ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅಚ್ಚರಿಯ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಇನ್ಮುಂದೆ ತಾವು ಚುನಾವಣಾ ತಂತ್ರಗಾರಿಕೆ ಕಾರ್ಯ ನಿರ್ವಹಿಸುವುದಿಲ್ಲ ಎಂದು ಹೇಳಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಗೆಲುವು ಸಾಧಿಸಿಲು ಪ್ರಮುಖ ಕಾರಣರಾದ ಪ್ರಶಾಂತ್ ಕಿಶೋರ್, ಇದೀಗ ತಮ್ಮ ಚುನಾವಣಾ ತಂತ್ರಗಾರಿಕೆ ಮುಂದುವರೆಸುವುದಿಲ್ಲ ಎಂದಿದ್ದಾರೆ. ಬಂಗಾಳದಲ್ಲಿ ಟಿಎಂಸಿ ಗೆಲುವು ಸಾಧಿಸುತಿದ್ದರೂ ಕೂಡ ಪ್ರಶಾಂತ್ ಕಿಶೋರ್ ತಮ್ಮ ನಿರ್ಧಾರ ಅಚಲ ಎಂದು ಹೇಳಿದ್ದಾರೆ.
ನನಗೆ ಟಿಎಂಸಿ ಗೆಲುವಿನ ಬಗ್ಗೆ ಭರವಸೆಯಿತ್ತು. ಬಿಜೆಪಿ ತಾವು ಬಂಗಾಳದಲ್ಲಿ ಗೆಲ್ಲುತ್ತೇವೆ ಎಂಬ ಹೇಳಿಕೆಗಳನ್ನು ನೀಡುತ್ತಿತ್ತು ಅಷ್ಟೇ. ಪ್ರಧಾನಿ ಮೋದಿ ಜನಪ್ರಿಯರಾಗಿದ್ದ ಮಾತ್ರಕ್ಕೆ ಎಲ್ಲಾ ಚುನಾವಣೆಗಳನ್ನು ಗೆಲ್ಲಲು ಸಾಧ್ಯವಿಲ್ಲ. 40 ರ್ಯಾಲಿ ಆಯೋಜಿಸಿದ್ದಕ್ಕೆ ಮಮತಾ ಬ್ಯಾನರ್ಜಿ ಸೋಲುತ್ತಾರೆ ಎಂದು ಹೇಳಲಾಗುವುದಿಲ್ಲ. ನಾನು ಚುನಾವಣಾ ತಂತ್ರಗಾರಿಕೆ ಕೆಲಸವನ್ನು ಹಲವು ವರ್ಷಗಳಿಂದ ಮಾಡಿದ್ದೇನೆ. ಹಾಗಾಗಿ ಈಗ ಹೊಸದೇನನ್ನಾದರೂ ಮಾಡಬೇಕಿದೆ ಈ ನಿಟ್ಟಿನಲ್ಲಿ ತಂತ್ರಗಾರಿಕೆಯನ್ನು ಮುಂದುವರೆಸಲ್ಲಾ ಎಂದಿದ್ದಾರೆ.
ತಮಿಳುನಾಡಿನಲ್ಲಿ ಡಿಎಂಕೆ ಸಂಭ್ರಮ; ಮೇ 6ಕ್ಕೆ ಹೊಸ ಸರ್ಕಾರ ಅಸ್ಥಿತ್ವಕ್ಕೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ