ ಪರಿಹಾರಗಳನ್ನು ಜಾಗತಿಕ ವೇದಿಕೆಯಲ್ಲಿ ಪ್ರತಿನಿಧಿಸಲು ಇದು ಸಹಕಾರಿಯಾಗಿದೆ.
ತಮ್ಮ ಆಯ್ಕೆಯ ಡಾ. ರಾಮ್ ಪ್ರಸಾತ್ ಮನೋಹರ್ ಪ್ರತಿಕ್ರಿಯಿಸಿ ” ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರ ದೂರದೃಷ್ಟಿಯಿಂದ ಬೆಂಗಳೂರು ಜಲಮಂಡಳಿ ಜಾಗತಿಕ ಮಟ್ಟದಲ್ಲಿ ಹೆಸರು ಪಡೆಯಲು ಸಾಧ್ಯವಾಗಿದೆ. ಉಪಮುಖ್ಯಮಂತ್ರಿಗಳ ‘ಬ್ರಾಂಡ್ ಬೆಂಗಳೂರು’ (Brand Bengaluru) ಪರಿಕಲ್ಪನೆಗೆ ಪೂರಕವಾಗಿ, ಜಲಮಂಡಳಿಯು ನಗರದ ಮೂಲಸೌಕರ್ಯವನ್ನು ಉನ್ನತೀಕರಿಸಲು ವಿಶ್ವದರ್ಜೆಯ, ಎಐ-ಚಾಲಿತ ತಂತ್ರಜ್ಞಾನಗಳನ್ನು ಯಶಸ್ವಿಯಾಗಿ ಅಳವಡಿಸಿಕೊಂಡಿದೆ. ಬೆಂಗಳೂರಿನ ನಾಗರಿಕರಿಗೆ ಸೇವೆ ಸಲ್ಲಿಸಲು ಪ್ರತಿದಿನ ಈ ತಾಂತ್ರಿಕ ಯೋಜನೆಗಳನ್ನು ಕಾರ್ಯಗತಗೊಳಿಸುವ ಜಲಮಂಡಳಿಯ ತಾಂತ್ರಿಕ ತಂಡ ಮತ್ತು ಸಿಬ್ಬಂದಿಯ ಅವಿರತ ಶ್ರಮಕ್ಕೆ ನಾನು ಈ ಮೈಲಿಗಲ್ಲನ್ನು ಅರ್ಪಿಸುತ್ತೇನೆ. ಜಾಗತಿಕವಾಗಿ ಸ್ಮಾರ್ಟ್ ವಾಟರ್ ವ್ಯವಸ್ಥೆಯನ್ನು ರೂಪಿಸುವಲ್ಲಿ ‘ಸ್ವಾನ್’ ಸಂಸ್ಥೆಯ ದೂರದೃಷ್ಟಿ ನನಗೆ ಅತ್ಯಂತ ಇಷ್ಟವಾಗಿದೆ. ನಾವು ಇಂದು ಎದುರಿಸುತ್ತಿರುವ ಸಂಕೀರ್ಣ ನೀರಿನ ಸವಾಲುಗಳಿಗೆ ಪ್ರಾಯೋಗಿಕ ಪರಿಹಾರಗಳನ್ನು ಕಂಡುಕೊಳ್ಳಲು ಜಾಗತಿಕ ತಜ್ಞರೊಂದಿಗೆ (UAG) ಕಾರ್ಯನಿರ್ವಹಿಸಲು ನಾನು ಎದುರು ನೋಡುತ್ತಿದ್ದೇನೆ” ಎಂದಿದ್ದಾರೆ.
ಸ್ವಾನ್ (SWAN) 5ನೇ ಯುಟಿಲಿಟಿ ಸಲಹಾ ಸಮಿತಿಯ ಸದಸ್ಯರು:
- ಡಾ. ರಾಮ್ ಪ್ರಸಾತ್ ಮನೋಹರ್, ಅಧ್ಯಕ್ಷರು – ಬೆಂಗಳೂರು ಜಲಮಂಡಳಿ (ಭಾರತ)
- ಜೊನೆಟ್ಟಾ ಇ. ಇಂಗ್ಲಿಷ್ (Zonetta E. English) – ಲೂಯಿಸ್ವಿಲ್ಲೆ ಎಂಎಸ್‌ಡಿ (ಅಮೆರಿಕ)
- ಡೇವಿಡ್ ಹ್ಯೂಸ್-ಓವನ್ (David Hughes-Owen), ಸಿಇಒ – ಬಸ್ಸೆಲ್ಟನ್ ವಾಟರ್ (ಆಸ್ಟ್ರೇಲಿಯಾ)
- ಜೋವಾನಾ ಅರಾಜೊ (Joana Araújo) – ಅಗ್ವಾಸ್ ಇ ಎನರ್ಜಿಯಾ ದೋ ಪೋರ್ಟೊ (ಪೋರ್ಚುಗಲ್)
- ಅರಾಶ್ ಫರಾಜಿಯಾನ್ (Arash Farajian) – ಟೊರೊಂಟೊ ವಾಟರ್ (ಕೆನಡಾ)
- ಡೆನಿಸ್ ಮಾಯಾ (Denis Maia) – ಸಬೆಸ್ಪ್ (ಬ್ರೆಜಿಲ್)
ಈ ಘೋಷಣೆಯು 2026ರ ಜೂನ್ 2 ರಿಂದ 4 ರವರೆಗೆ ಅಮೆರಿಕದ ಫ್ಲೋರಿಡಾದ ಟ್ಯಾಂಪಾದಲ್ಲಿ ನಡೆಯಲಿರುವ ‘ಸ್ವಾನ್ 16ನೇ ವಾರ್ಷಿಕ ಸಮ್ಮೇಳನ’ದ ನಿರೀಕ್ಷೆಯನ್ನು ಹೆಚ್ಚಿಸಿದೆ. ಡಾ. ಮನೋಹರ್ ಸೇರಿದಂತೆ UAG ಸದಸ್ಯರು “ನಿಮ್ಮ ಡಿಜಿಟಲ್ ಪ್ರಯಾಣದ ಅಳವಡಿಕೆ” (Adapting your digital journey) ಎಂಬ ವಿಷಯದ ಮೇಲೆ ನಡೆಯಲಿರುವ ಈ ಸಮ್ಮೇಳನದ ರೂಪುರೇಷೆಗಳಿಗೆ ಕಾರ್ಯತಂತ್ರದ ಸಲಹೆಗಳನ್ನು ನೀಡಲಿದ್ದಾರೆ.
ಸ್ವಾನ್ (SWAN) ಕುರಿತು:
2010 ರಲ್ಲಿ ಸ್ಥಾಪನೆಯಾದ SWAN ಒಂದು ಲಾಭರಹಿತ ಸಂಸ್ಥೆಯಾಗಿದ್ದು, ಪ್ರಪಂಚದಾದ್ಯಂತ ಕುಡಿಯುವ ನೀರು, ತ್ಯಾಜ್ಯನೀರು ಮತ್ತು ಮಳೆನೀರು ಜಾಲಗಳ ನಿರ್ವಹಣೆಯಲ್ಲಿ ಡೇಟಾ-ಚಾಲಿತ “ಸ್ಮಾರ್ಟ್” ಪರಿಹಾರಗಳನ್ನು ಅಳವಡಿಸಿಕೊಳ್ಳಲು ಶ್ರಮಿಸುತ್ತಿದೆ.
SWAN Appoints BWSSB Chairman Dr. Ram Prasath Manohar to Global Senior Utility Advisory Group; Sole Representative from India
LONDON / BENGALURU, February 18, 2026 – The Smart Water Networks Forum (SWAN), the leading global voice for the smart water sector, has announced the formation of its 5th Senior Utility Advisory Group (UAG). In a proud moment for India’s water sector, Dr. Ram Prasath Manohar, Chairman of the Bangalore Water Supply and Sewerage Board (BWSSB), has been selected to join this elite global committee.
Notably, Dr. Manohar is the only utility leader from India appointed to this prestigious cohort. He joins five other global smart water experts representing utilities from Australia, Canada, Portugal, Brazil, and the US.
Advancing India’s Smart Water Vision on a Global Stage
The selected UAG Members will collaborate to explore concrete utility challenges, uncover regional trends, and identify strategic research priorities. Chosen for their extensive industry contributions, this cohort will support SWAN’s future planning and review global initiatives.
Dr. Manohar’s exclusive inclusion is a direct global recognition of his recent Artificial Intelligence (AI) and data-driven initiatives at BWSSB. His efforts have accelerated Bengaluru’s emergence as a pioneering hub for smart water management, ensuring that India’s unique water challenges and technological solutions are represented at the forefront of the global ecosystem.
Speaking on his appointment, Dr. Ram Prasath Manohar stated “I heartily appreciate and thank the visionary leadership of our Hon’ble Chief Minister Shri. Siddaramaiah and Hon’ble Deputy Chief Minister Shri D K Shivakumar. Aligning perfectly with the Hon DCM’s ‘Brand Bengaluru’ vision, BWSSB has successfully adopted world-class, AI-driven technologies to elevate the city’s infrastructure. I dedicate this milestone to the relentless efforts of the BWSSB technical team and staff, who execute these visionary technological projects daily to serve the citizens of Bengaluru. I personally resonate with the vision of SWAN and look forward to working closely with the UAG to drive practical solutions to the complex water challenges we face today.”
The 5th SWAN Utility Advisory Group Members are:
- Dr. Ram Prasath Manohar, Chairman – Bangalore Water Supply and Sewerage Board (India)
- Zonetta E. English, Strategic Initiatives & Project Director – Louisville MSD (US)
- David Hughes-Owen, CEO – Busselton Water (Australia)
- Joana Araújo, Operations Management Centre Coordinator – Águas e Energia do Porto (Portugal)
- Arash Farajian, Manager Field Innovation Team – Toronto Water (Canada)
- Denis Maia, Chief Customer and Technology Officer – Sabesp (Brazil)
This timely announcement builds anticipation for the SWAN 16th Annual Conference, to be held from June 2-4, 2026, in Tampa, Florida. SWAN UAG Members, including Dr. Manohar, will provide strategic feedback to help shape the Conference agenda, focusing on the theme “Adapting your digital journey”.
About SWAN Forum:
Established in 2010, SWAN is a membership-based non-profit organization that unites water utilities, solution providers, and proactive industry experts. SWAN’s mission is to advance the adoption of “smart,” data-driven solutions for drinking water, wastewater, and stormwater networks worldwide.



