National

*ಗೋವಾದಲ್ಲಿ ಭಾರಿ ಮಳೆ: ಅಲರ್ಟ್ ಘೋಷಣೆ*

ಪ್ರಗತಿವಾಹಿನಿ ಸುದ್ದಿ: ಕರ್ನಾಟಕದಲ್ಲಿ ಮುಂಗಾರು ಮಳೆಯ ಅಬ್ಬರ ಸಾಲು ಸಾಲು ಅವಾಂತರ ಸೃಷ್ಟಿಸಿದೆ. ಇದೇ ವೇಳೆ ಪಕ್ಕದ ಗೋವಾ ರಾಜ್ಯದಲ್ಲಿಯೂ ವರುಣಾರ್ಭಟ ಜೋರಾಗಿದ್ದು ಹವಾಮಾನ ಇಲಾಖೆ ಅಲರ್ಟ್ ಘೋಷಿಸಿದೆ.

ಮೇ 29ರವರೆಗೆ ಗೋವಾದಲ್ಲಿ ಮಧ್ಯಮ ಮಳೆಯಾಗಲಿದೆ. ಈ ಹಿನ್ನೆಲೆಯಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಆರೇಂಜ್ ಅಲರ್ಟ್ ಘೋಷಿಸಲಾಗಿದೆ. ಮೇ 30ರಿಂದ ಜೂನ್ 2ರವರೆಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಮುಂಗಾರು ಅಬ್ಬರ ಹಿನ್ನೆಲೆಯಲ್ಲಿ ಗೋವಾದಲ್ಲಿ ಜೂನ್ 1ರಿಂದ 61 ದಿನಗಳ ಕಾಲ ಮೀನುಗಾರಿಕೆಗೆ ನಿಷೇಧ ಹೇರಲಾಗಿದೆ.

Related Articles

Back to top button