Latest

12 ಮಹಿಳೆಯರ ಮೇಲೆ ಅತ್ಯಾಚಾರ; ಮೆಕ್ಯಾನಿಕಲ್ ಎಂಜಿನಿಯರ್ ಅರೆಸ್ಟ್

ಪ್ರಗತಿವಾಹಿನಿ ಸುದ್ದಿ; ಮುಂಬೈ: ಮ್ಯಾಟ್ರಿಮೋನಿ ವಧು-ವರವೇದಿಕೆ ಸೈಟ್ ಮೂಲಕ ವಂಚಿಸಿ, 12 ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೆಕ್ಯಾನಿಕಲ್ ಇಂಜಿನಿಯರ್ ಓರ್ವನನ್ನು ನವೀ ಮುಂಬೈ ಪೊಲೀಸರು ಮಲಾಡ್ ನಲ್ಲಿ ಬಂಧಿಸಿದ್ದಾರೆ.

ಬಂಧಿತ ಆರೋಪಿ 37 ವರ್ಷದ ಮಹೇಶ್ ಅಲಿಯಾಸ್ ಕರಣ್ ಗುಪ್ತಾ ಎಂದು ಗುರುತಿಸಲಾಗಿದೆ. ಹಲವು ಗೌರವಾನ್ವಿತ ಕಂಪನಿಗಳಲ್ಲಿ ಮೆಕ್ಯಾನಿಕಲ್ ಇಂಜಿನಿಯರ್ ಆಗಿ ಕೆಲಸ ಮಾಡಿದ್ದ ಈತ ಮ್ಯಾಟ್ರಿಮೋನಿ ಸೈಟ್ ನಲ್ಲಿ ಹಲವು ನಕಲಿ ಖಾತೆಗಳನ್ನು ತೆರೆದು ವಿದ್ಯಾವಂತ ಯುವತಿಯರನ್ನು ಟಾರ್ಗೆಟ್ ಮಾಡುತ್ತಿದ್ದ.

Home add -Advt

ಈ ಮೂಲಕ ವಿದ್ಯಾವಂತ ಯುವತಿಯರನ್ನು ಹುಡುಕಿ ಸಂಪರ್ಕಿಸುತ್ತಿದ್ದ ಕರಣ್ ಗುಪ್ತಾ, ಬಳಿಕ ಅವರಿಂದ ಫೋನ್ ನಂಬರ್, ಅಡ್ರೆಸ್ ಪಡೆದು ಪರಿಚಯ ಮಾಡಿಕೊಂಡು ಸಭ್ಯನಂತೆ ವರ್ತಿಸಿ ಯುವತಿಯರನ್ನು ರೆಸ್ಟೋರೆಂಟ್, ಪಬ್ ಗಳಿಗೆ ಕರೆದೊಯ್ದು ಲೈಂಗಿಕ ದೌರ್ಜನ್ಯವೆಸಗುತ್ತಿದ್ದ. ಆರೋಪಿ ಪ್ರತಿಬಾರಿ ತನ್ನ ಫೋನ್ ನಂಬರ್ ಗಳನ್ನು ಬದಲಿಸುತ್ತಿದ್ದನಲ್ಲದೇ, ಓಲಾ, ಊಬರ್ ಕ್ಯಾಬ್ ಗಳನ್ನು ಬುಕ್ ಮಾಡುವಾಗಲೂ ಬೇರೆ ಬೇರೆ ಸಿಮ್ ಗಳನ್ನು ಬಳಸುತ್ತಿದ್ದ. ಮೇಲ್ನೋಟಕ್ಕೆ 12 ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿರುವ ಅನುಮಾನವಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕೊ​ರೋನಾ ವಿರುದ್ಧ  ಹೋರಾಟ​ಕ್ಕೆ​ ಬೆಳಗಾವಿ ಹವ್ಯಕ ಮಂಡ​ಳ​ದ ಸಹಯೋಗ 

Related Articles

Back to top button